“ಒಬ್ಬ ವ್ಯಕ್ತಿ ಎಷ್ಟು ವರ್ಷ ಬದುಕಿದರು ಎಂಬುದು ಮುಖ್ಯವಲ್ಲ ಅದರಿಂದ ಸಮಾಜಕ್ಕೆ ಎಷ್ಟು ಪ್ರಯೋಜನವಾಯಿತು ಎನ್ನುವುದು ಮುಖ್ಯ “:- ಪ್ರೋ. ವಿ. ಬಿ. ಅರ್ತಿಕಜೆ
“ಒಬ್ಬ ಶಿಕ್ಷಕ ಯಾವಾಗ ತನ್ನನ್ನು ಒಬ್ಬ ವಿದ್ಯಾರ್ಥಿ ಎಂದು ಭಾವಿಸುತ್ತಾನೆ ಆಗ ಶಿಕ್ಷಕನ ಪ್ರಯಣ ಆರಂಭವಾಗುತ್ತದೆ”:- ಬಿ.ವಿ. ಸೂರ್ಯನಾರಾಯಣ
ಪುತ್ತೂರು: ಪುತ್ತೂರಿನ ಹೃದಯ ಭಾಗದಲ್ಲಿ ಕಾರ‍್ಯನಿರ್ವಹಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ ಸೆ.5ರಂದು ಶಿಕ್ಷಕರ ದಿನಾಚರಣೆ ಹಾಗೂ ಓಣಂ ಹಬ್ಬವನ್ನು ಆಚರಿಸಲಾಯಿತು.
ವಿದ್ಯಾರ್ಥಿಗಳು ಹಾಗೂ ಅಧ್ಯಾಪಕ ವೃಂದದವರು ಸೇರಿ ಪೂಕಳಂ ರಚಿಸಿದ್ದು ಕಾರ್ಯಕ್ರಮಕ್ಕೆ ಹೆಚ್ಚಿನ ಮೆರುಗನ್ನು ತಂದಿತು. ಕಾರ‍್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದ ಸಂಸ್ಥೆಯ ಸಂಚಾಲಕ ಗೋಕುಲ್‌ನಾಥ್ ಪಿ.ವಿ. ಮಾತನಾಡಿ, ಪ್ರಗತಿ ನಡೆದು ಬಂದ ದಾರಿಯ ಕುರಿತು ತಿಳಿಸುತ್ತಾ ಜೀವನದಲ್ಲಿ ವಿದ್ಯಾರ್ಥಿಗಳಿಗೆ ಗುರುಗಳ ಆಶೀರ್ವಾದ ಬಹಳ ಮುಖ್ಯ ಎನ್ನುತ್ತಾ ಪ್ರಗತಿಯ ಸ್ಥಾಪನೆಗೆ ಸಹಕರಿಸಿದ ಗುರುವರ್ಯರನ್ನು ಸ್ಮರಿಸಿದರು. ಪ್ರಗತಿಯಲ್ಲಿ 12 ವರ್ಷಗಳ ಕಾಲ ಮುಖ್ಯ ಗುರುಗಳಾಗಿ ಸೇವೆಸಲ್ಲಿಸಿದ ಅರ್ತಿಕಜೆ ಗಣಪತಿ ಭಟ್ ಇವರಿಗೆ ನುಡಿ ನಮನಗಳನ್ನು ಸಲ್ಲಿಸಲಾಯಿತು.

ಕಾರ‍್ಯಕ್ರಮದಲ್ಲಿ ಸನ್ಮಾನಿಸಲ್ಪಟ್ಟ ನಿವೃತ್ತ ಉಪನ್ಯಾಸಕರು ಹಿರಿಯ ಸಾಹಿತಿ, ಅಂಕಣಕಾರ ಪ್ರೋ. ವಿ. ಬಿ. ಅರ್ತಿಕಜೆ ಮಾತನಾಡಿ, ದಾನಗಳಲ್ಲಿ ಶ್ರೇಷ್ಠದಾನ ವಿದ್ಯಾದಾನ. ಇದರಿಂದ ದಾನ ಪಡೆದವರು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬಾಳುವುದಕ್ಕೆ ಸಹಕಾರಿಯಾಗುತ್ತದೆ. ಒಬ್ಬ ವ್ಯಕ್ತಿ ಎಷ್ಟು ವರುಷ ಬದುಕಿರುವನು ಎಂಬುದು ಮುಖ್ಯವಲ್ಲ ಅದರಿಂದ ಸಮಾಜಕ್ಕೆ ಎಷ್ಟು ಪ್ರಯೋಜನವಾಯಿತು ಎಂಬುದು ಮುಖ್ಯ ಎನ್ನುತ್ತ ಶುಭ ಹಾರೈಸಿದರು.
ಸಂಸ್ಥೆಯಿಂದ ಸನ್ಮಾನಿಸಲ್ಪಟ್ಟ ನಿವೃತ್ತ ಪ್ರಾಚಾರ್ಯರು ಬಿ.ವಿ. ಸೂರ್ಯನಾರಾಯಣ ಮಾತನಾಡಿ, ಒಬ್ಬ ಶಿಕ್ಷಕ ಯಾವಾಗ ತನ್ನನ್ನು ಒಬ್ಬ ವಿದ್ಯಾರ್ಥಿ ಎಂದು ಭಾವಿಸುತ್ತಾನೆ ಆಗ ಶಿಕ್ಷಕನ ಪ್ರಯಣ ಆರಂಭವಾಗುತ್ತದೆ. ಪ್ರಗತಿ ಸಂಸ್ಥೆಗೆ 19ರ ಹದಿಹರೆಯ ಬರುವ ವರ್ಷಕ್ಕೆ 20ರ ವಯಸ್ಕ ಹಂತಕ್ಕೆ ಬರುತ್ತದೆ ಎನ್ನುವ ಮೂಲಕ ಶುಭ ಹಾರೈಸಿದರು. ಸಂಸ್ಥೆಯ ಮೊಂಟೆಸರಿ ಶಿಕ್ಷಕಿಯರ ತರಬೇತಿಯ ಪ್ರಶಿರ್ಕಾಣಾರ್ಥಿಗಳಾದ ದಿವ್ಯ ಹಾಗೂ ಸವಿತಾ ಇವರು ಶಿಕ್ಷಕರ ದಿನಾಚರಣೆಯ ಮಹತ್ವದ ಕುರಿತು ತಿಳಿಸಿದರು.
ಕಾರ‍್ಯಕ್ರಮದಲ್ಲಿ ಉಪಸ್ಥಿತರಿದ್ದ ನಿವೃತ್ತ ಶಿಕ್ಷಕ ನಾರಾಯಣ ರೈ ಕುಕ್ಕುವಳ್ಳಿ ಮಾತನಾಡಿ, ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಇಬ್ಬರು ವಿಶ್ರಾಂತ ಅಧ್ಯಾಪಕರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಿರುವು ಅಭಿನಂದನೀಯ ವಿಷಯವೆಂದು ಹೇಳಿದರು. ಈದ್ ಮಿಲಾದ್, ಓಣಂ ಹಾಗೂ ಶಿಕ್ಷಕರ ದಿನಾಚರಣೆ ಒಂದೇ ದಿನ ಬಂದ ಕಾರಣ ಸರ್ವಧರ್ಮ ಸಮನ್ವಯವನ್ನು ಸಾರಿದೆ ಎಂದು ತಿಳಿಸಿದರು.
ಸಂಸ್ಥೆಯ ಪ್ರಾಂಶುಪಾಲೆ ಹೇಮಲತಾ ಗೋಕುಲ್‌ನಾಥ್ ಹಾಗೂ ಮುಖ್ಯ ಗುರು ಪ್ರಮೀಳಾ ಎನ್. ಡಿ. ಇವರು ಸಂದರ್ಭೋಚಿತವಾಗಿ ಮಾತನಾಡಿದರು. ಕಾರ‍್ಯಕ್ರಮದಲ್ಲಿ ಲಶ್ವಿತ್ ಪ್ರಾರ್ಥಿಸಿದರು. ವಿದ್ಯಾರ್ಥಿ ಸೃಜನ್ ಸ್ವಾಗತಿಸಿದರು. ಕಛೇರಿ ಸಿಬ್ಬಂದಿ ನಿಶ್ಮಿತಾ ವಂದಿಸಿದರು.ಸಾನಿಧ್ಯ ಮಾರನಹಳ್ಳಿ ಕಾರ‍್ಯಕ್ರಮವನ್ನು ನಿರೂಪಿಸಿದರು.