ಕಡಬ: ಕಡಬ ಐಐಸಿಟಿ ವಿದ್ಯಾಸಂಸ್ಥೆಯಲ್ಲಿ ಮೊಂಟೇಸರಿ ಪ್ರಶಿಕ್ಷಣಾರ್ಥಿಗಳಿಂದ ಶಿಕ್ಷಕರ ದಿನಾಚರಣೆ, ಈದ್ ಮಿಲಾದ್ ಹಾಗೂ ಓಣಂ ಆಚರಣೆ ಸೆ.7ರಂದು ಆಚರಿಸಿದರು.
ಮುಖ್ಯ ಅತಿಥಿ ಪಡುಬೆಟ್ಟು ಶಾಲೆಯ ದೈಹಿಕ ಶಿಕ್ಷಕಿ ಕಮಲಾಕ್ಷಿ ಮಾತನಾಡಿ, ಮನುಷ್ಯನ ಮನಸ್ಸು ಮರ್ಕಟಗಳಂತೆ ಆಗಬಾರದು, ಪ್ರಪ್ರತಿಯೊಬ್ಬರಿಗೂ ತಾಯಿಯೇ ಮೊದಲ ಗುರು, ಬಳಿಕ ಶಾಲಾ ಶಿಕ್ಷಕರೇ ದಾರಿದೀಪರು. ಗುರುಗೆ ಸಮಾಜದಲ್ಲಿ ಪವಿತ್ರ ಸ್ಥಾನವಿದ್ದು, ಗುರುವಿನ ಪ್ರಾಮುಖ್ಯತೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು, ಅದೇ ರೀತಿ ನಮ್ಮ ಜೀವನದಲ್ಲಿ ಬದುಕು ಒಂದು ಸವಾಲಾಗಿದೆ. ನಮ್ಮ ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಂಡಾಗ ಮಾತ್ರ ಶ್ರೇಷ್ಠ ವ್ಯಕ್ತಿತ್ವ ರೂಪುಗೊಳ್ಳುಲು ಸಾಧ್ಯ ಎಂದರು.
ಮುಬಶೀರಾ ಅವರು ಮಾತನಾಡಿ, ಮಹಮ್ಮದ್ ಪೈಗಂಬರ್ ಜಗತ್ತಿಗೆ ಶಾಂತಿ, ಸಹನೆಯ, ಸಂದೇಶದೊಂದಿಗೆ ಪ್ರತಿಯೊಬ್ಬರಿಗೂ ಪ್ರೇರಣಾ ಶಕ್ತಿಯಾಗಿದ್ದರು ಅವರು ಕೇವಲ ಧರ್ಮವನ್ನು ಬೋಧಿಸದೆ ಬದುಕುವ ಶೈಲಿ, ಪ್ರೀತಿ, ಶಾಂತಿ ಮತ್ತು ಕರುಣೆ ಉತ್ತಮ ಆಡಳಿತದ ಸಂದೇಶ ನೀಡಿದ ಮಹಾನ್ ಆದರ್ಶಪುರುಷರಾಗಿದ್ದರು ನಮಗೆಲ್ಲ ಎಂದರು.ಮೇರಿ ತೇಜಲ್ ಅವರು ಓಣಂ ಹಬ್ಬದ ವಿಶೇಷತೆ ಮತ್ತು ಅದರ ಪ್ರಾಮುಖ್ಯತೆಗಳ ಬಗ್ಗೆ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರ್ಯಕ್ರಮ ಸಂಯೋಜಕಿ ಪಾರ್ವತಿ ವಹಿಸಿ ನಮಗೆ ದಾರಿ ತೋರಿಸುವ, ಜ್ಞಾನ ನೀಡುವ, ಜೀವನದ ಬೆಳಕನ್ನು ಹಂಚುವ ಗುರುಗಳ ಗೌರವ ದಿನ ನಮ್ಮೆಲ್ಲಾ ಶಿಕ್ಷಕರಿಗೆ ಕೃತಜ್ಞತೆ ಸಲ್ಲಿಸುವ ಅಪೂರ್ವ ಅವಕಾಶ. ಒಂದೆಡೆಯಾದರೆ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮದಿನದ ಸ್ಮರಣೆ, ಮಾನವತೆಯ ಸಂದೇಶ ಹಾಗೂ ಸಹೋದರತ್ವದ ಹಬ್ಬ ಆಚರಣೆ ಮತ್ತೊಂದಡೆಯಾದರೆ, ಕೇರಳದ ಸಂಸ್ಕೃತಿ-ಸಾಂಪ್ರದಾಯಿಕ ಹಬ್ಬ. ಸಮೃದ್ಧಿ, ಬಾಂಧವ್ಯ ಮತ್ತು ಸಂತೋಷದ ಸಂಕೇತ ಹಬ್ಬವಾದ ಓಣಂ. ಈ ಮೂರು ಹಬ್ಬಗಳನ್ನು ಒಂದೇ ವೇದಿಕೆಯಲ್ಲಿ ಆಚರಿಸುತ್ತಿರುವುದು ನಿಜಕ್ಕೂ ಸೌಹಾರ್ದದ, ಏಕತೆಯ ಮತ್ತು ಸಂಸ್ಕೃತಿ ಸಂಭ್ರಮದ ಸಂಕೇತವಾಗಿದೆ ಎಂದರು.
ಪ್ರಶಿಕ್ಷಣಾರ್ಥಿಗಳಿಗೆ ವಿವಿಧ ರೀತಿಯ ಆಟೋಟ ಸ್ಪರ್ಧೆಗಳನ್ನು ನಡೆಸಿ ವಿಜೇತರಿಗೆ ಬಹುಮಾನವನ್ನು ನೀಡಲಾಯಿತು. ಉಪನ್ಯಾಸಕಿ ಭಾಗ್ಯಲಕ್ಷ್ಮಿ.ಎಸ್ ಹಾಗೂ ಸುಶ್ಮಿತಾ ಉಪಸ್ಥಿತರಿದ್ದರು. ಶಿಕ್ಷಣ ಸಂಸ್ಥೆಯ ಮುಖ್ಯಸ್ಥೆ ಅನಿತಾ ಸ್ವಾಗತಿಸಿದರು, ಮೋಹಿನಿ ಕಾರ್ಯಕ್ರಮ ನಿರೂಪಿಸಿದರು, ಜಯಶ್ರೀ ವಂದಿಸಿದರು.