ಸೆ.12ಕ್ಕೆ ಮಂಗಳೂರಿನಲ್ಲಿ ಯುಇಎ ವತಿಯಿಂದ ಕಮ್ಯೂನಿಟಿ ಯೂತ್ ಲೀಡರ‍್ಸ್ ಮೀಟ್ -ಪುತ್ತೂರಿನಿಂದ ಉಚಿತ ಬಸ್‌ ವ್ಯವಸ್ಥೆ

0

ಪುತ್ತೂರು: ಯುನೈಟೆಡ್ ಎಂಪವರ್‌ಮೆಂಟ್ ಅಸೋಸಿಯೇಶನ್ ರಾಜ್ಯ ಸಮಿತಿ(ಯುಇಎ) ವತಿಯಿಂದ ಸೆ.12ರಂದು ಮಂಗಳೂರಿನ ಇಂಡಿಯಾನ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯಲಿರುವ ಕಮ್ಯೂನಿಟಿ ಯೂತ್ ಲೀಡರ‍್ಸ್ ಮೀಟ್ -2025 ಕಾರ್ಯಕ್ರಮ ನಡೆಯಲಿದ್ದು ಪುತ್ತೂರಿನಿಂದ ತೆರಳುವವರಿಗೆ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ಯುನೈಟೆಡ್ ಎಂಪವರ್‌ಮೆಂಟ್ ಅಸೋಸಿಯೇಶನ್ ಪುತ್ತೂರು ಘಟಕದ ಅಧ್ಯಕ್ಷ ಅಬ್ದುಲ್ ರಜಾಕ್ ಬಪ್ಪಳಿಗೆ ಅವರು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.


ಯುವ ನಾಯಕತ್ವ, ವ್ಯಕ್ತಿ ಮಾರ್ಗದರ್ಶನ ಮತ್ತು ಸಮಾಜ ನಿರ್ಮಾಣದಲ್ಲಿ ಯುವಕರ ಪಾತ್ರ ಬಲಪಡಿಸುವ ಉದ್ದೇಶದಿಂದ ಪುತ್ತೂರು ಸಹಿತ 21 ವಲಯದ ಯುವಕರನ್ನು ಒಗ್ಗೂಡಿಸಿ ಕಾರ್ಯಕ್ರಮ ನಡೆಯಲಿದೆ. ಪುತ್ತೂರಿನಿಂದ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಉಚಿತ ಬಸ್‌ನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದವರು ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ಯುಇಎ ಇದರ ರಾಜ್ಯ ಸಮಿತಿ ಸದಸ್ಯ ಸಿರಾಜುದ್ದೀನ್ ಪರ್ಲಡ್ಕ, ಪುತ್ತೂರು ವಲಯದ ಪ್ರಧಾನ ಕಾರ್ಯದರ್ಶಿ ಇರ್ಷಾದ್, ಖಜಾಂಜಿ ರವೂಫ್ ಪರ್ಲಡ್ಕ, ಜೊತೆಕಾರ್ಯದರ್ಶಿ ಅಶ್ರಫ್ ಮಕ್ವೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here