ಕಾಣಿಯೂರು: ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆ (ರಿ) ನರಿಮೊಗರುನಲ್ಲಿ ನಡೆದ ಪುತ್ತೂರು ತಾಲೂಕು ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಹಲವು ಪ್ರಥಮ ಸ್ಥಾನಗಳನ್ನು ಪಡೆಯುವ ಮೂಲಕ ಕಾಣಿಯೂರಿನ ಪ್ರಗತಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಪ್ರೌಢ ಶಾಲಾ ವಿಭಾಗದ 17 ರ ವಯೋಮಾನದ ಬಾಲಕರ ಸಾಂಪ್ರದಾಯಿಕ ಯೋಗಾಸನ, ಆರ್ಟಿಸ್ಟಿಕ್ ಸಿಂಗಲ್ ಯೋಗಾಸನ ಸ್ಪರ್ಧೆಯಲ್ಲಿ ಮೋನಿಶ್ ಟಿ (9 ನೇ) ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಹಾಗೆಯೇ ಜಶ್ವಿತ್ (8ನೇ) ಮತ್ತು ಹರ್ಷ ಯು ಪಿ (9ನೇ) ಆರ್ಟಿಸ್ಟಿಕ್ ಪೇರ್ ನಲ್ಲಿ ತೃತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.
17ರ ವಯೋಮಾನದ ಬಾಲಕಿಯರ ಸಾಂಪ್ರದಾಯಿಕ ಯೋಗಾಸನದಲ್ಲಿ ಶ್ರೀಮಾ ಕೆ ಎಚ್ (9ನೇ) ಪ್ರಥಮ ಸ್ಥಾನವನ್ನು ಪಡೆಯುವ ಮೂಲಕ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ರಿದಮಿಕ ಪೇರ್ ಯೋಗಾಸನದಲ್ಲಿ ಅಸ್ಮಿ ಕೆ ಪಿ (8ನೇ) ಮತ್ತು ಜಾನ್ವಿ ಎಂ (8ನೇ) ಪ್ರಥಮ, ಆರ್ಟಿಸ್ಟಿಕ್ ಪೇರ್ ನಲ್ಲಿ ಪ್ರಣಮ್ಯ ಕೆ (10ನೇ), ಅವನಿ ಎಚ್ ಆರ್ (8ನೇ) ಪ್ರಥಮ ಸ್ಥಾನವನ್ನು ಪಡೆಯುವ ಮೂಲಕ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಆರ್ಟಿಸ್ಟಿಕ್ ಸಿಂಗಲ್ ನಲ್ಲಿ ಸಾನ್ವಿಕ ಎಚ್ (9ನೇ) ಉತ್ತಮ ಪ್ರದರ್ಶನವನ್ನು ನೀಡುವ ಮೂಲಕ ದ್ವಿತೀಯ ಸ್ಥಾನ ಪಡೆದಿರುತ್ತಾರೆ.
ಪ್ರಾಥಮಿಕ ವಿಭಾಗದ 14ರ ವಯೋಮಾನದ ಬಾಲಕಿಯರ ಆರ್ಟಿಸ್ಟಿಕ್ ಪೇರ್ ಯೋಗಾಸನದಲ್ಲಿ ವನ್ಶಿ ಕೆ ಎಂ (7ನೇ), ಲಿಶಾ (7ನೇ) ಪ್ರಥಮ, ರಿದಮಿಕ್ ಪೇರ್ ಯೋಗಾಸನದಲ್ಲಿ ಸಾಕ್ಷಿ ಜೆ (7 ನೇ), ವೈದೃತಿ (6ನೇ) ಪ್ರಥಮ ಸ್ಥಾನವನ್ನು ಪಡೆಯುವ ಮೂಲಕ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.ಬಾಲಕರ ವಿಭಾಗದಲ್ಲಿ ಸಾಂಪ್ರದಾಯಿಕ ಯೋಗಾಸನದಲ್ಲಿ ಧನುಷ್ ಕೆ (7 ನೇ) ಉತ್ತಮ ಪ್ರದರ್ಶನವನ್ನು ನೀಡುವ ಮೂಲಕ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಇವರಿಗೆ ಸಂಸ್ಥೆಯ ಯೋಗ ಶಿಕ್ಷಕಿ ಶಶಿಕಲಾ ಕೆ ತರಬೇತು ನೀಡಿರುತ್ತಾರೆ. ದೈಹಿಕ ಶಿಕ್ಷಣ ಶಿಕ್ಷಕ ಸಂತೋಷ್ ಕೆ , ಶಿಕ್ಷಕರಾದ ಅಶೋಕ್ ಕುಮಾರ್ ಪಿ, ಸುಚೇತ ಸಹಕರಿಸಿದರು.