ಸ್ನೇಹ ಸಿಲ್ಕ್ಸ್ & ರೆಡಿಮೆಡ್ಸ್ ವತಿಯಿಂದ ವಿವಿಧ ಶಾಲೆಗಳಿಗೆ ಸಮವಸ್ತ್ರ, ಧನ ಸಹಾಯ ವಿತರಣೆ

0

ಪುತ್ತೂರು: ಇಲ್ಲಿನ ಬೊಳುವಾರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಮದುವೆ ಜವುಳಿ ಹಾಗೂ ರೆಡಿಮೆಡ್ ಬಟ್ಟೆಗಳ ಶೋರೂಮ್ ಸ್ನೇಹ ಸಿಲ್ಕ್ಸ್, ಕಳೆದ ಹಲವು ವರ್ಷಗಳಿಂದ ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿದೆ. ಅದರಂತೆ, ಈ ಬಾರಿ ವಿವಿಧ ಶಾಲೆಗಳಿಗೆ ಧನ ಸಹಯಾ ಹಾಗೂ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ ಮಾಡಿದೆ.


ಸುಮಾರು 35 ಸಾವಿರ ವೆಚ್ಚದದಲ್ಲಿ ಕಂಬಳ ಬೆಟ್ಟು, ನೆಕ್ಕಿಲಾಡಿ, ಮಾಣಿಲ ಸರಕಾರಿ ಶಾಲೆಗಳ 85 ಮಕ್ಕಳಿಗೆ ಸಮವಸ್ತ್ರಗಳನ್ನು ವಿತರಿಸಿದ್ದು, ಶ್ರೀರಾಮ ಶಾಲೆ, ನಟ್ಟಿಬೈಲು, ಉಪ್ಪಿನಂಗಡಿ ಶಾಲೆಯ ಅನ್ನಬ್ರಹ್ಮ ಯೋಜನೆಗೆ 15 ಸಾವಿರ ರೂ., ಬೀರ‍್ನಹಿತ್ಲು ಶಾಲೆಗೆ ಸ್ಮಾರ್ಟ್ ಸ್ಟಡಿ ಯೋಜನೆಗೆ 10 ಸಾವಿರ ರೂ. ಮತ್ತು ವಿವಿಧ ಸಂಘ ಸಂಸ್ಥೆಗಳ ವಿದ್ಯಾನಿಧಿ ಯೋಜನೆಗೆ 55 ಸಾವಿರ ರೂ. ವಿತರಿಸಿ ಮೆಚ್ಚುಗೆಗೆ ಪಾತ್ರವಾಗಿದೆ.


ಕಳೆದ ಹಲವಾರು ವರ್ಷಗಳಿಂದ ಬೊಳುವಾರಿನಲ್ಲಿ ಕಾರ್ಯನಿರ್ವಹಿಸುತ್ತಾ ಗ್ರಾಹಕರ ಮೆಚ್ಚುಗೆಗೆ ಪಾತ್ರವಾದ ಸ್ನೇಹ ಸಿಲ್ಕ್ಸ್ ತನ್ನ ವ್ಯವಹಾರದ ಒಂದು ಅಂಶವನ್ನು ಸಮಾಜಕ್ಕಾಗಿ ಮುಡಿಪಾಗಿಡುತ್ತಿದೆ. ಶಾಲೆ, ಸಂಘ ಸಂಸ್ಥೆಗಳಿಗೆ, ಬ್ರಹ್ಮಕಲಶೋತ್ಸವದಂತಹ ಧಾರ್ಮಿಕ ಕಾರ್ಯಕ್ರಮ ಸೇರಿದಂತೆ ಅನೇಕ ಸಮಾಜಮುಖಿ ಕಾರ್ಯಗಳಿಗೆ ವಿನಿಯೋಗಿಸುತ್ತಿದ್ದೇವೆ ಎಂದು ಸ್ನೇಹ ಸಿಲ್ಕ್ಸ್‌ನ ಮಾಲಕ ಸತೀಶ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here