ಬಡಗನ್ನೂರು: ನಾಯಿಗಳಿಗೆ ಉಚಿತ ರೇಬಿಸ್ ರೋಗ ನಿರೋಧಕ ಲಸಿಕಾ ವಿತರಣೆ

0

ಬಡಗನ್ನೂರು: ಕರ್ನಾಟಕ ಸರಕಾರ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಪಶುಪಾಲನಾ ಮತ್ತು ಪಶು ವೈದಕೀಯ ಸೇವಾ ಇಲಾಖೆ ಪುತ್ತೂರು, ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರ ಈಶ್ವರಮಂಗಲ ಮತ್ತು ಗ್ರಾಮ ಪಂಚಾಯತ್ ಬಡಗನ್ನೂರು ಇದರ ಸಹಯೋಗದಲ್ಲಿ ಬಡಗನ್ನೂರು ಹಾಗೂ ಪಡುವನ್ನೂರು ಗ್ರಾಮಗಳ ವ್ಯಾಪ್ತಿಯಲ್ಲಿ ನಾಯಿಗಳಿಗೆ ಉಚಿತ ರೇಬಿಸ್ ರೋಗ ನಿರೋಧಕ ಲಸಿಕಾ ಕಾರ್ಯಕ್ರಮ ಸೆ.6 ರಂದು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಕೊಳ್ತಿಗೆ ಪಶು ಚಿಕಿತ್ಸಾಲಯದ ಹಿರಿಯ ಪಶು ವೈದ್ಯಾಧಿಕಾರಿ ಡಾ। ಎಂ ಪಿ ಪ್ರಕಾಶ್ ನಾಯಿಗಳಿಗೆ ಲಸಿಕೆ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಬಡಗನ್ನೂರು ಗ್ರಾ. ಪಂ ವ್ಯಾಪ್ತಿಯಲ್ಲಿ ಸುಮಾರು 18  ಭಾಗಗಳನ್ನು ಕೇಂದ್ರವಾಗಿಟ್ಟುಕೊಂಡು ನಾಲ್ಕು ತಂಡಗಳಾಗಿ ಒಂದೇ ದಿವಸದಲ್ಲಿ ಗ್ರಾಮದ ಎಲ್ಲಾ ಭಾಗದಲ್ಲಿ ಲಸಿಕೆ ಮಾಡಲಾಗುವುದು. ಗ್ರಾಮಸ್ಥರು ತಮ್ಮ ಸಾಕು ನಾಯಿಗಳನ್ನು ತಂದು  ಲಸಿಕೆ ನೀಡಿಸಿ ರೇಬಿಸ್ ರೋಗದ ನಿರ್ಮೂಲನೆಗೆ ಸಹಕರಿಸುವಂತೆ ವಿನಂತಿಸಿದ ಅವರು  ಸೆ. 28 ರಂದು ವಿಶ್ವಾದ್ಯಾಂತ ರೇಬಿಸ್  ರೋಗ ನಿರ್ಮೂಲನಾ ದಿನಾಚಾರಣೆ  ಆಚರಿಸಲಾಗುತ್ತದೆ.ಸೆ. 28 ರಿಂದ ಅ. 28 ರ ತನಕ  ಒಂದು ತಿಂಗಳ ಕಾಲ ಎಲ್ಲಾ ಪಶು ಚಿಕಿತ್ಸಾ ಕೇಂದ್ರಗಳಲ್ಲಿ ಉಚಿತ ಲಸಿಕೆ ನೀಡಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ  ಗ್ರಾ. ಪಂ ಸದಸ್ಯರಾದ ಸಂತೋಷ ಆಳ್ವ ಗಿರಿಮನೆ, ವೆಂಕಟೇಶ್ ಕನ್ನಡ್ಕ,  ಈಶ್ವರಮಂಗಲ ಪಶು ಚಿಕಿತ್ಸಾ ಕೇಂದ್ರದ ಹಿರಿಯ ಪಶು ವೈದ್ಯಕೀಯ ಪರಿವೀಕ್ಷಕ  ಬಸವರಾಜ್, ಪುತ್ತೂರು ಪಶು ಚಿಕಿತ್ಸಾ ಕೇಂದ್ರದ ಕಿರಿಯ ಪಶು ವೈದ್ಯಕೀಯ ಪರಿವೀಕ್ಷಕ  ಪುಂಡರೀಕ್ಷ, ಡಿ.ಗ್ರೂಪ್ಸ್ ಸಿಬ್ಬಂದಿಗಳಾದ ಪ್ರದೀಪ್ ಪಾಣಾಜೆ, ಸುನಿಲ್ ಕೊಳ್ತಿಗೆ, ಸರೋಜ ಈಶ್ವರಮಂಗಲ ಹಾಗೂ ಪಶುಸಕಿಯಾರದ ಕಾವ್ಯ, ರತ್ನವತಿ  ಮತ್ತು ಗ್ರಾ. ಪಂ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here