ಪುತ್ತೂರು: ಗುರಿತಲುಪಲು ಸಿಗುವ ಅವಕಾಶಗಳನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳುವುದನ್ನು ಅರಿತುಕೊಳ್ಳಬೇಕು.ಗುರಿಯ ಕಡೆಗೆ ಇಡುವ ಪ್ರತಿಯೊಂದು ಹೆಜ್ಜೆಯೂ ಆ ದೂರವನ್ನು ಒಂದು ಹೆಜ್ಜೆಯಷ್ಟು ಕಡಿಮೆ ಮಾಡುತ್ತದೆ.ಸಿಗುವ ಸಣ್ಣ ಪುಟ್ಟ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳುವ ಕುಶಲತೆಯನ್ನು ಮೈಗೂಡಿಸಿಕೊಳ್ಳಬೇಕು.ಸಾವಿರ ಮೈಲಿಯ ಪ್ರಯಾಣವೂ ಮೊದಲ ಹೆಜ್ಜೆಯಿಂದಲೇ ಪ್ರಾರಂಭವಾಗುತ್ತದೆ.ಇಂತಹ ಅವಕಾಶಗಳು ಯಶಸ್ಸನ್ನು ತಲುಪುವ ಏಣಿ ಇದ್ದಂತೆ.ವಿದ್ಯಾರ್ಥಿಗಳಿಗೆ ಹೊಸ ಜಗತ್ತಿನ ನಿಯಮಗಳ ಪರಿಚಯ ಮಾಡುವ ಜೊತೆಗೆ ಸೂಕ್ತ ಜ್ಞಾನ ನೀಡುವುದು ಅವಶ್ಯಕವಾಗಿದೆ.ಇಂದಿನ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಪರಿವರ್ತನೆತಂದು ಕಲಿಕೆಯಲ್ಲಿ ಆಸಕ್ತಿ ಮೂಡಿಸವಂತೆ ಮಾಡುತ್ತದೆ.ಸಮಾಜಕ್ಕೆ ಒಬ್ಬ ಪರಿಣಿತ ಶಕ್ತಿಯಾಗಿ ಬದುಕು ಸಾಗಿಸಬೇಕು. ಎಂದು ಶ್ರೀಕೃಷ್ಣ ವಿದ್ಯಾಸಂಸ್ಥೆಗಳು ಪಟ್ಟೆ ಇದರ ಸಂಚಾಲಕ ವಿಘ್ನೇಶ್ ಹಿರಣ್ಯ ಹೇಳಿದರು.
ಸೆ.1 ರಂದು ನರೇಂದ್ರ ಪ.ಪೂ.ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ಕಾಮರ್ಸ್ ಅಸೋಸಿಯೇಷನ್ ಮತ್ತು ವಿದ್ಯಾರ್ಥಿಗಳಉದ್ಯಮ ಕ್ಷೇತ್ರದ ಕೌಶಲ್ಯ ಮತ್ತು ಜ್ಞಾನವನ್ನು ಸುಧಾರಿಸುವ ರಿಟೈಲ್ ಬ್ಯುಸಿನೆಸ್ ತರಬೇತಿ ಕಾರ‍್ಯಕ್ರಮ ವ್ಯವಹಾರ ಇದರ ಸಹಯೋಗದೊಂದಿಗೆ ನಡೆದ ಪ್ರೌಢ ಶಾಲಾ ವಿದ್ಯಾರ್ಥಿಗಳ ಪ್ರತಿಭಾ ಉತ್ಸವ ಬಿಝ್‌ಬ್ಲೂಮ್ ಫೆಸ್ಟ್ 2025 ಕಾರ‍್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂತಹ ಕಾರ‍್ಯಕ್ರಮಗಳು ವಿದ್ಯಾರ್ಥಿಗಳನ್ನು ರಚನಾತ್ಮಕ ಕಾರ‍್ಯಗಳಲ್ಲಿ ಪ್ರೇರೇಪಿಸುತ್ತದೆ.ಅಂಕಗಳೊಂದಿಗೆ ವಿವಿಧ ಕೌಶಲಗಳನ್ನು ಬೆಳೆಸಿಕೊಳ್ಳಬೇಕಾದ ಅನಿವಾರ್ಯತೆಇದೆ. ಸ್ಪರ್ಧಾತ್ಮಕಯುಗದಲ್ಲಿ ವಿದ್ಯಾರ್ಥಿಗಳು ಜ್ಞಾನ ಸಂಪನ್ನರಾಗಿ ಭವಿಷ್ಯ ರೂಪಿಸಿಕೊಂಡು ಸಮಾಜಕ್ಕೆ ಹಾಗೂ ದೇಶಕ್ಕೆ ಕೊಡುಗೆ ನೀಡಬೇಕು ಎಂದು ಹೇಳಿದರು.
ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ವಿವೇಕಾನಂದ ಸೆಂಟ್ರಲ್ ಸ್ಕೂಲ್ (ಸಿಬಿಎಸ್‌ಇ) ಪುತ್ತೂರು ಇದರ ಸಂಚಾಲಕರಾದ ಭರತ್ ಪೈ ಇವರು ಮಾತನಾಡುತ್ತಾ ವ್ಯಕ್ತಿ ಬದುಕನ್ನು ರೂಪಿಸುವುದರಲ್ಲಿ ಶಿಕ್ಷಣಕ್ಕೆ ಪ್ರಮುಖ ಪಾತ್ರವಿದೆ. ಆಧುನಿಕ ಹಾಗೂ ಸ್ಪರ್ಧಾತ್ಮಕ ಜಗತ್ತಿಗೆ ವಿದ್ಯಾರ್ಥಿಗಳನ್ನು ಅಣಿಗೊಳಿಸಿಕೊಳ್ಳಲು ಶಿಕ್ಷಣದ ಜೊತೆಗೆ ಇಂತಹ ಕಾರ‍್ಯಕ್ರಮದ ಅವಶ್ಯಕತೆಯಿದೆ.ಶಿಕ್ಷಣ ಕ್ಷೇತ್ರದಲ್ಲಿ ಅಪರಿಮಿತ ಅವಕಾಶಗಳಿದ್ದು ಅವುಗಳನ್ನು ಸಮರ್ಪಕವಾಗಿ ಬಳಸಿಕೊಂಡು ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು.ಸಮಾಜದ ಆಸ್ತಿಗಳಾಗಿ ಹೊರಹೊಮ್ಮಬೇಕಾಗಿದೆ. ಎಂದು ಹೇಳಿದರು.
ಕಾರ್ಯಕ್ರಮದಲ್ಲಿಕಾಲೇಜಿನ ಪ್ರಾಂಶುಪಾಲರಾದ ಪ್ರಸಾದ್ ಶ್ಯಾನಭಾಗ್ ರವರು ಸ್ವಾಗತಿಸಿ, ಮಾತನಾಡುತ್ತಾ, ವಿದ್ಯಾರ್ಥಿಯ ವ್ಯಕ್ತಿತ್ವ ವಿಕಸನಕ್ಕಾಗಿ ತನ್ನ ಜೀವನದಲ್ಲಿ ಏಕಾಗ್ರತೆ , ಬದ್ಧತೆ,ಗುರಿಗಳನ್ನು ಅಳವಡಿಸಿಕೊಳ್ಳಬೇಕು.ಅದಕ್ಕಾಗಿ ಇಂತಹ ಕಾರ‍್ಯಕ್ರಮಗಳು ತುಂಬಾ ಸಹಕಾರಿ. ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳುವ ಮೊದಲು ಆ ಬಗೆಗೆ ನಿರ್ಧಿಷ್ಟವಾದ ಪೂರ್ವ ಸಿದ್ಧತೆಯನ್ನು ಮಾಡಿಕೊಳ್ಳಬೇಕು.ಗುರಿಯ ದಿಕ್ಕಿನಲ್ಲಿ ಶ್ರಮವಹಿಸಿದರೆ ಮಾತ್ರ ಯಶಸ್ಸು ನಮ್ಮದಾಗುತ್ತದೆ ಎಂದು ಹೇಳಿದರು.
ಕಾಲೇಜಿನಲ್ಲಿರುವ ವ್ಯವಹಾರ ಕ್ಲಬ್ ಇದರ ವಿಶೇಷತೆಗಳ ಬಗ್ಗೆ ಉಪನ್ಯಾಸಕಿ ರುಚಿತ ಕೃಷ್ಣ ತಿಳಿಸುತ್ತಾ ವ್ಯವಹಾರ ಎಂಬ ರಿಟೈಲ್ ಬ್ಯುಸಿನೆಸ್ ತರಬೇತಿಕಾರ‍್ಯಕ್ರಮದ ಮೂಲಕ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳ ಕೌಶಲ್ಯ ಮತ್ತುಜ್ಞಾನವನ್ನು ಸುಧಾರಿಸಲು ಅವಕಾಶಗಳನ್ನು ನೀಡಲಾಗುತ್ತಿದೆ.ಈತರಬೇತಿಯಲ್ಲಿ ವಿವಿಧತಜ್ಞರಿಂದ ವಿಶೇಷ ಉಪನ್ಯಾಸಗಳು, ವ್ಯಾಪಾರ ಮೇಳಗಳಲ್ಲಿ ಭಾಗವಹಿಸುವ ಅವಕಾಶ, ಸೇಲ್ಸ್, ಅಕೌಂಟಿಂಗ್, ಮಾರ್ಕೆಟಿಂಗ್ ಮುಂತಾದ ವ್ಯಾಪಾರ ಆವರಣಗಳ ಭೇಟಿ, ಸಾಫ್ಟ್ ಸ್ಕಿಲ್ ತರಬೇತಿ ಮತ್ತು ಇನ್ನಿತರ ಕೌಶಲ್ಯಾಧಾರಿತ ತರಬೇತಿಗಳ ಮೂಲಕ ವಾಣಿಜ್ಯ ಕ್ಷೇತ್ರದ ಉದ್ಯಮ ಜ್ಞಾನವನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ.ಈ ವ್ಯವಹಾರ ವಿಭಾಗದ ಸಹಯೋಗದಲ್ಲಿ ಈ ಬಿಝ್‌ಬ್ಲೂಮ್ ಫೆಸ್ಟ್ 2025 ಕಾರ‍್ಯಕ್ರಮವನ್ನು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದೆ. ಎಂದು ಹೇಳಿದರು.
ವಿದ್ಯಾರ್ಥಿಗಳ ನೈಜ ಜಗತ್ತಿನ ಕೌಶಲ್ಯ ಮತ್ತು ಜ್ಞಾನವನ್ನು ಸಂಯೋಜಿಸುವ ಮತ್ತು ನಾವೀನ್ಯತೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ವಿನ್ಯಾಸಗೊಳಿಸಿದ ಈ ಕಾರ‍್ಯಕ್ರಮದಲ್ಲಿ ಒಟ್ಟು 14 ವಿವಿಧ ಮಾದರಿಯ ಸ್ಪರ್ಧೆಗಳಲ್ಲಿ ವಿವಿಧ ಶಾಲೆಗಳ 300 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿರುತ್ತಾರೆ. ವೇದಿಕೆಯಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕರಾದ ಸಂತೋಷ ಬಿ., ಸದಸ್ಯರಾದ ಉಮೇಶ್ ನಾಯಕ್ ಇವರು ಉಪಸ್ಥಿತರಿದ್ದರು.
ಕಾರ‍್ಯಕ್ರಮದಲ್ಲಿ ಉಪನ್ಯಾಸಕಿ ಮಮತಾ ವಂದಿಸಿದರು. ಕಾರ‍್ಯಕ್ರಮವನ್ನು ಉಪನ್ಯಾಸಕಿ ಅಪೂರ್ವ ನಿರೂಪಿಸಿದರು.