‘ನನ್ನನ್ನು ಕೆಣಕಲು ಬರಬೇಡಿ, ಬಂದ್ರೆ ನಿಮ್ಮ ಜಾತಕ ಜಾಲಾಡ್ತೇನೆ’ – ಅಶೋಕ್ ಕುಮಾರ್ ರೈ
ಪುತ್ತೂರು: ಅಕ್ರಮ ಸಕ್ರಮ ಫೈಲ್ ಒಬ್ಬ ಶಾಸಕನ ಕಚೇರಿಗೆ ಹೋಗಿ ಅಲ್ಲಿಂದ ತಹಶೀಲ್ದಾರ್ ಕಚೇರಿಗೆ ಹೋಗಿ ಮಂಜೂರು ಮಾಡುವ ಪದ್ಧತಿ ಹಿಂದಿನ ಎಲ್ಲಾ ಶಾಸಕರ ಅವಧಿಯಲ್ಲಿ ಇರಲಿಲ್ಲ. ಇವತ್ತು ಅದು ನಡೆಯುತ್ತಿದೆ. ಹಾಗಾಗಿ ಭ್ರಷ್ಟಾಚಾರ ಶಾಸಕರ ಕಚೇರಿಯಿಂದಲೇ ಆರಂಭಗೊಳ್ಳುತ್ತಿದೆ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಪತ್ರಿಕಾಗೋಷ್ಟಿಯಲ್ಲಿ ಆರೋಪ ಮಾಡಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಅಶೋಕ್ ರೈ ಅವರು ಪ್ರತಿಕ್ರಿಯಿಸಿದ್ದಾರೆ.
‘ಮಾಜಿ ಶಾಸಕರು ಅಕ್ರಮ ಸಕ್ರಮಕ್ಕೆ ಎಕರೆಗೆ ಎರಡು, ಎರಡೂವರೆ ಲಕ್ಷ ತೆಗೆದುಕೊಳ್ಳುತ್ತಿದ್ದರು. ಅವರಿಗೆ ನಿಜವಾಗಿ ಮರ್ಯಾದೆ ಇದ್ದರೆ ಮಹಾಲಿಂಗೇಶ್ವರ ದೇವರ ನಡೆಯಲ್ಲಿ ಬಂದು ಪ್ರಾರ್ಥನೆ ಮಾಡಬೇಕು. ದುಡ್ಡು ಕೊಟ್ಟ 47 ಮಂದಿಯ ಮಾಹಿತಿ ನನ್ನ ಬಳಿ ಇದೆ. ಓರ್ವ ಹೆಂಗಸು ಹಸು ಮಾರಿ ಇವರಿಗೆ 75 ಸಾವಿರ ಕೊಟ್ಟಿದ್ದಾರೆ. ನನ್ನನ್ನು ಕೆಣಕಲು ಬರಬೇಡಿ, ಬಂದ್ರೆ ನಿಮ್ಮ ಜಾತಕ ಜಾಲಾಡ್ತೇನೆ. ಮರ್ಯಾದೆ ಇದ್ದರೆ ಇಂತಹ ಮಾತನ್ನೆಲ್ಲಾ ಹೇಳಬಾರದು. ಇವರು ಹೇಳಿದರು ಎಂದು ಅಕ್ರಮ ಸಕ್ರಮ ಮಾಡುವುದು ಬಿಡುವುದಿಲ್ಲ, ಮೂರು ವರ್ಷ ಸುಮ್ಮನೇ ಮನೆಯಲ್ಲಿ ಹೋಗಿ ಕೂತುಕೊಳ್ಳಿ, ಪೇಪರ್ ನಲ್ಲಿ ಫೋಟೋ ಬರ್ಬೇಕು ಅಂತಾ ಸುಮ್ಮನೇ ಮಾತಾಡ್ಬೇಡಿ ಎಂದು ಹೇಳಿದರು.