ಧನ್ವಿ ಸುಧೀರ್, ಸ್ಮೃತಿ ಅಕಾಡೆಮಿಗೇ ಫಸ್ಟ್
ಒಟ್ಟು 52 ಡಿಸ್ಟಿಂಕ್ಷನ್, 4 ಪ್ರಥಮ ಸ್ಥಾನ ತೇರ್ಗಡೆ
ಪುತ್ತೂರು: ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ 2024-25 ನೇ ಶೈಕ್ಷಣಿಕ ಸಾಲಿನಲ್ಲಿ ನಡೆಸಿದ ಭರತನಾಟ್ಯ ಜೂನಿಯರ್ ಹಾಗೂ ಸೀನಿಯರ್ ಪರೀಕ್ಷೆಯಲ್ಲಿ ಪುತ್ತೂರಿನ ನೃತ್ಯೋಪಾಸನಾ ಕಲಾ ಅಕಾಡೆಮಿ ಶೇ.100 ಫಲಿತಾಂಶ ದಾಖಲಿಸಿದೆ.
ಈ ಎರಡು ವಿಭಾಗಗಳ ಒಟ್ಟು 57 ಮಂದಿ ವಿದ್ಯಾರ್ಥಿಗಳು ಅಕಾಡೆಮಿ ಮುಖ್ಯಸ್ಥೆ, ನೃತ್ಯಗುರು ವಿದುಷಿ ಶಾಲಿನಿ ಆತ್ಮಭೂಷಣ್ ಮಾರ್ಗದರ್ಶನದಲ್ಲಿ ಪರೀಕ್ಷೆಗೆ ಹಾಜರಾಗಿದ್ದರು.
ಸೀನಿಯರ್ ವಿಭಾಗದ ಪರೀಕ್ಷೆಗೆ ಒಟ್ಟು ಎಂಟು ವಿದ್ಯಾರ್ಥಿಗಳು ಹಾಜರಾಗಿದ್ದು, ಈ ಪೈಕಿ ಏಳು ಮಂದಿ ಡಿಸ್ಟಿಂಕ್ಷನ್ ಹಾಗೂ ಓರ್ವ ವಿದ್ಯಾರ್ಥಿನಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ
ಹೊಂದುವ ಮೂಲಕ ಶೇಕಡಾ 100 ಫಲಿತಾಂಶ ದಾಖಲಿಸಿದೆ. ಧನ್ವಿ ಸುಧೀರ್ ಶೇ. 89 ಫಲಿತಾಂಶದೊಂದಿಗೆ ಅಕಾಡೆಮಿಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.

ಆತ್ಮ- ಶೇ.80, ಭೃತಿ- ಶೇ.75.4, ನಮೃತಾ-ಶೇ. 71.4, ಅಪೇಕ್ಷಾ ಕೆ.ಪಿ. ಶೇ.83, ಸಂಜನಾ ಎಸ್.ಭಟ್ ಶೇ.87.8, ಧನ್ವಿ ಮಯ್ಯ-ಶೇ.86.2, ರಕ್ಷಾ ಎಸ್.ಎಸ್. ಶೇ.87.8 ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆ.
ಜೂನಿಯರ್‌ನಲ್ಲೂ ಶೇ.ನೂರು:
ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ನೃತ್ಯೋಪಾಸನಾ ಕಲಾ ಅಕಾಡೆಮಿಯಿಂದ ಒಟ್ಟು 49 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಈ ಪೈಕಿ 45 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 3
ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಹಾಗೂ ಓರ್ವ ವಿದ್ಯಾರ್ಥಿನಿ ತೃತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದುವ ಮೂಲಕ ಶೇಕಡಾ 100 ಫಲಿತಾಂಶ ದಾಖಲಿಸಿದೆ.
ಈ ಪೈಕಿ ಸ್ಮೃತಿ ಟಿ. ಶೇ. 98.25 ಆಂಕಗಳೊಂದಿಗೆ ಕಲಾ ಅಕಾಡೆಮಿಯಲ್ಲಿ ಅತ್ಯಂತ ಹೆಚ್ಚು ಅಂಕ ಪಡೆದ ಗರಿಮೆ ಹೊಂದಿದ್ದಾರೆ. ಈ ಎರಡು ಪರೀಕ್ಷೆಗಳಿಗೆ ಕಲಾ ಅಕಾಡೆಮಿಯ ಪುತ್ತೂರು, ಸುಬ್ರಹ್ಮಣ್ಯ, ಉಪ್ಪಿನಂಗಡಿ ಹಾಗೂ ವಿಟ್ಲ ಶಾಖೆಗಳ ವಿದ್ಯಾರ್ಥಿಗಳು ಹಾಜರಾಗಿದ್ದರು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.