ಪುತ್ತೂರು: ಐಕ್ಯ ಕಲಾ-ಸೇವಾ ಟ್ರಸ್ಟ್ ಪುತ್ತೂರು ಇದರ ವಾರ್ಷಿಕ ಮಹಾಸಭೆಯು ರೋಟರಿ ಜಿ.ಎಲ್ ಸಭಾ ಭವನದಲ್ಲಿ ಸೆ.7ರಂದು ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಪುತ್ತೂರಿನ ವೈದ್ಯರು ಹಾಗೂ ಸಂಪ್ಯ ಶ್ರೀ ಮಹಾ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಡಾ. ಸುರೇಶ್ ಪುತ್ತೂರಾಯರವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಈ ಒಂದು ಯುವಕರ ತಂಡ ಇನ್ನಷ್ಟು ಸಮಾಜಮುಖಿ ಕೆಲಸಗಳನ್ನು ಮಾಡುವುದರ ಮೂಲಕ ಪುತ್ತೂರಿನಲ್ಲಿ ಮಾತ್ರವಲ್ಲದೆ ಹತ್ತೂರಲ್ಲೂ “ಐಕ್ಯ ಕಲಾ-ಸೇವಾ ಟ್ರಸ್ಟ್” ನ ಹೆಸರು ಪಸರಿಸಲಿ ಎಂದು ಶುಭ ಹಾರೈಸಿದರು.
ಜೇಸಿಐ ತರಬೇತುದಾರ ದಾಮೋದರ ಪಾಟಾಳಿ” ಇವರಿಂದ “ವ್ಯಕ್ತಿತ್ವ ವಿಕಸನ, ನಾಯಕತ್ವ, ಟ್ರಸ್ಟ್ ನ ಜವಾಬ್ದಾರಿ”ಗಳ ಮಾಹಿತಿ ತರಬೇತಿ ಕಾರ್ಯಗಾರ ನಡೆಯಿತು. ಐಕ್ಯ ಕಲಾ ಸೇವಾ ಟ್ರಸ್ಟ್ ಅಧ್ಯಕ್ಷ ಚೇತನ್ ಕುಮಾರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ದಕ್ಷಿತ್ ಎಸ್.ಯಂ ವರದಿ ವಾಚಿಸಿದರು ಹಾಗೂ ಕಾರ್ತಿಕ್ ಕೆ ಲೆಕ್ಕಪತ್ರ ಮಂಡಿಸಿದರು.
ಪ್ರಸಕ್ತ 2025-26 ನೇ ಸಾಲಿನ ಪದಾಧಿಕಾರಿಗಳಾಗಿ ಅಧ್ಯಕ್ಷರಾಗಿ ಸಚಿನ್ ಕುಮಾರ್, ಉಪಾಧ್ಯಕ್ಷರಾಗಿ ಪ್ರಿಯಾಂಕ ಮೋಹನ್, ಕಾರ್ಯದರ್ಶಿಯಾಗಿ ಅಭಿಷೇಕ್ ಶೆಟ್ಟಿ, ಜೊತೆ ಕಾರ್ಯದರ್ಶಿಯಾಗಿ ಕಾವ್ಯ ಮಿಥುನ್, ಖಜಾಂಜಿಯಾಗಿ ಕಾರ್ತಿಕ್ ಕೆ, ಲೆಕ್ಕಪರಿಶೋಧಕರಾಗಿ ದಕ್ಷಿತ್ ಎಸ್ ಎಂ, ಸಂಚಾಲಕರಾಗಿ ಉತ್ತೇಶ್ ಬಿ, ಅವಿನಾಶ್ ವಿ ಆರ್ ಇವರುಗಳನ್ನು ಆಯ್ಕೆ ಮಾಡಲಾಯಿತು. ಪ್ರಿಯಾಂಕ ಮೋಹನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.