ಸೆ.9ರಂದು ಪಂದ್ಯಾಟ, 5 ವಲಯಗಳ ಬಾಲಕ-ಬಾಲಕಿಯರ 20 ಬಲಿಷ್ಠ ತಂಡಗಳು ಭಾಗಿ
ಪುತ್ತೂರು: ಕಬಡ್ಡಿಯಲ್ಲಿ ಎರಡು ಬಾರಿ ರಾಷ್ಟ್ರ ಮಟ್ಟದಲ್ಲಿ ಮಿಂಚಿದ ದರ್ಬೆ ಲಿಟ್ಸ್ ಫ್ಲವರ್ ಹಿ. ಪ್ರಾ ಶಾಲಾ ಕ್ರೀಡಾಂಗಣದಲ್ಲಿ ಸೆ.9ರಂದು ತಾಲೂಕು ಮಟ್ಟದ ಮಟ್ಟದ 14ರ ವಯೋಮಾನದ ಬಾಲಕ-ಬಾಲಕಿಯರ ಕಬಡ್ಡಿ ಪಂದ್ಯಾಟ ನಡೆಯಲಿದೆ. ಪ್ರೋ.ಮಾದರಿಯಲ್ಲಿ ಮ್ಯಾಟ್ ಅಂಕಣದಲ್ಲಿ ನಡೆಯಲಿರುವ ಪಂದ್ಯಾಟಕ್ಕೆ ಸಹಿತ ಸಕಲ ಸಿದ್ದತೆಗಳನ್ನು ಶಾಲಾ ಆಡಳಿತ ಮಂಡಳಿ ಮಾಡಿಕೊಂಡಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಲಿಟ್ಸ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆ ದರ್ಬೆ ಪುತ್ತೂರು ಇದರ ಆಶ್ರಯದಲ್ಲಿ ತಾಲೂಕು ಮಟ್ಟದ 14ರ ವಯೋಮಾನದ ಕಬಡ್ಡಿ ಪಂದ್ಯಾಟ ಆಯೋಜನೆಗೊಂಡಿದೆ. ಪ್ರೊ| ಕಬಡ್ಡಿ ಮಾದರಿಯಲ್ಲಿಯೇ ಮ್ಯಾಟ್ ಅಂಕಣದಲ್ಲಿ ಬಾಲಕ-ಬಾಲಕಿಯರು ಪ್ರತಿಭೆಗಳನ್ನು ಪ್ರದರ್ಶಿಸಲಿದ್ದಾರೆ. ಪಂದ್ಯಾಟಕ್ಕೆ 5000 ಚದರ ಅಡಿ ವಿಸ್ತೀರ್ಣದ ವಿಶಾಲ ಕ್ರೀಡಾಂಗಣ, ಮ್ಯಾಟ್ ಅಂಕಣಗಳು, ಮಳೆಯಿಂದ ತಪ್ಪಿಸಿಕೊಳ್ಳಲು ವಿಶಾಲವಾದ ಛಾವಣೆಗಳ ನಿರ್ಮಾಣ, 60 ಚದರ ಅಡಿ ಉದ್ದದ ಸುಸಜ್ಜಿತ ವೇದಿಕೆಗಳು ನಿರ್ಮಾಣಗೊಂಡಿದೆ. ಪಂದ್ಯಾಟದ ಯಶಸ್ವಿಗಾಗಿ ಉಪ ಸಮಿತಿಗಳನ್ನು ರಚಿಸಿಕೊಂಡು ಎಲ್ಲಾ ಪೂರ್ವ ತಯಾರಿಗಳನ್ನು ಮಾಡಿಕೊಂಡಿದ್ದು ಕ್ರೀಡಾಭಿಮಾನಿಗಳನ್ನು ಕೈಬೀಸಿ ಕರೆಯುತ್ತಿದೆ.

20 ತಂಡಗಳು ಭಾಗಿ:
ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಐದು ವಲಯಗಳ 10 ಬಾಲಕರ ತಂಡ ಹಾಗೂ 10 ಬಾಲಕಿಯರ ತಂಡಗಳು ಸೇರಿದಂತೆ ಒಟ್ಟು 20 ಬಲಿಷ್ಠ ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಲಿದೆ. ವಿಜೇತ ತಂಡಗಳಿಗೆ ಮೂರು ಅಡಿ ಎತ್ತರದ ಆಕರ್ಷಕ ಟ್ರೋಫಿ, ಫೈನಲ್ ನಲ್ಲಿ ವಿಜೇತ ತಂಡಗಳಿಗೆ 5 ವೈಯಕ್ತಿಕ ಬಹುಮಾನಗಳನ್ನು ನೀಡಲಾಗುವುದು.
ವೀಕ್ಷಣೆಗೆ ಗ್ಯಾಲರಿ ವ್ಯವಸ್ಥೆ:
ವಿಶಾಲವಾದ ಸಭಾಂಗಣದಲ್ಲಿ ನಡೆಯುವ ಕಬಡ್ಡಿ ಪಂದ್ಯಾಟದ ವೀಕ್ಷಣೆಗೆ ಅನುಕೂಲವಾಗುವಂತೆ ಗ್ಯಾಲರಿ ಸೌಲಭ್ಯವನ್ನು ಕಲ್ಪಿಸಲಾಗಿದೆ. ಇದರಲ್ಲಿ ಸುಮಾರು 5000 ಮಂದಿಗೆ ಕುಳಿತು ಪಂದ್ಯಾಟವನ್ನು ವೀಕ್ಷಿಸಬಹುದಾಗಿದೆ.
ಎರಡು ರಾಷ್ಟ್ರಮಟ್ಟದಲ್ಲಿ ಆಯ್ಕೆಯಾಗಿದ್ದ ಲಿಟ್ಲ್ ಫ್ಲವರ್ ಶಾಲೆ:
14ರ ವಯೋಮಾನದ ಕಬಡ್ಡಿ ಪಂದ್ಯಾಟದ ಬಾಲಕಿಯರ ವಿಭಾಗದಲ್ಲಿ ಲಿಟ್ಲ್ ಫ್ಲವರ್ ಶಾಲಾ ತಂಡವು 2023-24 ಹಾಗೂ 2024-25ನೇ ಸಾಲಿನಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಬಾಲಕಿಯರ ವಿಭಾಗದಲ್ಲಿ ಲಿಟ್ಲ್ ಫ್ಲವರ್ ಶಾಲಾ ತಂಡವು ರಾಜ್ಯದಲ್ಲಿಯೇ ಬಲಿಷ್ಠ ತಂಡವಾಗಿ ಹೊರಹೊಮ್ಮಿದೆ.
ಶತಮಾನೋತ್ಸವ ಸಂಭ್ರಮದಲ್ಲಿರುವ ಶಾಲೆ;
ದರ್ಜೆ ಲಿಟ್ಲ್ ಫ್ಲವರ್ ಹಿ.ಪ್ರಾ ಶಾಲೆಯು ಈಗಾಗಲೇ 98 ವರ್ಷಗಳನ್ನು ಪೂರೈಸಿದೆ. ಇನ್ನು ಎರಡು ವರ್ಷದಲ್ಲಿ ಶತಮಾನೋತ್ಸವವನ್ನು ಅಚರಿಸಲಿದೆ. ಕನ್ನಡ ಮಾಧ್ಯಮದಲ್ಲಿ ಅತೀ ಹೆಚ್ಚು ವಿದ್ಯಾರ್ಥಿಗಳಿರುವ ತಾಲೂಕಿನ ಎಕೈಕ ಶಾಲೆಯಾಗಿದೆ ಎಂಬ ಹೆಗ್ಗಲಿಕೆಗೆ ಪಾತ್ರವಾಗಿದೆ.
ಪಂದ್ಯಾವಳಿಯಲ್ಲಿ ಬೆಳಿಗ್ಗೆ ನಡೆಯುವ ಉದ್ಘಾಟನೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ನಗರ ಸಭಾ ಅಧ್ಯಕ್ಷರು, ಸದಸ್ಯರು ಸಹಿತ ಅಧಿಕಾರಿಗಳು ಸಹಿತ ಹಲವು ಮಂದಿ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಣೆ ನಡೆಯಲಿದೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.