ಇಂದಿನ ಕಾರ್ಯಕ್ರಮ (30-08-2025)

0

ಪುತ್ತೂರು ಸರ್ಕಾರಿ ನೌಕರರ ಸಭಾಭವನ, ಮೇರಿ ದೇವಾಸಿಯಾ ಸಭಾಂಗಣದಲ್ಲಿ ಅಪರಾಹ್ನ ೧೨.೧೦ಕ್ಕೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಪುತ್ತೂರು ಶಾಖೆಯ ವಾರ್ಷಿಕ ಮಹಾಸಭೆ, ಪ್ರತಿಭಾ ಪುರಸ್ಕಾರ, ನಿವೃತ್ತ ಪದಾಧಿಕಾರಿಗಳಿಗೆ ಬೀಳ್ಕೊಡುಗೆ
ಪುತ್ತೂರು ಲಯನ್ಸ್ ಸೇವಾ ಮಂದಿರದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಪುತ್ತೂರು ಮಾನಸ ಗಂಗಾ ಸಹಕಾರ ಸಂಘದ ವಾರ್ಷಿಕ ಮಹಾಸಭೆ
ಪುತ್ತೂರು ವಿವೇಕಾನಂದ ಕಾಲೇಜಿನ ಸುವರ್ಣ ಮಹೋತ್ಸವ ಸಭಾಭವನದಲ್ಲಿ ಅಂತರ್ ಕಾಲೇಜು ಮಟ್ಟದ ಮಾನ್‌ಸೂನ್ ಚೆಸ್ ಪಂದ್ಯಾಟ
ಬೊಳ್ವಾರು ವಿಶ್ವಕರ್ಮ ಸಭಾಭವನದಲ್ಲಿ ಚಿನ್ನ, ಬೆಳ್ಳಿ ತೂಕ ಮಾಡುವ ಇಲೆಕ್ಟ್ರಾನಿಕ್ ಯಂತ್ರಕ್ಕೆ ಮೊಹರು, ಸೀಲ್ ಹಾಕುವ ಕಾರ್ಯಕ್ರಮ
ಅಡ್ಡಹೊಳೆ ಹಿ.ಪ್ರಾ. ಶಾಲೆಯಲ್ಲಿ ಬೆಳಿಗ್ಗೆ ೧೧ಕ್ಕೆ ಶಿರಾಡಿ ಗ್ರಾ.ಪಂನ ಗ್ರಾಮಸಭೆ
ಪಾಣಾಜೆ ಗ್ರಾ.ಪಂ ಸಭಾಭವನದಲ್ಲಿ ಬೆಳಿಗ್ಗೆ ೧೧ಕ್ಕೆ ಸಾಮಾಜಿಕ ಪರಿಶೋಧನೆಯ ವಿಶೇಷ ಗ್ರಾಮಸಭೆ
ವಿಟ್ಲ ಪಟ್ಟಣ ಪಂಚಾಯತ್‌ನ ಸಭಾಂಗಣದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಸಾಮಾನ್ಯ ಸಭೆ
ಸವಣೂರು ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಕಡಬ ತಾ| ಮಟ್ಟದ ದಸರಾ ಕ್ರೀಡಾಕೂಟ
ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸೋಣ ಶನಿವಾರದ ಬಲಿವಾಡು ಕೂಟ
ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ, ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಸೋಣ ಶನಿವಾರ ಆಚರಣೆ, ಬೆಳಿಗ್ಗೆ ೮.೩೦ಕ್ಕೆ ಅಶ್ವತ್ಥ ಪೂಜೆ, ೯.೩೦ಕ್ಕೆ ನಾಗತಂಬಿಲ, ೧೦ರಿಂದ ಸತ್ಯನಾರಾಯಣ ಪೂಜೆ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ
ಮಂಗಳೂರು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಮಹಾಸಭೆ, ಪ್ರಶಸ್ತಿ ಪ್ರದಾನ
ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಶ್ರಾವಣ ಸೋಣ ಶನಿವಾರ ಬಲಿವಾಡು ಕೂಟ, ಮಹಾಪೂಜೆ, ಅನ್ನಸಂತರ್ಪಣೆ
ಗಣೇಶೋತ್ಸವ
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ ದೇವಳದ ವಠಾರದಲ್ಲಿ ಬೆಳಿಗ್ಗೆ ೧೦ರಿಂದ ಭಜನೆ, ಮಧ್ಯಾಹ್ನ ೧೨ರಿಂದ ಗಣಪತಿ ಹವನ, ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ೫ರಿಂದ ಶೋಭಾಯಾತ್ರೆ, ಶ್ರೀ ಗಣೇಶ ವಿಗ್ರಹ ಜಲಸ್ಥಂಭನ
ಪುತ್ತೂರು ಕಿಲ್ಲೆ ಮೈದಾನದಲ್ಲಿ ಶ್ರೀ ದೇವತಾ ಸಮಿತಿಯಿಂದ ಮಧ್ಯಾಹ್ನ ೨ರಿಂದ ಭಕ್ತಿಗೀತೆ, ೩ರಿಂದ ಭರತನಾಟ್ಯ, ಸಂಜೆ ೪.೩೦ರಿಂದ ಸ್ಯಾಕ್ಸೋಪೋನ್, ೫.೩೦ರಿಂದ ಯಕ್ಷಗಾನ-ಸಹದೇವ ದಿಗ್ವಿಜಯ, ರಾತ್ರಿ ೮ರಿಂದ ಭರತನಾಟ್ಯ
ಪುರುಷರಕಟ್ಟೆಯ ಶ್ರೀ ಮಹಾಲಿಂಗೇಶ್ವರ ದೇವರ ಕಟ್ಟೆಯ ಮುಂಭಾಗದಲ್ಲಿ ಬೆಳಿಗ್ಗೆ ಗಣಹೋಮ, ಭಜನೆ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ರಾಮ ಶ್ರೀರಾಮ ಯಕ್ಷಗಾನ ಬಯಲಾಟ, ಸಂಜೆ ಶೋಭಾಯಾತ್ರೆ
ಜೋಡುಮಾರ್ಗ ಶ್ರೀ ರಕ್ತೇಶ್ವರೀ ದೇವಿ ಸನ್ನಿಧಿಯ ವಠಾರದ ಸಭಾ ಮಂಟಪದಲ್ಲಿ ಬಿ.ಸಿ. ರೋಡು ಹಿಂದೂ ಧಾರ್ಮಿಕ ಸೇವಾ ಸಮಿತಿಯಿಂದ ೪೬ನೇ ವರ್ಷದ ಶ್ರೀ ಗಣೇಶೋತ್ಸವ
ಬಂಟ್ವಾಳ ಬೈಪಾಸ್, ಜಕ್ರಿಬೆಟ್ಟುವಿನಲ್ಲಿ ೨೨ನೇ ವರ್ಷದ ಶ್ರೀ ಗಣೇಶೋತ್ಸವ

LEAVE A REPLY

Please enter your comment!
Please enter your name here