ಪೆರ್ನೆ: ದನವನ್ನು ಕದ್ದು ಮಾಂಸ ಮಾಡಿದ ದುಷ್ಕರ್ಮಿಗಳು : ದನದ ಮಾಲಕನ ತೋಟದಲ್ಲಿಯೇ ನಡೆದ ಘಟನೆ

0


ಉಪ್ಪಿನಂಗಡಿ: ದನದ ಮಾಲಕನ ಹಟ್ಟಿಯಿಂದಲೇ ದನವನ್ನು ಕದ್ದು ಅವರ ತೋಟದಲ್ಲಿಯೇ ಮಾಂಸ ಮಾಡಿ ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ಪೆರ್ನೆ ಬಳಿಯ ಕಡಂಬು ಎಂಬಲ್ಲಿ ಸೆ.4ರಂದು ಬೆಳಕಿಗೆ ಬಂದಿದೆ.


ಕಡಂಬು ನಿವಾಸಿ ದೇಜಪ್ಪ ಮೂಲ್ಯ ಅವರು ಎರಡು ವರ್ಷ ಪ್ರಾಯದ ಗಬ್ಬದ ದನವನ್ನು ಸಾಕಿಕೊಂಡಿದ್ದು, ಸೆ.8ರಂದು ಬೆಳಗ್ಗೆದ್ದು ನೋಡಿದಾಗ ಹಟ್ಟಿಯಲ್ಲಿದ್ದ ದನ ಕಣ್ಮರೆಯಾಗಿತ್ತು. ಮನೆಯವರು ಹುಡುಕಾಡಿದಾಗ ಅವರದ್ದೇ ತೋಟದಲ್ಲಿ ದನವನ್ನು ಕಡಿದು ಅಲ್ಲೇ ಮಾಂಸ ಮಾಡಿ, ಅದರ ಚರ್ಮ ಸೇರಿದಂತೆ ವೇಸ್ಟೇಜ್‌ಗಳನ್ನು ಅಲ್ಲೇ ಬಿಟ್ಟು ಹೋಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಮಾಹಿತಿ ತಿಳಿದ ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here