ಪುತ್ತೂರು: ಕಡಬದ ಶ್ರೀ ಗಣೇಶ್ ಬಿಲ್ಡಿಂಗ್ ನಲ್ಲಿ ಅರ್ಪಿತಾ ಅನಿಲ್ ರೈ ಯವರ ಪ್ರಥಮ ಮಹಿಳಾ ನೂತನ ವಕೀಲರ ಕಚೇರಿ (ಮಾಲೇಶ್ವರ ಲಾ ಚೇಂಬರ್ )ನ್ನು ಆ.29ರಂದು ಉದ್ಘಾಟಿಸಲಾಯಿತು.

ಪುತ್ತೂರು ವಕೀಲರ ಸಂಘದ ಅಧ್ಯಕ್ಷರಾದ ಜಗನ್ನಾಥ ರೈ ಪುತ್ತೂರು ದೀಪಾ ಬೆಳಗಿಸುವುದರ ಮೂಲಕ ಕಛೇರಿಯನ್ನು ಉದ್ಘಾಟಿಸಿ ಮಾತನಾಡಿ, ಕಡಬದಲ್ಲಿ ಯುವ ವಕೀಲೆಯಾಗಿ ಅರ್ಪಿತಾ ಅನಿಲ್ ರೈ ವೃತ್ತಿ ಜೀವನ ಪ್ರಾರಂಭಿಸಿರುವುದು ಹರ್ಷದ ಸಂಗತಿಯಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಕಾನೂನು ಸೇವೆಗಳನ್ನು ಸಮರ್ಪಿತ ಮನೋಭಾವದಿಂದ ನೀಡುವುದು ಸಮಾಜಕ್ಕೆ ಅತ್ಯಂತ ಅಗತ್ಯ ಎಂದು ಶುಭ ಹಾರೈಸಿದರು. ಕಡಬದ ಹಿರಿಯ ನ್ಯಾಯವಾದಿ ಮನೋಹರ ಸಬಳೂರು, ಪುತ್ತೂರು ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ಪುಲಾಸ್ತ್ಯ ರೈ, ಕಟ್ಟಡ ಮಾಲಕರಾದ ಸುಂದರ ಗೌಡ ಮಂಡೇಕರ ಅತಿಥಿಗಳಾಗಿ ಭಾಗವಹಿಸಿ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಕಮಲ ಬೇಬಿ ರೈ ಮಾಲೇಶ್ವರ , ಸರಸ್ವತಿ ರಾಧಕೃಷ್ಣ ಬೆಳ್ಳಾರೆ, ವೇಣುಗೋಪಾಲ್ ರೈ ಪಿಜಕ್ಕಳ, ಅಶ್ವಿನಿ ಸತೀಶ್ ರೈ ಮಡಿಕೇರಿ, ಪುನೀತ್, ಅಕ್ಷಯ್, ಅಜಯ್ ಮೈಪಾಜೆ ಉಪಸ್ಥಿತರಿದ್ದರು.