ಪುತ್ತೂರು: ತಾಲೂಕಿನ ಪಿಎಂಶ್ರೀ ಶಾಲೆ ವೀರಮಂಗಲ ಇಲ್ಲಿಗೆ ಪಿಎಂ ಕಛೇರಿಯಿಂದ IAS ಅಧಿಕಾರಿ ಚಂದ್ರಮೋಹನ್ ಠಾಕೋರ್ ಸಮಗ್ರ ಕರ್ನಾಟಕ ರಾಜ್ಯ ಯೋಜನಾ ನಿರ್ದೇಶಕರಾದ IAS ಅಧಿಕಾರಿ ವಿದ್ಯಾಕುಮಾರಿ, ದ.ಕ ಜಿಲ್ಲಾ ಉಪನಿರ್ದೇಶಕ ಶಶಿಧರ್ ಜಿ ಎಸ್, ಕ್ಷೇತ್ರಶಿಕ್ಷಣಾಧಿಕಾರಿ ಲೋಕೇಶ್ ಎಸ್ ಆರ್, ಎಪಿಸಿ ವಿದ್ಯಾಕುಮಾರಿ,ಅಕ್ಷರದಾಸೋಹ ಸಹ ನಿರ್ದೇಶಕ ವಿಷ್ಣುಪ್ರಸಾದ್, ಸಮನ್ವಯಾಧಿಕಾರಿ ನವೀನ್ ಸ್ಟೀಫನ್ ವೇಗಸ್, ಶಿಕ್ಷಣ ಸಂಯೋಜಕ ಹರಿಪ್ರಸಾದ್, ಎಸ್ ಎಸ್ ಕೆ ಕಛೇರಿಯ ಉಷಾ ಬಂಗೇರ, ನರಿಮೊಗರು ಸಿ ಆರ್ ಪಿ ಪರಮೇಶ್ವರಿ, ಇಂದು ಪಿಎಂಶ್ರೀ ಕಾರ್ಯ ಚಟುವಟಿಕೆ ವೀಕ್ಷಿಸಲು ಆಗಮಿಸಿದ್ದರು. ಮುಖ್ಯಗುರು ತಾರಾನಾಥ ಪಿ, ಎಸ್ ಡಿಎಂಸಿ ಅಧ್ಯಕ್ಷ ರವಿಚಂದ್ರ, ಶಿಕ್ಷಕರಾದ ಹರಿಣಾಕ್ಷಿ,ಶೋಭಾ ,ಶ್ರೀಲತಾ, ಕವಿತಾ,ಹೇಮಾವತಿ, ಶಿಲ್ಪರಾಣಿ,ಸೌಮ್ಯ ಸರ್ವರನ್ನು ಸ್ವಾಗತಿಸಿದರು. ಪಿಎಂಶ್ರೀ ಚಟುವಟಿಕೆಗಳನ್ನು ವೀಕ್ಷಿಸಿ ಶಾಲೆಯ ಅಭಿವೃದ್ಧಿ ಕಂಡು ಪ್ರಶಂಶೆ ವ್ಯಕ್ತ ಪಡಿಸಿದರು.
