ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ ‘ನಿಟ್ಟೆ ಕ್ಲೈಮ್ ಆಕ್ಷನ್ ಪ್ರೋಗ್ರಾಮ್ 2025’ ಕಾರ್ಯಕ್ರಮ

0

ಪುತ್ತೂರು: ಹವಾಮಾನ ಬದಲಾವಣೆ ಮತ್ತು ಸುಸ್ಥಿರ ಅಭಿವೃದ್ಧಿಯ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಸೆ.1 ರಂದು ‘ನಿಟ್ಟೆ ಕ್ಲೈಮ್ ಆಕ್ಷನ್ ಪ್ರೋಗ್ರಾಮ್ 2025’ ಎಂಬ ಕಾರ್ಯಕ್ರಮವನ್ನು ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ ಆಯೋಜಿಸಲಾಯಿತು .

ಈ ಕಾರ್ಯಕ್ರಮವು, ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ ವಿಶೇಷವಾದ ಗುರಿ 13 – ಹವಾಮಾನ ಕ್ರಿಯೆಯ ಮಹತ್ತ್ವವನ್ನು ಎತ್ತಿ ತೋರಿಸಿತು.

NCAP ತಂಡವು ಹವಾಮಾನ ಕ್ರಿಯೆಯ ಕುರಿತು ಮಾಹಿತಿಯುಕ್ತ ಜಾಗೃತಿ ಅಧಿವೇಶನವನ್ನು ನಡೆಸಿತು. ಆ ಬಳಿಕ, ಪ್ರಾಂಶುಪಾಲೆ ಸಿಂಧು ವಿ. ಜಿ. ಅವರು ಸ್ಪೂರ್ತಿದಾಯಕ ಮಾತುಗಳನ್ನಾಡಿದರು.

ಕಾರ್ಯಕ್ರಮದಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 8 ನೇ ತರಗತಿಯ ಮಾನ್ವಿ ಕಜೆ ಮತ್ತು ಧೃತಿ ಬಿ. ಪ್ರಾರ್ಥಿಸಿ, ಪ್ರಣಮ್ಯ ಜೆ. ನಿರೂಪಿಸಿ, ರಿತ್ವಿತ ಕೆ. ಸ್ವಾಗತಿಸಿ, ರಿಷಿಕಾ ಎಚ್. ವಂದಿಸಿದರು.

LEAVE A REPLY

Please enter your comment!
Please enter your name here