ಪುತ್ತೂರು:ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅವರ ಸಹಿ ಫೋರ್ಜರಿ ಆಗಿದೆ ಎಂಬ ವಿಚಾರ ನನ್ನ ಗಮನಕ್ಕೆ ಬಂದ ಕೂಡಲೇ ಪೊಲೀಸ್ ದೂರು ನೀಡಲು ನಾನು ಸದಸ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದೆ.9/11 ರದ್ದು ಮಾಡಲು ಸೂಚಿಸಿದ್ದೇನೆ.ಅವರೇ ದೂರು ನೀಡಬೇಕು ಹೊರತು ಬೇರೆ ಯಾರೂ ಒತ್ತಾಯ ಮಾಡುವಂತಿಲ್ಲ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
34 ನೆಕ್ಕಿಲಾಡಿ ಗ್ರಾಪಂ ವ್ಯಾಪ್ತಿಯಲ್ಲಿ 6 ಸೆಂಟ್ಸ್ ಮತ್ತು 10 ಸೆಂಟ್ಸ್‌ನ 2 ಜಾಗಗಳಿಗೆ 9/11 ಕೊಟ್ಟಿರುವುದನ್ನು ರದ್ದುಮಾಡಲಾಗಿದೆ.ನಗರ ಯೋಜನಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯವರ ಸಹಿಯನ್ನು ಫೋರ್ಜರಿ ಮಾಡಿ ಪುತ್ತೂರು ಪ್ರಾಧಿಕಾರದ ಕಚೇರಿಯಿಂದ ಏಕ ವಿನ್ಯಾಸ ನಕ್ಷೆ ನೀಡಲಾಗಿತ್ತು.ಇದರ ಆಧಾರದಲ್ಲಿ ಗ್ರಾಪಂ 9/11 ನೀಡಿದೆ. ಇದಾದ ಬಳಿಕ ಜಾಗದ ಮಾಲೀಕರು ತಮ್ಮ ಜಮೀನನ್ನು ಮಾರಾಟ ಮಾಡಿದ್ದಾರೆ.ಈ ಪ್ರಕ್ರಿಯೆ ಮುಗಿದ ಬಳಿಕ ಸಹಿ ಫೋರ್ಜರಿ ಪ್ರಕರಣ ಬೆಳಕಿಗೆ ಬಂದಿದ್ದು, ಇದನ್ನು ಸ್ವತಃ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಗ್ರಾಪಂ ಅಭಿವೃದ್ಧಿ ಅಧಿಕಾರಿಗೆ ಬರೆದ ಪತ್ರದಲ್ಲಿ ತಿಳಿಸಿ, 9/11 ರದ್ದುಪಡಿಸಲು ಸೂಚಿಸಿದ್ದರು.ಈ ಬಗ್ಗೆ 2 ದಿನಗಳ ಹಿಂದೆ ಪತ್ರಿಕಾಗೋಷ್ಟಿ ಮಾಡಿದ್ದ ಕಾಂಗ್ರೆಸ್ ಮುಖಂಡ ಎಚ್.ಮಹಮ್ಮದ್ ಆಲಿ,ತನ್ನ ಸಹಿ ಫೋರ್ಜರಿಯಾಗಿರುವುದರಿಂದ 9/11 ರದ್ದು ಮಾಡಿ ಎಂದು ಪತ್ರದಲ್ಲಿ ಸೂಚಿಸಿದ ಸದಸ್ಯ ನಗರ ಯೋಜನಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯವರು, ತನ್ನ ಸಹಿ ಫೋರ್ಜರಿ ಮಾಡಿದವರ ವಿರುದ್ಧ ಯಾಕೆ ಪೊಲೀಸ್ ದೂರು ನೀಡಿಲ್ಲ ಎಂದು ಪ್ರಶ್ನಿಸಿದ್ದರು.ಸಹಿ ಮಾತ್ರವಲ್ಲದೆ ಮೊಹರು ಮತ್ತು ಲೆಟರ್‌ಹೆಡ್ ಕೂಡ ಫೋರ್ಜರಿ ಆಗಿದೆ ಎಂದು ಆಪಾದಿಸಿದ್ದ ಕುರಿತು ಪತ್ರಕರ್ತರು ಗಮನ ಸೆಳೆದಾಗ ಉತ್ತರಿಸಿದ ಶಾಸಕರು, ವಿಚಾರ ನನ್ನ ಗಮನಕ್ಕೆ ಬಂದ ಕೂಡಲೆ ಪೊಲೀಸ್ ದೂರು ನೀಡಲು ನಾನು ಸದಸ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದೆ.9/11 ರದ್ದು ಮಾಡಲು ಸೂಚಿಸಿದ್ದೇನೆ ಎಂದವರು ನನಗೆ ಉತ್ತರ ನೀಡಿದ್ದರು.ಅವರು ಪೊಲೀಸ್ ದೂರು ನೀಡಿರಬಹುದು ಎಂದು ನಾನು ಅಂದುಕೊಂಡಿದ್ದೆ.ಹಾಗೆಂದು ಪೊಲೀಸ್ ದೂರು ನೀಡಿ ಎಂದು ನಾನು ಒತ್ತಾಯ ಮಾಡಲಾಗದು.ಒಬ್ಬ ಅಧಿಕಾರಿಯಾಗಿ ಅವರಿಗೆ ತಮ್ಮ ಸಹಿ ಫೋರ್ಜರಿಯಾಗಿದೆ ಎಂದು ಗೊತ್ತಾದಾಗ ಅದರ ವಿರುದ್ಧ ಅವರೇ ದೂರು ನೀಡಬೇಕೇ ಹೊರತು ಬೇರೆ ಯಾರೂ ಒತ್ತಾಯ ಮಾಡುವಂತಿಲ್ಲ ಎಂದರು.