ನಿಡ್ಪಳ್ಳಿ; ಮುರಳಿ ಅಣ್ಣ ಅಭಿಮಾನಿ ಬಳಗ ನಿಡ್ಪಳ್ಳಿ ಮತ್ತು ಪುತ್ತೂರು ರೋಟರಿ ಕ್ಯಾಂಪ್ಕೊ ಬ್ಲಡ್ ಸೆಂಟರ್ ಇವರ ಸಹಯೋಗದೊಂದಿಗೆ ರಕ್ತದಾನ ಶಿಬಿರ ಆ.31 ರಂದು ಪಾಣಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಭವನ ನಿಡ್ಪಳ್ಳಿ ಇಲ್ಲಿ ನಡೆಯಿತು.
ನಿಡ್ಪಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ವೆಂಕಟ್ರಮಣ ಬೋರ್ಕರ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.ರೋಟರಿ ಕ್ಯಾಂಪ್ಕೊ ಬ್ಲಡ್ ಬ್ಯಾಂಕ್ ನ ಟೆಕ್ನಿಕಲ್ ಸೂಪರ್ ವೈಸರ್ ಸಜನಿ ಮಾರ್ಟಿಸ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ರಕ್ತದಾನದ ಮಹತ್ವದ ಬಗ್ಗೆ ತಿಳಿಸಿದರು.
ಪಾಣಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪದ್ಮನಾಭ ಬೋರ್ಕರ್. ಬಿ ಮಾತನಾಡಿ, ಅಭಿಮಾನಿ ಬಳಗದ ಇಂತಹ ಆದರ್ಶ ಕಾರ್ಯಕ್ರಮದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ನಿಡ್ಪಳ್ಳಿ ಗ್ರಾಮ ಪಂಚಾಯತ್ ಸದಸ್ಯರಾದ ಅವಿನಾಶ್ ರೈ ಕುಡ್ಚಿಲ, ಸತೀಶ್ ಶೆಟ್ಟಿ ನೆಲ್ಲಿಕಟ್ಟೆ, ಸಿ.ಎ ಬ್ಯಾಂಕ್ ಸಿಬ್ಬಂದಿ ಎಂ.ಕೆ.ಕುಮಾರ್ ಮುಂಡೂರು ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರೀ ಶಾಂತದುರ್ಗಾ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ನಾಗೇಶ ಗೌಡ ಪುಳಿತ್ತಡಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಮುರಳೀಕೃಷ್ಣ ಭಟ್ ರವರ ಸವಿನೆನಪಿಗಾಗಿ ಅವರ ಆಶಯದಂತೆ ಒಂದು ಮ್ಯಾಟ್ ಅಂಕಣ ಕಬಡ್ಡಿ ಪಂದ್ಯಾವಳಿ ನಡೆಸಿದ್ದರು.ಈ ಅಭಿಮಾನಿ ಬಳಗ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಇನ್ನಷ್ಟುಇಂತಹ ಉತ್ತಮ ಸಮಾಜ ಮುಖಿ ಕಾರ್ಯಗಳನ್ನು ನಡೆಸಲಿ ಎಂದು ಶುಭ ಹಾರೈಸಿದರು.

ಸಮೀಕ್ಷಾ ಕೊಪ್ಪಳ ಪ್ರಾರ್ಥಿಸಿ, ಶರತ್ ಕುಮಾರ್ ಪುಳಿತ್ತಡಿ ಕಾರ್ಯಕ್ರಮ ನಿರೂಪಿಸಿದರು.ಅಭಿಮಾನಿ ಬಳಗದ ಸದಸ್ಯರು, ಪಾಣಾಜೆ ಕೃಷಿ ಪತ್ತಿನ ಸಹಕಾರ ಸಂಘದ ನಿಡ್ಪಳ್ಳಿ ಶಾಖೆ ಕಾರ್ಯಕ್ರಮಕ್ಕೆ ಸಹಕಾರ ನೀಡಿದರು.
ಶಿಬಿರದಲ್ಲಿ ಸುಮಾರು 33 ಮಂದಿ ಭಾಗವಹಿಸಿ ರಕ್ತದಾನ ಮಾಡಿದರು.ರಕ್ತದಾನ ಮಾಡಿದವರಿಗೆ ಸಂಘಟಕರು ಹಣ್ಣು ಹಂಪಲು ಜೊತೆಗೆ ಚಾಕಲೇಟ್ ಕಿಟ್ ನೀಡಿ ವಿಶೇಷವಾಗಿ ಸತ್ಕರಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.