ಸವಣೂರು: ವಿಜೃಂಭಣೆಯ 43ನೇ ವರುಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

0

*ಹಿಂದುಗಳ ಏಕತೆಗೆ ಗಣೇಶೋತ್ಸವ ಆಚರಣೆ- ಭಾಗೀರಥಿ ಮುರುಳ್ಯ
*ವಿಶ್ವಕ್ಕೆ ಮಾದರಿಯಾಗಿದೆ- ನವೀನ್ ಭಂಡಾರಿ
*ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು- ರಾಮಕೃಷ್ಣ ರೈ
*ಈ ಬಾರಿಯ ಗಣೇಶೋತ್ಸವಕ್ಕೆ ವಿಶಿಷ್ಠತೆ ಬಂದಿದೆ- ರಾಕೇಶ್ ರೈ ಕೆಡೆಂಜಿ

ಪುತ್ತೂರು: ಹಿಂದು ಸಮಾಜವನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಗಣೇಶೋತ್ಸವ ಆಚರಣೆಗೆ ವಿಶೇಷವಾದ ಅರ್ಥವಿದೆ. ಬಾಲಗಂಗಾಧರನಾಥ್ ತಿಲಕ್‌ರವರು ಪ್ರಾರಂಭಿಸಿದ ಗಣೇಶೋತ್ಸವವನ್ನು ಇಂದು ದೇಶಾದ್ಯಾಂತ ಶ್ರದ್ಧೆ, ಭಕ್ತಿಯಿಂದ ಆಚರಿಸುತ್ತಿದ್ದಾರೆ ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.


ಅವರು ಆ.29ರಂದು ಸವಣೂರು ಶ್ರೀ ವಿನಾಯಕ ಸಭಾಭವನದಲ್ಲಿ ಜರಗಿದ 43ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಸಭಾ ಕಾರ್‍ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ,
ಹಿಂದು ಸಮಾಜವನ್ನು ಒಡೆದು ಅಳುವ ನೀತಿಯ ವಿರುದ್ಧ ಜನಜಾಗೃತಿಯಾಗಬೇಕು. ಸರಕಾರ ಗಣೇಶೋತ್ಸವ ಆಚರಣೆಯಲ್ಲಿ ಸಮಯ ಮತ್ತು ಡಿಜೆ ಬಳಕೆಯ ಮೇಲೆ ಬೀರಿರುವ ಕಾನೂನು ಸರಿಯಲ್ಲ, ಈ ಹಿಂದೆ ನಡೆಯುತ್ತಿದ್ದಂತೆ ಬೆಳಿಗ್ಗೆಯಿಂದ ಮಧ್ಯರಾತ್ರಿ ತನಕ ಸಾಂಸ್ಕೃತಿಕ ಕಾರ್‍ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದರು.

ವಿಶ್ವಕ್ಕೆ ಮಾದರಿಯಾಗಿದೆ- ನವೀನ್ ಭಂಡಾರಿ
ಪುತ್ತೂರು ತಾ.ಪಂ, ಕಾರ್‍ಯನಿರ್ವಹಣಾಧಿಕಾರಿ ನವೀನ್ ಭಂಡಾರಿಯವರು ಮಾತನಾಡಿ ಕರಾವಳಿ ಜಿಲ್ಲೆಯು ಸಂಸ್ಕೃತಿಯ ತೊಟ್ಟಿಲು, ಇಲ್ಲಿನ ಸಂಸ್ಕೃತಿ ಆಚರಣೆಗಳು ವಿಶ್ವಕ್ಕೆ ಮಾದರಿಯಾಗಿದೆ. ಕಾಂತಾರ ಚಲನಚಿತ್ರದ ಮೂಲಕ ನಮ್ಮ ಸಂಸ್ಕೃತಿಯ ಪರಿಚಯ ಜಗತ್ತಿಗೆ ಆಗಿದೆ. ಗಣಪತಿಯ ಆರಾಧನೆಯಿಂದ ನಮ್ಮಲ್ಲಿ ಐಕ್ಯತೆಯ ಭಾವನೆ ಮೂಡುತ್ತದೆ ಎಂದರು.

ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು- ರಾಮಕೃಷ್ಣ ರೈ
ಎಡಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಾಮಕೃಷ್ಣ ರೈ ಮಾಲೆಂಗ್ರಿರವರು ಮಾತನಾಡಿ ಮಕ್ಕಳು ಸಾಮಾಜಿಕ ಜಾಲತಾಣ ಮತ್ತು ದಶ್ಯ ಮಾಧ್ಯಮದಿಂದ ದೂರವಿದ್ದು, ಒಳ್ಳೆಯ ಪುರಾಣ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದರು. ಅಖಂಡ ಭರತದ ಪರಿಕಲ್ಪನೆ ನಮ್ಮಲ್ಲಿ ಸಾಕಾರಮೂಡಲು ಜನಜಾಗೃತಿ ಅವಶ್ಯ ಎಂದರು.

ಈ ಬಾರಿಯ ಗಣೇಶೋತ್ಸವಕ್ಕೆ ವಿಶಿಷ್ಠತೆ ಬಂದಿದೆ- ರಾಕೇಶ್ ರೈ ಕೆಡೆಂಜಿ
ಕಡಬ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ರಾಕೇಶ್ ರೈ ಕೆಡೆಂಜಿ ಸ್ವಾಗತಿಸಿ,ಪ್ರಾಸ್ತಾವಿಕವಾಗಿ ಮಾತನಾಡಿ ಸವಣೂರಿನ ಪ್ರತಿಯೊಂದು ಕಾರ್‍ಯಕ್ರಮಕ್ಕೂ ವಿಶಿಷ್ಟವಾದ ಗೌರವ ಇದೆ. ಸವಣೂರಿನಲ್ಲಿ 43ನೇ ವರ್ಷದ ಗಣೇಶೋತ್ಸವ ಅರ್ಥಪೂರ್ಣವಾಗಿ ನಡೆದಿದೆ. ಸವಣೂರು ಸೀತಾರಾಮ ರೈಯವರ ಗೌರವಾಧ್ಯಕ್ಷತೆಪ್ರಭಾಕರ್ ಶೆಟ್ಟಿ ನಡುಬೈಲುರವರ ಅಧ್ಯಕ್ಷತೆ ಹಾಗೂ ಸತೀಶ್ ಬಲ್ಯಾಯರವರ ಕಾರ್‍ಯದರ್ಶಿತನದಲ್ಲಿ ಈ ಬಾರಿಯ ಗಣೇಶೋತ್ಸವ ಅರ್ಥಪೂರ್ಣ ರೀತಿಯಲ್ಲಿ ನಡೆದಿದೆ. 5 ಲಕ್ಷ ರೂ ವೆಚ್ಚದಲ್ಲಿ ಶಾಶ್ವತವಾದ ಅನ್ನಛತ್ರ ನಿರ್ಮಾಣ, ಸವಣೂರು ಸುಂದರ ರೈಯವರಿಂದ ಗಣಪತಿಗೆ 1.50 ಲಕ್ಷ ರೂ ವೆಚ್ಚದಲ್ಲಿ ಬೆಳ್ಳಿಯ ಕಿರೀಟ ಸಮರ್ಪಣೆಯ ಈ ಬಾರಿಯ ಗಣೇಶೋತ್ಸವಕ್ಕೆ ವಿಶಿಷ್ಠತೆ ಬಂದಿದೆ ಎಂದರು.

ಸವಣೂರು ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಪ್ರಭಾಕರ್ ಶೆಟ್ಟಿ ನಡುಬೈಲು ಅಧ್ಯಕ್ಷತೆ ವಹಿಸಿದ್ದರು. ಸವಣೂರಿನ ಹಿರಿಯ ಉದ್ಯಮಿ ಎನ್ ಸುಂದರ ರೈ ಸವಣೂರು, ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅಶ್ವಿನ್ ಎಲ್.ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು, ಗಣೇಶೋತ್ಸವ ಸಮಿತಿಯ ಉಪಾಧ್ಯಕ್ಷ ಬಾಲಚಂದ್ರ ರೈ ಕರೆಕ್ಕೋಡಿ, ಜೊತೆ ಕಾರ್‍ಯದರ್ಶಿ ಚೇತನ್ ಕುಮಾರ್ ಕೋಡಿಬೈಲು, ಕೋಶಾಧಿಕಾರಿ ರಾಮಕೃಷ್ಣ ಪ್ರಭು, ಗಂಗಾಧರ್ ಪೆರಿಯಡ್ಕ, ಶಾರದಾ ಮಾಲೆತ್ತಾರು, ಗಂಗಾಧರ್ ಸುಣ್ಣಾಜೆ, ಮಮತಾ ಪ್ರಭಾಕರ್ ಶೆಟ್ಟಿ ನಡುಬೈಲುರವರುಗಳು ಅತಿಥಿಗಳನ್ನು ಗೌರವಿಸಿದರು. ವಿವಿಧ ರೀತಿಯಲ್ಲಿ ಸಹಕಾರ ನೀಡಿದ ತಾರಾನಾಥ ಕಾಯರ್ಗ, ಉಮಾಪ್ರಸಾದ್ ರೈ ನಡುಬೈಲು, ರವಿಕುಮಾರ್ ಸಿಂಧೂರ್ ಸ್ಟುಡಿಯೋ, ಪ್ರವೀಣ್ ಭಟ್ ಪುಣ್ಚಪ್ಪಾಡಿ, ದಿವಾಕರ್ ಬಸ್ತಿ, ಸುರೇಶ್ ರೈ ಸೂಡಿಮುಳ್ಳುರವರುಗಳನ್ನು ಗೌರವಿಸಲಾಯಿತು. ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯಕಾರ್‍ಯನಿರ್ವಹಣಾಧಿಕಾರಿ ಚಂದ್ರಶೇಖರ್ ಪಿ ಕಾರ್‍ಯಕ್ರಮ ನಿರೂಪಿಸಿದರು.

ಶ್ರೀ ಗಣೇಶೋತ್ಸವ ಸಮಿತಿಯ ಕಾರ್‍ಯದರ್ಶಿ ಸತೀಶ್ ಬಲ್ಯಾಯ ಕನ್ನಡಕುಮೇರು ವಂದಿಸಿದರು. ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಯ ಉಪನ್ಯಾಸಕಿ ಸುಷ್ಮಾ ಪ್ರಾರ್ಥನೆಗೈದರು. ಸಮಾರಂಭದಲ್ಲಿ ಹಿಂದು ಸಂಘಟನೆಯ ಮುಖಂಡ ಅರುಣ್ ಕುಮಾರ್ ಪುತ್ತಿಲ, ಜಿ,ಪಂ, ಮಾಜಿ ಸದಸ್ಯ ಶಿವಣ್ಣ ಗೌಡ ಇಡ್ಯಾಡಿ, ಸವಣೂರು ಗ್ರಾ.ಪಂ, ಅಧ್ಯಕ್ಷೆ ಸುಂದರಿ ಬಂಬಿಲ, ತಾ.ಪಂ, ಮಾಜಿ ಸದಸ್ಯೆ ವಿಜಯಾ ಈಶ್ವರ ಗೌಡ ಕಾಯರ್ಗ, ಕಡಬ ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷ ಮಹೇಶ್ ಕೆ.ಸವಣೂರು, ಕೆದಂಬಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪ್ರವೀಣ್ ಶೆಟ್ಟಿ ತಿಂಗಳಾಡಿ ಸಹಿತ ಸಾವಿರಾರು ಮಂದಿ ಭಾಗವಹಿಸಿದ್ದರು. ಪೂರ್ವಹ್ನ ಗಣಪತಿ ಹೋಮ, ಭಜನೆ ಕಾರ್‍ಯಕ್ರಮ, ಸವಣೂರು ವಿದ್ಯಾರಶ್ಮಿ ಸಮೂಹ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್‍ಯಕ್ರಮ ನಡೆಯಿತು. ಸಂಜೆ ಸವಣೂರಿನಿಂದ ಮುಖ್ಯ ರಸ್ತೆಯ ಮೂಲಕ ಸರ್ವೆ ತನಕ ಶೋಭಾ ಯಾತ್ರೆ ನಡೆಯಿತು.


ಸಂಭ್ರಮದ ಗಣೇಶೋತ್ಸವ ಆಚರಣೆ
ಸವಣೂರಿನಲ್ಲಿ 43ನೇ ವರುಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಅರ್ಥಪೂರ್ಣ ರೀತಿಯಲ್ಲಿ ನಡೆದಿದೆ, ಹಿರಿಯ ಉದ್ಯಮಿ ಸುಂದರ ರೈಯವರು ಗಣಪತಿ ದೇವರಿಗೆ 1.5೦ ಲಕ್ಷ ರೂ, ವೆಚ್ದಲ್ಲಿ ಬೆಳ್ಳಿಕಿರೀಟವನ್ನು ಸಮರ್ಪಣೆ ಮಾಡಿದ್ದಾರೆ. ದಾನಿಗಳ ಸಹಕಾರದಿಂದ ರೂ. 5 ಲಕ್ಷ ವೆಚ್ಚದಲ್ಲಿ ಅನ್ನಪೂರ್ಣ ಅನ್ನಛತ್ರವನ್ನು ನಿರ್ಮಿಸಲಾಗಿದೆ. ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ಸವಣೂರು ಸೀತಾರಾಮ ರೈ, ಕಾರ್‍ಯದರ್ಶಿ ಸತೀಶ್ ಬಲ್ಯಾಯ ಹಾಗೂ ಎಲ್ಲಾ ಪದಾಧಿಕಾರಿಗಳಿಗೆ, ಸದಸ್ಯರುಗಳಿಗೆ, ಸಹಕರಿಸಿದ ಸರ್ವರಿಗೂ ಹೃದಯ ಪೂರ್ವಕ ಕೃತಜ್ಞತೆಗಳೊಂದಿಗೆ ಮುಂದೆಯೂ ತಮ್ಮ ಸಹಕಾರ ಅಗತ್ಯವಿದೆ.
ಪ್ರಭಾಕರ್ ಶೆಟ್ಟಿ ನಡುಬೈಲು
ಅಧ್ಯಕ್ಷರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಸವಣೂರು

LEAVE A REPLY

Please enter your comment!
Please enter your name here