ಆರ್ಲಪದವು: ಗೌರಿ ಗಣೇಶೋತ್ಸವ, ಶೋಭಾಯಾತ್ರೆ

0


ಪಾಣಾಜೆ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಹಾಗೂ ಗೌರಿ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ಆರ್ಲಪದವು ಶ್ರೀ ಸುಬ್ರಹ್ಮಣ್ಯೇಶ್ವರ ಭಜನಾ ಮಂದಿರದಲ್ಲಿ ನಡೆದ ಎರಡು ದಿನಗಳ ಗೌರಿ ಗಣೇಶೋತ್ಸವವು ಆ.27 ರಂದು ವೈಭವದ ಶೋಭಾಯಾತ್ರೆಯೊಂದಿಗೆ ಸಂಪನ್ನಗೊಂಡಿತು. ಎರಡನೇ ದಿನದ ಕಾರ್ಯಕ್ರಮದಲ್ಲಿ ವಿಶೇಷವಾಗಿ ಮಹಾಗಣಪತಿಗೆ ಬೆಳ್ಳಿಕಿರೀಟ ಸಮರ್ಪಿಸಲಾಯಿತು.


ಆ.27 ರಂದು ಬೆಳಿಗ್ಗೆ ಶ್ರೀ ಗಣೇಶ ವಿಗ್ರಹದ ಪ್ರತಿಷ್ಟೆ, ಭಜನಾ ಸಂಕೀರ್ತನೆ, ʻಗಣೇಶೋದ್ಭವʼ ಯಕ್ಷಗಾನ ತಾಳಮದ್ದಳೆ ನಡೆದು ಧಾರ್ಮಿಕ ಸಭಾ ಕಾರ್ಯಕ್ರಮ ಜರಗಿತು. ಅಪರಾಹ್ನ ಮೂಕಾಂಬಿಕಾ ಕಲ್ಚರಲ್‌ ಅಕಾಡೆಮಿಯವರಿಂದ ನೃತ್ಯಾರ್ಪಣೆ ಪ್ರದರ್ಶನಗೊಂಡಿತು. ಸಂಜೆ ಶ್ರೀ ಗೌರಿ ಗಣೇಶ ಶೋಭಾಯಾತ್ರೆ ನಡೆದು ಕೊಂದಲ್ಕಾನದಲ್ಲಿ ಜಲಸ್ತಂಭನ ಮಹೋತ್ಸವ ನಡೆಯಿತು.


ಧಾರ್ಮಿಕ ಸಭಾ ಕಾರ್ಯಕ್ರಮ
ಎರಡನೇ ದಿನದ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೌರಿ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಪಿ.ಜಿ. ಶಂಕರನಾರಾಯಣ ಭಟ್‌ ವಹಿಸಿದ್ದರು. ಪ್ರಗತಿಪರ ಕೃಷಿಕ ವಾಸುಪೂಜಾರಿ ಗುಂಡ್ಯಡ್ಕ ಉದ್ಘಾಟಿಸಿದರು. ನಿವೃತ್ತ ಮುಖ್ಯಶಿಕ್ಷಕ ಪಿಲಿಂಗಲ್ಲು ಕೃಷ್ಣ ಭಟ್‌ ಧಾರ್ಮಿಕ ಪ್ರವಚನ ನೀಡಿದರು.

ಚಿತ್ರ: ಜಿ.ಎಸ್‌. ಹರೀಶ್‌ ಆರ್ಲಪದವು

ಮುಖ್ಯ ಅತಿಥಿಗಳಾಗಿ ಶಾಸಕ ಅಶೋಕ್ ಕುಮಾರ್ ರೈ, ಸುಳ್ಯ ಕೆವಿಜಿ ಆಯುರ್ವೇದ ಮೆಡಿಕಲ್‌ ಕಾಲೇಜಿನ ಪ್ರಾಂಶುಪಾಲ ಡಾ| ಲೀಲಾಧರ ಡಿ.ವಿ., ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ| ವರದರಾಜ ಚಂದ್ರಗಿರಿ, ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ ಸ್ಥಾಪಕ ಅರುಣ್‌ ಕುಮಾರ್‌ ಪುತ್ತಿಲ, ಎಸ್‌ಸಿಡಿಸಿಸಿ ಬ್ಯಾಂಕ್‌ ನಿರ್ದೇಶಕ ಶಶಿಕುಮಾರ್‌ ರೈ ಬಾಲ್ಯೊಟ್ಟು, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಚೆಲ್ಯಡ್ಕ, ಬೆಟ್ಟಂಪಾಡಿ ಗ್ರಾ.ಪಂ. ಸದಸ್ಯ ನವೀನ್‌ ರೈ ಚೆಲ್ಯಡ್ಕ, ಪ್ರಗತಿಪರ ಕೃಷಿಕ ಆನಂದ ರೈ ಸೂರಂಬೈಲು, ಬೆಟ್ಟಂಪಾಡಿ ಮೆಸ್ಕಾಂ ಜೆ.ಇ. ಪುತ್ತು ಜಿ., ನ್ಯಾಯವಾದಿ ರಾಜೇಶ್‌ ಮಣಿಯಾಣಿ,‌ ಜಗನ್ನಾಥ ರೈ ಕಡಮ್ಮಾಜೆ ಶುಭ ಹಾರೈಸಿದರು. ಮಾಜಿ ಶಾಸಕ ಸಂಜೀವ ಮಠಂದೂರು ಭೇಟಿ ನೀಡಿದರು.


ಸನ್ಮಾನ
ಇದೇ ವೇಳೆ ಶ್ರೀ ಮಹಾಗಣಪತಿಗೆ ಬೆಳ್ಳಿಕಿರೀಟ ಸಮರ್ಪಣೆ ಮಾಡಿದ ಕೆವಿಜಿ ಆಯುರ್ವೇದ ಮೆಡಿಕಲ್‌ ಕಾಲೇಜಿನ ಪ್ರಾಂಶುಪಾಲ ಡಾ| ಲೀಲಾಧರ ಡಿ.ವಿ., 13 ವರ್ಷಗಳಿಂದ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿರುವ ಬಾಬು ರೈ ಕೋಟೆ, 8 ವರ್ಷಗಳಿಂದ ಗೌರವಾಧ್ಯಕ್ಷರಾಗಿರುವ ಬಾಲಕೃಷ್ಣ ಪೂಜಾರಿ ಉಡ್ಡಂಗಳ, ಮಾಜಿ ಅಧ್ಯಕ್ಷರುಗಳಿಗೆ ಸನ್ಮಾನ ನಡೆಯಿತು. ಸ್ಥಾಪಕ ಸಮಿತಿಯ ಸದಸ್ಯರುಗಳಿಗೆ ಗೌರವಾರ್ಪಣೆ ನಡೆಸಲಾಯಿತು.


ಗೌರಿ ಗಣೇಶೋತ್ಸವ ಸಮಿತಿಯ ಕಾರ್ಯದರ್ಶಿ ಪ್ರೀತಮ್‌ ರೈ ಸ್ವಾಗತಿಸಿ, ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಗಿರೀಶ್‌ ಗೋಲ್ವಲ್ಕರ್‌ ವಂದಿಸಿದರು. ರವಿಶೋಭಾ ಮತ್ತು ಧನ್ವಿ ರೈ ಕೋಟೆ ಕಾರ್ಯಕ್ರಮ ನಿರೂಪಿಸಿದರು.


ಶೋಭಾಯಾತ್ರೆ
ಸಂಜೆ ಗೌರಿ ಮತ್ತು ಗಣೇಶನ ಶೋಭಾಯಾತ್ರೆಯು ಆರ್ಲಪದವು ಪೇಟೆಯಾಗಿ ಸಾಗಿ ಕೊಂದಲ್ಕಾನದಲ್ಲಿ ಜಲಸ್ತಂಭನ ನಡೆಯಿತು. ಶೋಭಾಯಾತ್ರೆಯಲ್ಲಿ ಕುಣಿತ ಭಜನೆ, ಸಿಡಿಮದ್ದು, ಬ್ಯಾಂಡ್‌ವಾದ್ಯ ಆಕರ್ಷಣೆಯಾಗಿತ್ತು.

LEAVE A REPLY

Please enter your comment!
Please enter your name here