ಪುತ್ತೂರು: ಕರ್ನಾಟಕ ರಾಜ್ಯ ಡಾ|ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ 2024-25ನೇ ಸಾಲಿನಲ್ಲಿ ನಡೆಸಿದ ಭರತನಾಟ್ಯ ಜೂನಿಯರ್ ವಿಭಾಗದ ಪರೀಕ್ಷೆಯಲ್ಲಿ ಪುತ್ತೂರು ಶಿವಂ ನಾಟ್ಯಾಲಯದ ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ ಹಾಗೂ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.

ವಿದ್ಯಾರ್ಥಿಗಳಾದ ಅವನಿ ಕಾಮತ್ ಶೇ.86.25, ಚಿಂತನಾ ಎಸ್.ಭಟ್ ಶೇ.82 ಅಂಕ ಪಡೆದು ವಿಶಿಷ್ಟ ಶ್ರೇಣಿ ಪಡೆದಿದ್ದಾರೆ. ಸಮೀಕ್ಷಾ ಎಸ್. ನಾಯ್ಕ್ ಶೇ.73.25, ಪ್ರಾಪ್ತಿ ಆರ್. ರಐ ಶೇ.72, ಚಿರಂತ್ ಜಿ.ಭಟ್ ಶೇ.70 ಅಂಕ ಪಡೆದು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. 2023-24ನೇ ಸಾಲಿನಲ್ಲಿ ನಡೆಸಲಾದ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಶ್ರೇಯಾ ಬಿ.ಎ. ಶೇ.91.75, ಲಕ್ಷ್ಯಾ ಡಿ.ಎ. ಶೇ.81, ಆರ್. ವೈಷ್ಣವಿ ಶೇ.78.75 ಅಂಕ ಪಡೆದು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ದೃಶ್ಯಾ ಯು. ವೈ ಶೇ.73.50 ಅಂಕ ಪಡೆದು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಇವರಿಗೆ ಶಿವಂ ನಾಟ್ಯಾಲಯದ ನೃತ್ಯ ಶಿಕ್ಷಕಿ ವಿದುಷಿ ಮೇಘಾ ಆರ್. ದೇವಾಡಿಗ ನೃತ್ಯಭ್ಯಾಸ ಕಲಿಸಿದ್ದಾರೆ.