ಅಂಬಿಕಾ ವಿದ್ಯಾಲಯದ ವಿದ್ಯಾರ್ಥಿಗಳು ರಾಜ್ಯಮಟ್ಟದ ವಿಜ್ಞಾನ – ಗಣಿತ ಮೇಳಕ್ಕೆ ಆಯ್ಕೆ

0

ಪುತ್ತೂರು : ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ವಿದ್ಯಾರ್ಥಿಗಳು ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಣ ಸಂಸ್ಥಾನವು ಕಲ್ಲಡ್ಕ ಶ್ರೀರಾಮ ಶಾಲೆಯಲ್ಲಿ ಆಯೋಜಿಸಿದ ವಿಜ್ಞಾನ ಗಣಿತ ಮೇಳದಲ್ಲಿ ಭಾಗವಹಿಸಿ ಹಲವು ಬಹುಮಾನಗಳನ್ನು ತಮ್ಮದಾಗಿಸಿಕೊಂಡು, ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.


ಕಿಶೋರ ವರ್ಗದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರವೀಣ್ ರಾವ್ ಮತ್ತು ಸುಗಂಧಿನಿ ದಂಪತಿಗಳ ಪುತ್ರ ಪ್ರಿಯಾಂಶು ರಾವ್ (೧೦ನೇ ತರಗತಿ), ಸುರೇಶ್ ಶೆಟ್ಟಿ ಮತ್ತು ನೈನಾ ದಂಪತಿಗಳ ಪುತ್ರ ಕನಿಷ್ಕ್ ಎಸ್. ಶೆಟ್ಟಿ (೧೦ನೇ ತರಗತಿ) ಹಾಗೂ ಮಧುಸೂಧನ್ ಸಾಲೆ ಮತ್ತು ವಿನುತಾ ಎಮ್. ಸಾಲೆ ದಂಪತಿಗಳ ಪುತ್ರ ಅನಿತೇಜ್ ಎಮ್. ಸಾಲೆ(೯ನೇ ತರಗತಿ) ಇವರ ತಂಡ ಪ್ರಥಮ ಸ್ಥಾನ ಪಡೆದಿದೆ.‌


ಕಿಶೋರವರ್ಗದ ವಿಜ್ಞಾನ ಪತ್ರವಾಚನ ಸ್ಪರ್ಧೆಯಲ್ಲಿ ಮಹೇಶ್ ಕಜೆ ಹಾಗೂ ದೀಪಿಕಾ ಕಜೆ ದಂಪತಿಗಳ ಪುತ್ರಿ ಮಂದಿರಾ ಕಜೆ (೧೦ನೇ ತರಗತಿ) ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ. ಕಿಶೋರವರ್ಗದ ಗಣಿತ ಪ್ರದರ್ಶನ ಸ್ಪರ್ಧೆಯಲ್ಲಿ ಗಿರೀಶ ಗೌಡ ಮತ್ತು ಸುಮಿತ್ರಾ ದಂಪತಿಗಳ ಪುತ್ರ ಸಾತ್ವಿಕ್ ಜಿ. (೯ನೇ ತರಗತಿ) ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ. ಸಂತೋಷ್ ಎನ್ ಮತ್ತು ಶ್ರುತಿ ಎಸ್. ದಂಪತಿಗಳ ಪುತ್ರ ಸನ್ಮಯ್ ಎನ್. (೮ನೇ ತರಗತಿ) ಬಾಲ ವರ್ಗದ ವೇದಗಣಿತ ಪತ್ರವಾಚನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ. ಈ ಎಲ್ಲಾ ವಿದ್ಯಾರ್ಥಿಗಳು ಮೈಸೂರಿನಲ್ಲಿ ನಡೆಯಲಿರುವ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.


ಇದಲ್ಲದೆ, ಪ್ರವೀಣ್ ಕುಮಾರ್ ಎಸ್ ಹಾಗೂ ಸೌಮ್ಯ ಶೆಟ್ಟಿ ದಂಪತಿಗಳ ಪುತ್ರಿ ವಿವಿಕ್ತಾ ಎಸ್. ರೈ (೧೦ ನೇ ತರಗತಿ) ಗಣಿತ ಮಾದರಿ ಪ್ರದರ್ಶನದಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಶಿವಶಂಕರ ಎಸ್ ದಾನೆಗೊಂಡರ್ ಹಾಗೂ ಕೆ. ವನಿತಾ ದಂಪತಿಗಳ ಪುತ್ರಿ ಸೌಪರ್ಣಿಕಾ (೮ನೇ ತರಗತಿ) ವಿಜ್ಞಾನ ಪತ್ರವಾಚನ ಸ್ಪರ್ಧೆಯಲ್ಲಿ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಗಿರೀಶ ಗೌಡ ಹಾಗೂ ಸುಮಿತ್ರ ದಂಪತಿಗಳ ಪುತ್ರಿ ಸಾನ್ವಿ ಜಿ (೭ನೇ ತರಗತಿ) ಗಣಿತ ಮಾದರಿ ಪ್ರದರ್ಶನದಲ್ಲಿ ತೃತೀಯ ಸ್ಥಾನವನ್ನು ಗಳಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here