ಪುತ್ತೂರು: ಶ್ರೀ ದೇವತಾ ಸಮಿತಿ ಪುತ್ತೂರು ಇದರ ಆಶ್ರಯದಲ್ಲಿ ಕಿಲ್ಲೆ ಮೈದಾನದ ಶ್ರೀ ಗಣೇಶೋತ್ಸವದ ಪ್ರಯುಕ್ತ ಆ.31 ರಂದು ಅಪರಾಹ್ನ 2 ಗಂಟೆಗೆ ಸುಸ್ವರ ಮೆಲೋಡೀಸ್ ಉಪ್ಪಿನಂಗಡಿ ಇವರಿಂದ ಭಕ್ತಿ ಭಾವ ಗಾನ ಸಂಭ್ರಮ ನಡೆಯಲಿದೆ. ಬಿ.ರಂಗಯ್ಯ ಬಲ್ಲಾಳ್ ಕೆದಂಬಾಡಿಬೀಡು ಸಾರಥ್ಯ, ವೈಶಾಲಿ ಎಂ.ಕುಂದರ್ ನಿರ್ದೇಶನದಲ್ಲಿ ಮೂಡಿಬರಲಿರುವ ಕಾರ್ಯಕ್ರಮದಲ್ಲಿ ಶಾರ್ವಿ ರೈ ನೀರ್ಪಾಡಿ, ಸ್ಮೃತಿ ಪಲ್ಲತ್ತಾರು, ಸ್ವಪ್ನಾ ಉಪ್ಪಿನಂಗಡಿರವರುಗಳು ಹಿನ್ನೆಲೆ ಗಾಯಕರಾಗಿ ಸಾಥ್ ನೀಡಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.