ಉಪ್ಪಿನಂಗಡಿ: ಇಲ್ಲಿನ ಶ್ರೀ ಲಕ್ಷ್ಮೀ ವೆಂಕಟರಮಣ ದೇಗುಲದಲ್ಲಿ ಅನಂತ ಚತುರ್ದಶಿ ಅಂಗವಾಗಿ ಮುಂಜಾನೆ ಕಲಶ ತುಂಬುವುದು ಮಧ್ಯಾಹ್ನ ರಾಮ ನಾಮ ಜಪ, ಬಳಿಕ ಮಹಾಪೂಜೆ, ಪ್ರದಕ್ಷಿಣೆ ನಮಸ್ಕಾರ, ರಾತ್ರಿ ಭಜನೆ ನಡೆಯಿತು.
ಈ ಸಂದರ್ಭದಲ್ಲಿ ಶ್ರೀ ದೇವಳದ ಆಡಳಿತ ಮೊಕ್ತೇಸರರಾದ ಬೇಕಲ್ ಗಣೇಶ ಶೆಣೈ, ಮೊಕ್ತೇಸರರಾದ ಕೆ.ಅನಂತರಾಯ ಕಿಣಿ, ಯು. ನಾಗರಾಜ ಭಟ್, ಪಿ.ದೇವಿದಾಸ ಭಟ್, ಪ್ರಮುಖರಾದ ಕರಾಯ ಗಣೇಶ ನಾಯಕ್, ಸತೀಶ ನಾಯಕ್, ಪಿ ಹರೀಶ ಪೈ, ಕೆ.ರಾಜೇಶ ನಾಯಕ್, ಯು.ರಾಜೇಶ ಪೈ, ಕೆ.ದಾಮೋದರ ಪ್ರಭು, ಕೆ.ಮಾಧವ ನಾಯಕ್, ಕೆ.ರಾಘವೇಂದ್ರ ಪ್ರಭು, ನೀನಿ ಸಂತೋಷ ಕಾಮತ್, ಡಾ.ದಾಮೋದರ ನಾಯಕ್, ಕೆ.ಗಣೇಶ ಭಟ್, ಯಂ ಗಣೇಶ ಭಟ್, ರಾಮನಗರ ವೈ ವೆಂಕಟೇಶ್ ಶೆಣೈ, ಜುಪಿಟರ್ ಶಾಂತರಾಮ ಶೆಣೈ, ಯಂ ಶ್ರೀನಿವಾಸ ಭಟ್ ಲಕ್ಷ್ಮೀನಗರ ಉಪಸ್ಥಿತರಿದ್ದು, ವಿಧಿ ವಿಧಾನವನ್ನು ಅರ್ಚಕರಾದ ಪಿ.ಸುಬ್ರಹ್ಮಣ್ಯ ಭಟ್, ರವೀಂದ್ರ ಭಟ್ ನಡೆಸಿಕೊಟ್ಟರು.