ಪುತ್ತೂರು: ಮಹಾಲಿಂಗೇಶ್ವರ ವಠಾರದಲ್ಲಿ ತುಳು ಅಪ್ಪೆ ಕೂಟದಿಂದ ಸಾರ್ವಜನಿಕ ಗಣೇಶೋತ್ಸವ ಪ್ರಯುಕ್ತ ಆ.29ರಂದು ʼಪಾರ್ಥಸಾರಥ್ಯʼ ತಾಳಮದ್ದಳೆ ನಡೆಯಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಮಲ್ಲಿಕಾ ಎ ಶೆಟ್ಟಿ ಸಿದ್ದಕಟ್ಟೆ, ಚೆಂಡೆಯಲ್ಲಿ ವಿಷ್ಣು ಶರಣ್ ಬನಾರಿ, ಮದ್ದಳೆಯಲ್ಲಿ ಟಿ.ಟಿ ಗೋಪಾಲಕೃಷ್ಣ ಭಟ್ ತೆಂಕಬೈಲ್ ಸಹಕರಿಸಿದರು. ಅರ್ಥದಾರಿಗಳಾಗಿ ಕೌರವನ ಪಾತ್ರದಲ್ಲಿ ಹರಿಣಾಕ್ಷಿ ಜೆ ಶೆಟ್ಟಿ, ಶ್ರೀ ಕೃಷ್ಣನಾಗಿ ವಿದ್ಯಾಶ್ರೀ ತುಳುನಾಡ್, ಬಲರಾಮನಾಗಿ ಶುಭಗಣೇಶ್, ಧರ್ಮರಾಯನಾಗಿ ಶಂಕರಿ ಪಟ್ಟೆ, ಅರ್ಜುನನಾಗಿ ಭಾರತೀ ರೈ ಕೌಡಿಚಾರ್ ಮತ್ತು ಶತನಂದರ ಪಾತ್ರದಲ್ಲಿ ಪ್ರೇಮಲತಾ ರಾವ್ ಸಹಕರಿಸಿದರು. ಹರಿಣಾಕ್ಷಿ ಶೆಟ್ಟಿ ಸ್ವಾಗತಿಸಿ,ವಿದ್ಯಾಶ್ರೀ ವಂದಿಸಿದರು. ದೇವಸ್ಥಾನದ ಗಣೇಶೋತ್ಸವ ಸಮಿತಿ ಪದಾಧಿಕಾರಿಗಳು ಪ್ರಸಾದ ನೀಡಿ ಕಲಾವಿದರನ್ನು ಗೌರವಿಸಿದರು.