ವೀರೇಂದ್ರ ಹೆಗ್ಡೆಯವರ ದೂರ ದೃಷ್ಟಿಯ ಯೋಜನೆಗಳು ವಿಶ್ವಕ್ಕೆ ಮಾದರಿ: ಕೃಷ್ಣಯ್ಯ ಬಲ್ಲಾಳ್
ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಮಾಡುವ ವೀರೇಂದ್ರ ಹೆಗ್ಡೆಯವರ ದೂರ ದೃಷ್ಟಿಯ ಯೋಜನೆಗಳು ವಿಶ್ವಕ್ಕೆ ಮಾದರಿಯಾಗಿದೆ. ಈ ಮೂಲಕ ಗ್ರಾಮೀಣ ಪ್ರದೇಶದ ಜನರು ಸ್ವಾವಲಂಬಿಯಾಗಿ ಬದುಕು ಸಾಗಿಸುವಂತೆ ಮಾಡಿ ಸುಬಿಕ್ಷ ಸಮಾಜ ನಿರ್ಮಿಸಿ ದೇಶ ಕಟ್ಟುವ ಕಾರ್ಯ ಮಾಡುತಿದ್ದು, ಅವರ ಯೋಜನೆ ಗಳಿಗೆ ನಾವು ಸಹಕಾರ ನೀಡಬೇಕಾಗಿದ್ದು, ಹೆಗ್ಡೆ ಹಾಗೂ ಧರ್ಮಸ್ಥಳ ಕ್ಷೇತ್ರಕ್ಕೆ ಕಳಂಕ ತರಲು ಪ್ರಯತ್ನಿಸುವವರ ವಿರುದ್ದ ನಾವು ಸೆಟದು ನಿಲ್ಲಬೇಕು ಎಂದು ವಿಟ್ಲ ವಲಯ ಜನಜಾಗ್ರತಿ ವೇದಿಕೆ ಅಧ್ಯಕ್ಷ ಕೃಷ್ಣಯ್ಯ ಬಲ್ಲಾಳ್ ಹೇಳಿದರು.
ಅವರು ಬೊಳಂತಿಮೊಗರು ಹಿ.ಪ್ರಾ. ಶಾಲೆಯಲ್ಲಿ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್(ರಿ.) ವಿಟ್ಲ ಇದರ ಕಲ್ಲಡ್ಕ ವಲಯದ ಸ್ವ- ಸಹಾಯ ಸಂಘಗಳ ಮಾಮೇಶ್ವರ ಒಕ್ಕೂಟದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಮಾಭಿವೃದ್ಧಿ ಯೋಜನೆಯ ಮಾಮೇಶ್ವರ ಒಕ್ಕೂಟದ ಅಧ್ಯಕ್ಷರಾದ ಹರೀಶ್ ಮಾಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಕಳೆದ 20 ವರ್ಷಗಳಿಂದ ಸೇವೆ ಸಲ್ಲಿಸಿರುವ ಒಕ್ಕೂಟದ ಅಧ್ಯಕ್ಷರು ಪದಾಧಿಕಾರಿಗಳನ್ನು ಗುರುತಿಸಿ ಗೌರವಿಸಿ ಪರಿಸರ ಜಾಗೃತಿ ಮೂಡಿಸುವ ದೃಷ್ಟಿಯಿಂದ ಪ್ರತಿಯೊಬ್ಬರಿಗೂ ಸಸಿ ವಿತರಿಸಲಾಯಿತು. ಎಸ್ ಎಸ್ ಎಲ್ ಸಿ ಹೆಚ್ಚು ಅಂಕ ಪಡೆದ ಸದಸ್ಯರ ಮಕ್ಕಳನ್ನು ಗುರುತಿಸಿ ಅಭಿನಂದಿಸಲಾಯಿತು.
ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷ ಕರುಣಾಕರ ಗೌಡ ನಾಯ್ತೋಟು,ಸದಸ್ಯರುಗಳಾದ ಚಂದ್ರಶೇಖರ್ ಗೌಡ ಕೆಲಿಂಜ, ಅಬ್ದುಲ್ ರೆಹಿಮಾನ್, ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ತಾಲೂಕು ಯೋಜನಾಧಿಕಾರಿ ಸುರೇಶ್ ಗೌಡ, ಯೋಜನೆ ಯ ವಲಯ ಅದ್ಯಕ್ಷೆ ತುಳಸಿ, ಮಾಮೇಶ್ವರ ದೇವಸ್ಥಾನದ ವಿಶ್ವಸ್ಥ ಮಂಡಳಿ ಅಧ್ಯಕ್ಷ ವೀರಪ್ಪಗೌಡ, ವಿಟ್ಲ ತಾಲೂಕು ಭಜನಾ ಪರಿಷತ್ ಕೋಶಾಧಿಕಾರಿ ಜಯರಾಮ್ ರೈ, ಊರಿನ ಗುರಿಕಾರ ರಾಗವ ಗೌಡ ಅಡ್ಡಳ್ಳಿ, ಕೆಲಿಂಜ ಒಕ್ಕೂಟದ ಅಧ್ಯಕ್ಷ ದಯಾನಂದ, ಬೋಳಂತೂರು ಒಕ್ಕೂಟದ ಅಧ್ಯಕ್ಷ ಸೀತಾ, ಗೊಳ್ತಾಮಜಲ್ ಸಿ ಒಕ್ಕೂಟದ ಅಧ್ಯಕ್ಷೆ ಮಮತಾ, ಒಕ್ಕೂಟದ ಪದಾಧಿಕಾರಿಗಳಾದ ಪುರಂದರ, ಯಶೋಧ, ಮೀನಾಕ್ಷಿ ರಮೇಶ್ ಗೌಡ,ದಿವಾಕರ ಶೆಟ್ಟಿ, ಗಣೇಶ, ಪುರಂದರ ಗೌಡ, ರಮೀಜಾ ಮೊದಲಾದವರು ಉಪಸ್ಥಿತರಿದ್ದರು.
ಕಲ್ಲಡ್ಕ ವಲಯ ಮೇಲ್ವಿಚಾರಕ ಸುಕರಾಜ್ ಸ್ವಾಗತಿಸಿ, ಸೇವಾ ಪ್ರತಿನಿಧಿ ಯಶೋದಾ ವರದಿ ವಾಚಿಸಿ, ಪುರಂದರ ಗೌಡ ವಂದಿಸಿದರು.ಹರೀಶ್ ಎಸ್. ಪಿ. ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಮೊದಲು ಭಜನಾ ಕಾರ್ಯಕ್ರಮ ನಡೆಯಿತು. ಸಭೆಯ ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.