ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳ ಆಯ್ಕೆ

0

ಪುತ್ತೂರು: ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ರಕ್ಷಕ-ಶಿಕ್ಷಕ ಸಂಘದ ಸಭೆಯು ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ.ಶಿವಪ್ರಕಾಶ್.ಎಂ, ಅವರ ಅಧ್ಯಕ್ಷತೆಯಲ್ಲಿ ಆ.19ರಂದು ನಡೆಯಿತು.

ಈ ಸಭೆಯಲ್ಲಿ 2025-26ನೇ ಸಾಲಿಗೆ ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳ ಆಯ್ಕೆಯು ಶಾಲಾ ಸಂಚಾಲಕರಾದ ರವಿ ನಾರಾಯಣ.ಎಂ ಹಾಗೂ ನಿಕಟಪೂರ್ವ ಉಪಾಧ್ಯಕ್ಷರಾದ ಸುರೇಶ್ ಮತ್ತು ಕಾರ್ಯಕಾರಿ ಸಮಿತಿಯ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ನಡೆಯಿತು.

ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾಗಿ ಭಾಸ್ಕರ್ ಬಲ್ಯಾಯ, ಉಪಾಧ್ಯಕ್ಷರುಗಳಾಗಿ ಉಮಾಶ್ರೀ.ಡಿ, ಕಿರಣ್ ಕುಮಾರ್ ಮುಂಗ್ಲಿಮನೆ, ಮಹೇಶ್,ಕೆ ಮತ್ತು ಸಹನಾ.ಪಿ.ಎಸ್ ಆಯ್ಕೆಯಾದರು. ಈ ನೂತನ ಅಧ್ಯಕ್ಷರಿಗೆ ಹಾಗೂ ಅವರ ತಂಡಕ್ಕೆ ಜವಾಬ್ದಾರಿಯನ್ನು ಹಸ್ತಾಂತರಿಸಿದ ಶಾಲಾ ಅಧ್ಯಕ್ಷರು ಮತ್ತು ಸಂಚಾಲಕರು ಯಶಸ್ಸನ್ನು ಹಾರೈಸಿದರು.

ನೂತನ ಅಧ್ಯಕ್ಷರು ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಮಾತೃಸಂಸ್ಥೆಯಾದ ವಿವೇಕಾನಂದ ವಿದ್ಯಾವರ್ಧಕ ಸಂಘದ ವಿಚಾರಧಾರೆಯಂತೆ ಶ್ರಮಿಸುವುದಾಗಿ ತಿಳಿಸಿ, ಸಂಬಂಧಿತ ಎಲ್ಲರ ಸಹಕಾರವನ್ನು ಯಾಚಿಸಿದರು. ಈ ಸಂದರ್ಭದಲ್ಲಿ  SCIENCE OLYMPIAD FOUNDATION- ಇದರಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಕು.ಚಿನ್ಮಯಿ.ಎಲ್ ಇವರನ್ನು ರೂ.5000/- ನಗದು ಮತ್ತು ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here