ಪುತ್ತೂರು: ಕಿಲ್ಲೆಮೈದಾನದ 68ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದಲ್ಲಿ ದೇವತಾ ಸಮಿತಿ ರಿ ಪುತ್ತೂರು ವೇದಿಕೆಯಲ್ಲಿ ಪುತ್ತೂರು ತಾಲೂಕು ಯುವಜನ ಇಲಾಖೆ ಪ್ರಶಸ್ತಿ ವಿಜೇತ ಹಾಗೂ ಶ್ರೀಕೃಷ್ಣ ಯುವಕ ಮಂಡಲ (ರಿ) ಸಿಟಿಗುಡ್ಡೆ ಪುತ್ತೂರು ಹೊಸ ಬೆಳಕು ಬಡವರ ಆಶಾಕಿರಣ ಆರ್ಲಪದವು (ರಿ) ಪುತ್ತೂರು ರಕ್ತ ಸಂಜೀವಿನಿ ಬ್ಲಡ್ ಗ್ರೂಪ್ ಪುತ್ತೂರು, ಜೈ ವೀರಕೇಸರಿ ವಾಟ್ಸಪ್ ಗ್ರೂಪ್ ದರ್ಬೆ ಪುತ್ತೂರು ಇದರ ವತಿಯಿಂದ ಅನೇಕ ಕಲೆಗಳನ್ನು ತನ್ನಲ್ಲಿ ಬೆಳೆಸಿಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿ ಹೆಸರು ಮಾಡಿರುವಂತಹ ಬಹುಮುಖ ಕಲಾ ಪ್ರತಿಭೆಗಳಾದ ಜ್ಞಾನ ರೈ ಕುರಿಯ , ವೈಷ್ಣವಿ ಯಂ.ಆರ್ ಪರ್ಲಡ್ಕ, ಐಶ್ವರ್ಯ ರೈ ನೆಲ್ಯಾಡಿ,ಲಾಲಿತ್ಯ ಬೇಲೂರುರನ್ನು ಸನ್ಮಾನಿಸಿ ಗೌರವಿಸಲಾಯಿತು.