ಪುತ್ತೂರು: ಬೆಳ್ತಂಗಡಿ ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪದಲ್ಲಿ ನಡೆದ ದ.ಕ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಜಿಲ್ಲೆಯಲ್ಲಿ ಅತ್ಯುತ್ತಮ ಪಿಎಂಶ್ರೀ ಶಾಲೆಯಾಗಿ ದೇಶಕ್ಕೆ ಸಮರ್ಪಣೆಗೊಂಡ ವೀರಮಂಗಲ ಪಿಎಂಶ್ರೀ ಶಾಲೆಗೆ ಗೌರವ ಪ್ರಶಸ್ತಿಯನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಪ್ರದಾನ ಮಾಡಿದರು.
ವಿದಾನಪರಿಷತ್ ಸದಸ್ಯರಾದ ಬೋಜೆಗೌಡ,ಪ್ರತಾಪ್ ಸಿಂಹ ನಾಯಕ್, ಜಿಲ್ಲಾ ಶಿಕ್ಷಣ ಇಲಾಖೆಯ ಆಡಳಿತ ವಿಭಾಗದ ಉಪನಿರ್ದೇಶಕರಾದ ಶಶಿಧರ್ ಜಿ ಎಸ್, ಅಭಿವೃದ್ದಿ ವಿಭಾಗದ ಉಪನಿರ್ದೇಶಕರಾದ ಸದಾನಂದ ಪೂಂಜಾ, ಅಕ್ಷರ ದಾಸೋಹ ಜಿಲ್ಲಾ ನಿರ್ದೇಶಕ ಜ್ಞಾನೇಶ್, ಬೆಳ್ತಂಗಡಿ ಶಿಕ್ಷಣಾಧಿಕಾರಿ ತಾರಕೇಸರಿರವರ ಸಮ್ಮುಖದಲ್ಲಿ ಪ್ರಶಸ್ತಿಯನ್ನು ಶಾಲಾ ಮುಖ್ಯಗುರು ತಾರಾನಾಥ ಸವಣೂರು ಸ್ವೀಕರಿಸಿದರು.ಎಸ್ ಡಿ ಎಂ ಸಿ ಅಧ್ಯಕ್ಷ ರವಿಚಂದ್ರ,ಹರೀಶ್,ಸುರೇಶ್ ಗಂಡಿ, ರಮೇಶ್ ಗೌಡ, ವಿದ್ವಾನ್ ಗೋಪಾಲಕೃಷ್ಣ ವೀರಮಂಗಲ, ಶಾಲಾ ನಾಯಕ ಶಿವಶನ್ಮಯಿ,ಶಿಕ್ಷಕರಾದ ಹೇಮಾವತಿ ಉಪಸ್ಥಿತರಿದ್ದರು.