ರಾಮಕುಂಜ: ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ರಕ್ಷಕ- ಶಿಕ್ಷಕ ಸಂಘದ ಸಭೆಯು ಶಾಲಾ ಸಭಾಂಗಣದಲ್ಲಿ ಜರುಗಿತು. ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
2024-25ನೇ ಸಾಲಿನ ಮಹಾಸಭೆಯ ವರದಿಯನ್ನು ವೆಂಕಟೇಶ ದಾಮ್ಲೆ ವಾಚಿಸಿದರು. ಶಿವಪ್ರಸಾದ್ ಲೆಕ್ಕಪತ್ರ ಮಂಡಿಸಿದರು. ಸಂಘದ ನೂತನ ಅಧ್ಯಕ್ಷರಾಗಿ ಉಮೇಶ್ ಕೆ.ಎಂ.ಬಿ., ಉಪಾಧ್ಯಕ್ಷರಾಗಿ ವೇದಾವತಿ ಪುನರಾಯ್ಕೆಯಾದರು. ಕಾರ್ಯದರ್ಶಿಯಾಗಿ ದಿನೇಶ್ ಕುಮಾರ್, ಜೊತೆ ಕಾರ್ಯದರ್ಶಿಯಾಗಿ ಹೊನ್ನಪ್ಪ ಗೌಡ, ಕೋಶಾಧಿಕಾರಿಯಾಗಿ ಶಿವಪ್ರಸಾದ್ ಆಯ್ಕೆಯಾದರು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಉದಯ, ಲೀಲಾವತಿ, ಸುಮಿತ್ರ, ಮಹಾಬಲ ಶೆಟ್ಟಿ, ಜನಾರ್ದನ ನಾಡ್ತಿಲ, ಬರ್ಖತ್, ಪ್ರಿಯಾ, ಮಮತಾ, ವನಿತಾ ಆಯ್ಕೆಯಾದರು.
ವೆಂಕಟೇಶ ದಾಮ್ಲೆ ನಿರೂಪಿಸಿದರು. ಮುಖ್ಯಗುರು ಸತೀಶ್ ಭಟ್ ಸ್ವಾಗತಿಸಿದರು. ದಿನೇಶ್ ಕುಮಾರ್ ವಂದಿಸಿದರು. ಸಂಸ್ಥೆಯ ಸಂಚಾಲಕರಾದ ರಾಧಾಕೃಷ್ಣ ಕೆ.ಎಸ್., ಕಾಲೇಜು ಪ್ರಾಂಶುಪಾಲ ಚಂದ್ರಶೇಖರ ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು.