ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲದ ವಿದ್ಯಾರ್ಥಿಗಳು ಗಣಿತ ವಿಜ್ಞಾನ ಮೇಳದಲ್ಲಿ ಪ್ರಾಂತ ಮಟ್ಟಕ್ಕೆ ಆಯ್ಕೆ

0

ಪುತ್ತೂರು: ಅಖಿಲ ಭಾರತೀಯ ವಿದ್ಯಾಭಾರತಿ ಶಿಕ್ಷಾ ಸಂಸ್ಥಾನಂ ನ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಮಟ್ಟದ ಗಣಿತ-ವಿಜ್ಞಾನ ಮೇಳ 2025-26, ಆ.30ನೇ ತಾರೀಕಿನಂದು ಕಲ್ಲಡ್ಕದ ಶ್ರೀರಾಮ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಿತು. ಈ ಸ್ಪರ್ಧೆಗಳಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲದ ವಿದ್ಯಾರ್ಥಿಗಳು ಭಾಗವಹಿಸಿ ಅನೇಕ ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಬಾಲ ವರ್ಗದ ಸ್ಪರ್ಧೆಗಳು:
ವಿಜ್ಞಾನ ಮಾದರಿ ತಯಾರಿ ಸ್ಪರ್ಧೆಯಲ್ಲಿ 8ನೇ ತರಗತಿಯ ಸಾನ್ವಿ ಡಿ( ದೀಪಕ್ ಮತ್ತು ಯಶೋಧ ಕೆ ದಂಪತಿ ಪುತ್ರಿ) ಪ್ರಥಮ ಸ್ಥಾನ, 8ನೇ ತರಗತಿಯ ಅನುದೀಪ್ ರೈ(ಶಿವಶ್ರೀರಂಜನ್ ರೈ ಮತ್ತು ಪ್ರತಿಭಾ ರೈ ಎಚ್ ದಂಪತಿ ಪುತ್ರ)ದ್ವಿತೀಯ ಸ್ಥಾನ, ಗಣಿತ ಪ್ರಯೋಗದಲ್ಲಿ 8ನೇ ತರಗತಿಯ ಚಾರ್ವಿ ಯು ಪಿ(ಉಮೇಶ ಪಿ ಮತ್ತು ನಮಿತಾ ದಂಪತಿ ಪುತ್ರಿ) ದ್ವಿತೀಯ ಸ್ಥಾನ, ಗಣಿತ ಪತ್ರವಾಚನ ಸ್ಪರ್ಧೆಯಲ್ಲಿ 7ನೇ ತರಗತಿಯ ಅಭೀಷ್ಠ ಶಂಕರ ಶರ್ಮ( ಸತ್ಯ ಶಂಕರ ಭಟ್ ಮತ್ತು ಹೇಮಾ ದೀಪಿಕಾ ದಂಪತಿ ಪುತ್ರ) ದ್ವಿತೀಯ ಸ್ಥಾನ, ಕಥಾ ಕಥನ ಸ್ಪರ್ಧೆಯಲ್ಲಿ 6ನೇ ತರಗತಿಯ ಆರಾಧ್ಯ ಕೃಷ್ಣ( ಕೃಷ್ಣಪ್ರಸಾದ್ ಮತ್ತು ಶ್ರೀ ವಿದ್ಯಾ ದಂಪತಿ ಪುತ್ರಿ) ತೃತೀಯ ಸ್ಥಾನ, ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ 8ನೇ ತರಗತಿಯ ವಿದ್ಯಾರ್ಥಿನಿಯರಾದ ರಚನಾ ಬಾಯಾರ್( ರಂಜನ್ ಕುಮಾರ್ ಬಾಯಾರ್ ಮತ್ತು ಸುಪ್ರಿಯಾ ಎ ವಿ ದಂಪತಿ ಪುತ್ರಿ), ಪ್ರಣವಿ ಪಿ ನಾಯ್ಕ್ ( ಪ್ರವೀಣ್ ಕುಮಾರ್ ನಾಯ್ಕ್ ಮತ್ತು ಸಾಯಿಗೀತ ಪಿ ನಾಯ್ಕ್ ದಂಪತಿ ಪುತ್ರಿ) ಶೌರ್ಯ ಜಿ (ರಾಧಾಕೃಷ್ಣ ಹಾಗೂ ವಿಜಯಲಕ್ಷ್ಮಿ ದಂಪತಿ ಪುತ್ರಿ) ಈ ಮೂವರ ತಂಡ ಪ್ರಥಮ ಸ್ಥಾನ ಪಡೆದಿರುತ್ತದೆ.

ಕಿಶೋರ ವರ್ಗದ ಸ್ಪರ್ಧೆಗಳು:
ವಿಜ್ಞಾನ ಮಾದರಿ ತಯಾರಿ ಸ್ಪರ್ಧೆಯಲ್ಲಿ 9ನೇ ತರಗತಿಯ ಸಮೃಧ್ಧ್ ಆರ್ ಶೆಟ್ಟಿ (ರಾಮಚಂದ್ರ ಮತ್ತು ಶೋಭಾ ದಂಪತಿ ಪುತ್ರ) ಪ್ರಥಮ ಸ್ಥಾನ, 9ನೇ ತರಗತಿಯ ಕ್ಷಮಾ ಜೆ ರೈ (ಜಗದೀಶ್ ರೈ ಹಾಗೂ ಶೋಭಾ ಜೆ ರೈ ದಂಪತಿ ಪುತ್ರಿ)ತೃತೀಯ ಸ್ಥಾನ, 9ನೇ ತರಗತಿಯ ನಮೀಶ್ ಪೂಜಾರಿ (ಶ್ರೀ ಸತೀಶ್ ಪೂಜಾರಿ ಮತ್ತು ಶ್ರೀಮತಿ ಜಯಶ್ರೀ ದಂಪತಿ ಪುತ್ರ)ತೃತೀಯ ಸ್ಥಾನ, 9ನೇ ತರಗತಿಯ ವೀಕ್ಷಿತ್ (ಶ್ರೀ ಕೆ ಚಂದ್ರಶೇಖರಗೌಡ ಮತ್ತು ಶ್ರೀಮತಿ ಲಲಿತಾ ದಂಪತಿ ಪುತ್ರ) ತೃತೀಯ ಸ್ಥಾನ, 9ನೇ ತರಗತಿಯ ಕ್ಷಮೇತ್ ಜೈನ್(ಶ್ರೀ ಹನೀಶ್ ಕುಮಾರ್ ಮತ್ತು ಶ್ರೀಮತಿ ಶ್ರುತಿ ಕುಮಾರಿ ದಂಪತಿ ಪುತ್ರ) ದ್ವಿತೀಯ ಸ್ಥಾನ, ವಿಜ್ಞಾನ ಪ್ರಯೋಗ ಸ್ಪರ್ಧೆಯಲ್ಲಿ 9ನೇ ತರಗತಿಯ ದೀಪ್ತಿ ಕುಬಣೂರಾಯ (ಶ್ರೀ ಸುಧಾಕರ ಕುಬಣೂರಾಯ ಮತ್ತು ಶ್ರೀಮತಿ ಸವಿತಾ ಕುಬಣೂರಾಯ ದಂಪತಿ ಪುತ್ರಿ) ತೃತೀಯ ಸ್ಥಾನ ಗಳಿಸಿರುತ್ತಾರೆ. ಆಶುಭಾಷಣ ಸ್ಪರ್ಧೆಯಲ್ಲಿ 10ನೇ ತರಗತಿಯ ಅವನಿ ರೈ (ಶ್ರೀ ನವೀನ್ ಪ್ರಸಾದ್ ರೈ ಮತ್ತು ಭವ್ಯ ಯನ್ ರೈ ದಂಪತಿ ಪುತ್ರಿ) ತೃತೀಯ ಸ್ಥಾನ ಗಳಿಸಿರುತ್ತಾರೆ. ಗಣಿತ ಪತ್ರ ವಾಚನ ಸ್ಪರ್ಧೆಯಲ್ಲಿ 10ನೇ ತರಗತಿಯ ಸಾನ್ವಿ ಚಣಿಲ (ಶ್ರೀ ರಘುರಾಮಚಂದ್ರ ಚಣಿಲ ಮತ್ತು ಶ್ರೀಮತಿ ಸಂಧ್ಯಾ ದಂಪತಿ ಪುತ್ರಿ) ದ್ವಿತೀಯ ಸ್ಥಾನ ಗಳಿಸಿರುತ್ತಾರೆ.
ಬಾಲ ವರ್ಗ ಹಾಗೂ ಕಿಶೋರ ವರ್ಗದ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು ಮೈಸೂರಿನ ಲಕ್ಷ್ಮಿ ಪುರಂನಲ್ಲಿರುವ ಡಾ.ಗೋಪಾಲ ಸ್ವಾಮಿ ಶಿಶುವಿಹಾರ ಪ್ರೌಢಶಾಲೆಯಲ್ಲಿ ಸೆಪ್ಟೆಂಬರ್ 5 ರಿಂದ 7 ರವರೆಗೆ ನಡೆಯಲಿರುವ ಪ್ರಾಂತ ಮಟ್ಟದ ಗಣಿತ-ವಿಜ್ಞಾನ ಮೇಳದಲ್ಲಿ ಭಾಗವಹಿಸಲಿದ್ದಾರೆ ಎಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್ ಕುಮಾರ್ ರೈಯವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here