ನೋಡುಗರ ಮನಸೂರೆಗೊಂಡ ಕಾರ್ಕಳ ಯಕ್ಷರಂಗಾಯಣದ ಎರಡು ತಿರುಗಾಟದ ನಾಟಕಗಳು

0

ಪುತ್ತೂರು: ನೆಹರೂನಗರ ಕಾಡು ಬಳಗದ ವತಿಯಿಂದ ವಿವೇಕಾನಂದ ಇಂಜೀನಿಯರಿಂಗ್ ಕಾಲೇಜಿನ ಮುಂಭಾಗದ ಕಾಡು ಬಯಲು ರಂಗ ಮಂದಿರದಲ್ಲಿ ನಿನಾಸಂನ ನುರಿತ ಕಲಾವಿದರಿಂದ ಕಾರ್ಕಳ ಯಕ್ಷರಂಗಾಯಣದ ಎರಡು ತಿರುಗಾಟದ ನಾಟಕಗಳು ಡಿ.15 ಮತ್ತು 16 ರಂದು ನಡೆಯಿತು.

ಡಿ.15 ರಂದು ಸಂಜೆ ಬಿ.ಎಂ.ವೆಂಕಟರಮಣ ಐತಾಳ ಇವರ ನಿರ್ದೇಶನದ ’ಗುಲಾಮನ ಸ್ವಾತಂತ್ರ್ಯ ಯಾತ್ರೆ’ ಮತ್ತು ಡಿ. 16 ರಂದು ಸಂಜೆ 7 ಶ್ರೀಕಾಂತ್ ಎನ್.ವಿ. ನಿರ್ದೇಶನದ “ಮಹಾತ್ಮರ ಬರುವಿಗಾಗಿ” ನಾಟಕಗಳು ನಡೆಯಿತು.

ಸದಾಭಿರುಚಿಯ ಕಲಾತ್ಮಕ ನಾಟಕಗಳು ನೋಡುಗರ ಮನಸೂರೆಗೊಂಡವು.ಕಾರ್ಯಕ್ರಮದ ಆಯೋಜಕರಾದ ರಾಘವೇಂದ್ರ ಎಚ್.ಎಂ ಪ್ರಾಸ್ತಾವಿಕವಾಗಿ ಮಾತನಾಡಿ ನಾಟಕವನ್ನು ನೋಡಿ ಕಲಾವಿದರನ್ನು ಹಾಗೂ ನಮ್ಮನ್ನು ನಿರಂತರವಾಗಿ ಪ್ರೋತ್ಸಾಹಿಸುತ್ತಿರುವ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

LEAVE A REPLY

Please enter your comment!
Please enter your name here