ಪಟ್ಟೆ ಶ್ರೀಕೃಷ್ಣ ವಿದ್ಯಾಸಂಸ್ಥೆಗಳಲ್ಲಿ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ

0


ಪಟ್ಟೆಬಡಗನ್ನೂರು: ಇಲ್ಲಿನ ದ್ವಾರಕಾ ಪ್ರತಿಷ್ಠಾನ(ರಿ) ಪುತ್ತೂರು ಇದರ ವತಿಯಿಂದ ನಡೆಸಲ್ಪಡುವ ಶ್ರೀಕೃಷ್ಣ ವಿದ್ಯಾ ಸಂಸ್ಥೆಗಳಲ್ಲಿ, ಪ್ರೌಢಶಾಲಾ ವಿಭಾಗದ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟವು ಜರಗಿತು. ಸಮಾರಂಭವನ್ನು, ದ್ವಾರಕಾ ಪ್ರತಿಷ್ಠಾನ ಹಾಗೂ ಶ್ರೀಕೃಷ್ಣ ವಿದ್ಯಾ ಸಂಸ್ಥೆಗಳ ಅಧ್ಯಕ್ಷರಾದ ಶ್ರೀ ಗೋಪಾಲಕೃಷ್ಣ ಭಟ್ ಇವರು ಉದ್ಘಾಟಿಸಿ ಎಲ್ಲಾ ಸ್ಪರ್ಧಾಳುಗಳಿಗೆ ಶುಭ ಹಾರೈಸಿದರು.
ಪುತ್ತೂರು ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರಾದ ಶ್ರೀ ಚಕ್ರಪಾಣಿ ಇವರು ಪ್ರಾಸ್ತಾವಿಕ ಮಾತುಗಳನ್ನಾಡಿದರು.


ಪುತ್ತೂರು ತಾಲೂಕಿನ ಐದು ವಲಯದಿಂದ ಸುಮಾರು 20 ತಂಡಗಳು ಈ ಪಂದ್ಯದಲ್ಲಿ ಭಾಗವಹಿಸಿದ್ದವು. ಮುಖ್ಯ ಅತಿಥಿಗಳಾಗಿ ವಿಘ್ನೇಶ್ ಹಿರಣ್ಯ ಸಂಚಾಲಕರು ಶ್ರೀ ಕೃಷ್ಣ ವಿದ್ಯಾಸಂಸ್ಥೆಗಳು, ಚಕ್ರಪಾಣಿ ದೈಹಿಕ ಶಿಕ್ಷಣ ಪರಿವೀಕ್ಷಣಾ ಅಧಿಕಾರಿ ಪುತ್ತೂರು, ಕುಂಬ್ರ ಕ್ಷೇತ್ರ ಸಂಪನ್ಮೂಲ ಕೇಂದ್ರದ ಶಶಿಕಲಾ, ಕೃಷ್ಣಪ್ರಸಾದ್ ನೋಡಲ್ ಅಧಿಕಾರಿಗಳು ಹಾಗೂ ದೈಹಿಕ ಶಿಕ್ಷಕರು ಕೆಪಿಎಸ್ ಕುಂಬ್ರ, ಮಾಮಚ್ಚನ್, ಅಧ್ಯಕ್ಷರು ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ನೌಕರರ ಸಂಘ, ಅಬ್ರಾಹಂ ಪುತ್ತೂರು ತಾಲೂಕು ಸಹಶಿಕ್ಷಕ ಸಂಘದ ಅಧ್ಯಕ್ಷರು, ಕೃಷ್ಣಯ್ಯ ಪುತ್ತೂರು ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರು, ಕರುಣಾಕರ ಅಧ್ಯಕ್ಷರು ದೈಹಿಕ ಶಿಕ್ಷಕರ ಸಂಘ ಗ್ರೇಡ್ 1, ಪ್ರತಿಭಾ ಪ್ರೌಢಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಲಿಂಗಪ್ಪ ಗೌಡ ಮೋಡಿಕೆ, ಶ್ರೀಕೃಷ್ಣ ಹಿರಿಯ ಪ್ರಾಥಮಿಕ ಶಾಲೆಯ ಎಸ್ಡಿಎಂಸಿ ಅಧ್ಯಕ್ಷರಾದ ಕೇಶವ ಪ್ರಸಾದ್ ನೀಲಗಿರಿ, ಶ್ರೀಕೃಷ್ಣ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಸತೀಶ್ ಕೊಪ್ಪಳ, ಪ್ರತಿಭಾ ಪ್ರೌಢಶಾಲೆಯ ಮುಖ್ಯ ಗುರುಗಳಾದ ಸುಮನಾ. ಬಿ, ಶ್ರೀ ಕೃಷ್ಣ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ರಾಜಗೋಪಾಲ್ ಎನ್, ಶ್ರೀಕೃಷ್ಣ ವಿದ್ಯಾ ಸಂಸ್ಥೆಗಳ ದೈಹಿಕ ಶಿಕ್ಷಣ ಶಿಕ್ಷಕರಾದ ಮೋನಪ್ಪ.ಎಂ ಉಪಸ್ಥಿತರಿದ್ದರು.


17ರ ವಯೋಮಾನದ ಬಾಲಕರ ವಾಲಿಬಾಲ್ ಪಂದ್ಯಾಟದಲ್ಲಿ ಬೆಥನಿ ಪ್ರೌಢಶಾಲೆ ಪ್ರಥಮ ಸ್ಥಾನವನ್ನು, ದ್ವಿತೀಯ ಸ್ಥಾನವನ್ನು ಇಂದ್ರಪ್ರಸ್ಥ ಉಪ್ಪಿನಂಗಡಿ ಪಡೆದುಕೊಂಡಿರುತ್ತದೆ. ಬಾಲಕಿಯರ ಪಂದ್ಯಾಟದಲ್ಲಿ ಪ್ರಥಮ ಸ್ಥಾನವನ್ನು ಸರಕಾರಿ ಪ್ರೌಢ ಶಾಲೆ ಪಾಪೆ ಮಜಲು ದ್ವಿತೀಯ ಸ್ಥಾನವನ್ನು ಸೈಂಟ್ ಮೇರಿಸ್ ಉಪ್ಪಿನಂಗಡಿ ಪಡೆದುಕೊಂಡಿರುತ್ತದೆ. ಹುಡುಗರ ವಿಭಾಗದಲ್ಲಿ ಬೆಸ್ಟ್ ಪಾಸರಾಗಿ ಬೆಥನಿ ಪ್ರೌಢಶಾಲೆಯ ಶಾನ್, ಬೆಸ್ಟ ಅಟ್ಯಾಕರಾಗಿ ಬೆಥನಿಯ ಸವಾದ್, ಆಲ್ರೌಂಡರ್ ಇಂದ್ರಪ್ರಸ್ಥ ಆಯತುಲ್ಲಾಹ್, ಬಾಲಕಿಯರ ವಿಭಾಗದಲ್ಲಿ ಬೆಸ್ಟ್ ಪಾಸರ್ ಆಗಿ ವಿನುತ ಸರಕಾರಿ ಪ್ರೌಢಶಾಲೆ ಪಾಪೆ ಮಜಲು, ಬೆಸ್ಟ್ ಅಟಾಕರ್ ಸೈಂಟ್ ಮೇರಿಸ್ ಉಪ್ಪಿನಂಗಡಿಯ ಶುತ್ರ, ಆಲ್ ರೌಂಡಾಗಿ ಸರ್ಕಾರಿ ಪ್ರೌಢಶಾಲೆ ಪಂಚಮಿ ಆಯ್ಕೆಗೊಂಡಿರುತ್ತಾರೆ.


ಪ್ರತಿಭಾ ಪ್ರೌಢಶಾಲೆಯ ಮುಖ್ಯ ಗುರುಗಳಾದ ಸುಮನ ಬಿ ಸ್ವಾಗತಿಸಿ, ಶ್ರೀಕೃಷ್ಣ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ರಾಜಗೋಪಾಲ ಎನ್ ವಂದಿಸಿದರು. ವಿಶ್ವನಾಥ. ಬಿ ಯವರು ಕಾರ್ಯಕ್ರಮ ನಿರೂಪಿಸಿದರು. ಶ್ರೀಕೃಷ್ಣ ವಿದ್ಯಾಸಂಸ್ಥೆಗಳ ಎಲ್ಲಾ ಶಿಕ್ಷಕರು ಕಾರ್ಯಕ್ರಮದಲ್ಲಿ ಸಹಕರಿಸಿದರು.

LEAVE A REPLY

Please enter your comment!
Please enter your name here