ವಿಜ್ಞಾನ ವಿಚಾರಗೋಷ್ಟಿ : ಅಂಬಿಕಾ ವಿದ್ಯಾಲಯದ ಕುವಿರ ಜಿಲ್ಲಾ ಮಟ್ಟಕ್ಕೆ ಆಯ್ಕೆ

0

ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಿ.ಬಿ.ಎಸ್. ಇ ವಿದ್ಯಾಲಯದ 9 ನೇ ತರಗತಿಯ ವಿದ್ಯಾರ್ಥಿನಿ ಕುವಿರ ಕೆ. ವಿ. ಇವರು ಕರ್ನಾಟಕ ಸರಕಾರ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಆಯೋಜಿಸಲಾದ 2025-26 ನೇ ಸಾಲಿನ ತಾಲೂಕು ಮಟ್ಟದ ವಿಜ್ಞಾನ ವಿಚಾರಗೋಷ್ಠಿಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಸಂತವಿಕ್ಟರನ ಬಾಲಿಕಾ ಪ್ರೌಢಶಾಲೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕುವಿರ ಅವರು ಕ್ವಾಂಟಮ್ ಯುಗದ ಆರಂಭ – ಸಾಮರ್ಥ್ಯಗಳು ಮತ್ತು ಸವಾಲುಗಳು ಎಂಬ ವಿಷಯವನ್ನು ಮಂಡಿಸಿದ್ದರು. ಇವರು ಕೆಮ್ಮಾಯಿ ನಿವಾಸಿಗಳಾದ ಕರುಣಾಕರ ಹಾಗೂ ಜಯಲಕ್ಷ್ಮಿ ದಂಪತಿಗಳ ಪುತ್ರಿ.

LEAVE A REPLY

Please enter your comment!
Please enter your name here