ಪುತ್ತೂರು:ಕೃಷಿ ಇಲಾಖೆ ವತಿಯಿಂದ ತೋಟಗಾರಿಕಾ ಬೆಳೆಯಲ್ಲಿ ಸಾಧನೆ ಮಾಡಿದ ಕೃಷಿಕರಿಗೆ ನೀಡುವ ಶ್ರೇಷ್ಠ ಕೃಷಿ ಉದ್ಯಮ ಪ್ರಶಸ್ತಿಗೆ ಕಲ್ಪ ಫುಡ್ ಇಂಡಸ್ಟ್ರಿಯ ಮಾಲಕ ಕನಕಮಜಲು ಗ್ರಾಮದ ಮನೋಜ್ ನರಿಯೂರು ಆಯ್ಕೆಯಾಗಿದ್ದು, ಎಡಮಂಗಲದಲ್ಲಿ ಸೆ. 6ರಂದು ನಡೆದ ಸಮಾರಂಭದಲ್ಲಿ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಇವರು ಉತ್ತಮ ಕೃಷಿಕರಾಗಿದ್ದು, ಉದ್ಯಮಿಯಾಗಿದ್ದಾರೆ.