ಪುತ್ತೂರು: ಕಲ್ಲೇಗ ಶ್ರೀ ದೇವಿ ಭಜನಾ ಮಂದಿರದ ಅಧ್ಯಕ್ಷರಾಗಿ ಗುರುಕಿರಣ್ ಕಲ್ಲೇಗ ಮತ್ತು ಕಾರ್ಯದರ್ಶಿಯಾಗಿ ಪ್ರೇಮ್ದಾಸ್ ಕಲ್ಲೇಗ ಅವರನ್ನು ಆಯ್ಕೆ ಮಾಡಲಾಗಿದೆ.
ಕಲ್ಲೇಗ ಭಜನಾ ಮಂದಿರದಲ್ಲಿ 2025-26ನೇ ವರ್ಷದ ನವರಾತ್ರಿ ಉತ್ಸವ ಇದರ ಪೂರ್ವಬಾವಿ ಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಉಪಾಧ್ಯಕ್ಷರುಗಳಾಗಿ ಪ್ರವೀಣ್ ಕಲ್ಲೇಗ ಹಾಗು ಕಿಶೋರ್ ಪಟ್ಲಾ ಕಲ್ಲೇಗ, ಖಜಾಂಚಿಯಾಗಿ ಶೋಭಿತ್ ಕಲ್ಲೇಗ ಇವರು ಆಯ್ಕೆಯಾದರು. ನಗರಸಭೆ ಸದಸ್ಯ ಕೆ.ಜೀವಂಧರ್ ಜೈನ್, ಮನೋಹರ್ ಕಲ್ಲೇಗ, ರಾಘವೇಂದ್ರ ಪ್ರಭು, ಪ್ರಶಾಂತ ಅಜಯನಗರ, ವಿನಯ ,ಮಹೇಶ, ಜಯ ಕಾರೆ ಕಾಡು, ರವಿಕಿರಣ್ ಉಪಸ್ಥಿತರಿದ್ದರ. ಕಾರ್ಯದರ್ಶಿಯಾದ ಕಿರಣ್ ಕುಮಾರ್ ಕಲ್ಲೇಗ ಸ್ವಾಗತಿಸಿ ವಂದಿಸಿದರು.
