ಅಧ್ಯಕ್ಷ: ಸಮಿತ್ ಪಿ, ಕಾರ್ಯದರ್ಶಿ: ದೀಕ್ಷಿತ್ ಇರ್ದೆ, ಕೋಶಾಧಿಕಾರಿ:ಭವಿತ್
ಪುತ್ತೂರು: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಪುತ್ತೂರು ಘಟಕದ 2025-26ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಚುನಾವಣಾಧಿಕಾರಿಯಾದ ಯುವವಾಹಿನಿ ಮಾಜಿ ಅಧ್ಯಕ್ಷ ಜಯರಾಮ್ ಬಿ.ಎನ್ ರವರ ನೇತೃತ್ವದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸಭಾಭವನದಲ್ಲಿ ಡಿ.14 ರಂದು ನಡೆಯಿತು.
ನೂತನ ಅಧ್ಯಕ್ಷರಾಗಿ ಸಮಿತ್ ಪಿ, ಪ್ರಧಾನ ಕಾರ್ಯದರ್ಶಿಯಾಗಿ ದೀಕ್ಷಿತ್ ಇರ್ದೆ, ಕೋಶಾಧಿಕಾರಿಯಾಗಿ ಭವಿತ್ ರವರು ಆಯ್ಕೆಯಾದರು. ಉಳಿದಂತೆ ಪ್ರಥಮ ಉಪಾಧ್ಯಕ್ಷರಾಗಿ ಅವಿನಾಶ್ ಹಾರಾಡಿ, ದ್ವಿತೀಯ ಉಪಾಧ್ಯಕ್ಷರಾಗಿ ಶರತ್ ಸಾಲ್ಯಾನ್ ದೋಳ, ಜೊತೆ ಕಾರ್ಯದರ್ಶಿಯಾಗಿ ಗಣೇಶ್ ಸುವರ್ಣ, ವ್ಯಕ್ತಿತ್ವ ವಿಕಸನ ನಿರ್ದೇಶಕರಾಗಿ ಕಿರಣ್, ಕ್ರೀಡಾ ನಿರ್ದೇಶಕರಾಗಿ ಮೋಹನ್ ಶಿಬರ, ಆರೋಗ್ಯ ನಿರ್ದೇಶಕರಾಗಿ ದಾಮೋದರ್ ಸುವರ್ಣ, ಸಮಾಜಸೇವಾ ನಿರ್ದೇಶಕರಾಗಿ ಶಿವಪ್ರಸಾದ್ ಕುಂಬ್ರ, ಕಲೆ ಮತ್ತು ಸಾಹಿತ್ಯ ನಿರ್ದೇಶಕರಾಗಿ ರವಿ ಕಲ್ಕಾರ್, ಸಾಂಸ್ಕೃತಿಕ ನಿರ್ದೇಶಕರಾಗಿ ಗೌತಮ್ ಪಿ, ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕರಾಗಿ ಲೋಹಿತ್ ಕಲ್ಕಾರ್, ನಾರಾಯಣ ಗುರುಗಳ ತತ್ವಾದರ್ಶಗಳ ಪ್ರಚಾರ ಹಾಗೂ ಅನುಷ್ಠಾನ ನಿರ್ದೇಶಕರಾಗಿ ದೀಕ್ಷಿತ್ ಮುಕ್ವೆ, ವಿದ್ಯಾರ್ಥಿಗಳ ಸಂಘಟನಾ ನಿರ್ದೇಶಕರಾಗಿ ರಕ್ಷಾ ಅಂಚನ್, ಪ್ರಚಾರ ನಿರ್ದೇಶಕರಾಗಿ ಪವನ್, ಮಹಿಳಾ ಸಂಘಟನಾ ನಿರ್ದೇಶಕರಾಗಿ ದೀಕ್ಷಾ, ವಿದ್ಯಾನಿಧಿ ನಿರ್ದೇಶಕರಾಗಿ ಯತೀಶ್ ಬಲ್ನಾಡು, ಸಂಘಟನಾ ಕಾರ್ಯದರ್ಶಿಗಳಾಗಿ ಮನೀಷ್, ಪೂಜಾಶ್ರೀ ಕೆ, ಲಿಂಗಪ್ಪ ಪೂಜಾರಿ ನೈತಾಡಿ, ಆಂತರಿಕ ಲೆಕ್ಕ ಪರಿಶೋಧಕರಾಗಿ ಪ್ರಿಯಾಶ್ರೀ ಎಚ್.ರವರು ಆಯ್ಕೆಯಾಗಿದ್ದಾರೆ.