ಪುತ್ತೂರು: ಸಾಲ್ಮರ ದಾರುಲ್ ಹಸನಿಯಾ ಅಕಾಡೆಮಿಗೆ ಸಯ್ಯಿದ್ ಕೆ.ಎಸ್ ಅಲೀ ತಂಙಳ್ ಕುಂಬೋಳ್ ಅವರು ಭೇಟಿ ನೀಡಿ, ಸಂಸ್ಥೆಯ ನೂತನ ಕಟ್ಟಡ ಕಾಮಗಾರಿಯನ್ನು ವೀಕ್ಷಿಸಿ ಪ್ರಾರ್ಥನೆ ನಡೆಸಿದರು.

ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹಸನ್ ಹಾಜಿ ಸಿಟಿ ಬಝಾರ್, ಗಲ್ಫ್ ಘಟಕದ ನಾಯಕರಾದ ಆಸಿಫ್ ಹಾಜಿ ದರ್ಬೆ, ಜುಬೈಲ್, ಫೈರೋಝ್ ಹಾಜಿ, ಟ್ರಸ್ಟ್ ಸದಸ್ಯರಾದ ಅಬ್ದುಲ್ ರಹಿಮಾನ್ ಹಾಜಿ ಆರ್.ಟಿ.ಒ, ಬಶೀರ್ ಹಾಜಿ ದರ್ಬೆ, ರಿಯಾಝ್ ಇಂಜಿನಿಯರ್, ಕೆ.ಎಂ.ಎ ಕೊಡುಂಗಾಯಿ, ಹಿತೈಷಿಗಳಾದ ಹುಸೈನ್ ಹಾಜಿ ಕೋಡಿಂಬಾಡಿ, ಅಬ್ದುರ್ರಶೀದ್ ಹಾಜಿ ಪರ್ಲಡ್ಕ, ಅಶ್ರಫ್ ಪರ್ಲಡ್ಕ, ಹನೀಫ್ ಹಾಜಿ ಅರಿಯಮೂಲೆ, ಸಿನಾನ್ ಪರ್ಲಡ್ಕ ಉಪಸ್ಥಿತರಿದ್ದರು. ಸಂಸ್ಥೆಯ ಸಂಯೋಜಕ ಅನ್ವರ್ ಸ್ವಾದಿಕ್ ಮುಸ್ಲಿಯಾರ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.