ಪುತ್ತೂರು: ಬೆಳ್ಳಿಪಾಡಿ ಶಾಲೆಯ ಹಳೆ ವಿದ್ಯಾರ್ಥಿ ಮಾಜಿ ಸೈನಿಕ ಚಂದ್ರಶೇಖರ್ ಗುಂಡೋಳೆ ಇವರ ನೇತೃತ್ವದಲ್ಲಿ ಗುರುವಂದನಾ ಕಾರ್ಯಕ್ರಮ ನಡೆಯಿತು. ಬೆಳ್ಳಿಪಾಡಿ ಶಾಲೆಯ ಮುಖ್ಯ ಗುರುಗಳಾಗಿ ಸೇವೆಯನ್ನು ಸಲ್ಲಿಸಿದ ವೆಂಕಪ್ಪ ಗೌಡ ದೇವಸ್ಯ ಇವರನ್ನು ಹಾಗೂ ಇವರ ಧರ್ಮಪತ್ನಿ ಶಿಕ್ಷಕಿ ಪಾರ್ವತಿ ವೆಂಕಪ್ಪ ಗೌಡ ಅವರಿಗೆ ಗುರುವಂದನಾ ಕಾರ್ಯಕ್ರಮ ನಡೆಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಮೋಹನ ಪಕ್ಕಳ, ಲಕ್ಷ್ಮಣ ಗೌಡ, ಗಣೇಶ್ ಕೈಲಾಜೆ, ಸೀತಾರಾಮ್ ಶೆಟ್ಟಿ, ರಾಮಚಂದ್ರ ಕೈಲಾಜೆ, ಕೇಶವ ದೇವಸ್ಯ, ಕುಂಜಣ್ಣ ಗೌಡ ಕೈಲಾಜೆ, ಪುರಂದರ ಗೌಡ ಶಿಕ್ಷಕರ ಪುತ್ರರಾದ ಮನೋಹರ್ ಗೌಡ ಡಿವಿ, ಉಮೇಶ್ ಚಂದ್ರ, ಬಾಲಚಂದ್ರ ಉಪಸ್ಥಿತರಿದ್ದರು.