ಪುತ್ತೂರು: ಕುವೆಟ್ಟು ಗ್ರಾಮದ ನಾನಾಜೆ ಸಮೀಪದ ಬದ್ರಕಜೆ ನಿವಾಸಿ ಲೀಲಾವತಿ ಅವರಿಗೆ ದೊಣ್ಣೆಯಿಂದ ಹಲ್ಲೆ ಮಾಡಿದ ಅವರ ಅಳಿಯ ಪುತ್ತೂರು ತಾಲೂಕಿನ ಕುರಿಯ ನಿವಾಸಿ ಕೂಲಿ ಕಾರ್ಮಿಕ ಸೂರಜ್ (32) ಅತ್ತೆ ಮನೆಯಲ್ಲೇ ಸೆ.8ರಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ವರದಿಯಾಗಿದೆ.
12 ವರ್ಷಗಳ ಹಿಂದೆ ಲೀಲಾವತಿ ಅವರ ಪುತ್ರಿ ಚಂದ್ರಿಕಾ ಜೊತೆ ಸೂರಜ್ನ ವಿವಾಹ ನಡೆದಿತ್ತು. 11 ಮತ್ತು 4 ವರ್ಷ ವಯಸ್ಸಿನ ಇಬ್ಬರು ಪುತ್ರರಿದ್ದಾರೆ. ಸೂರಜ್ ಗಾರೆ ಕೆಲಸ ಮಾಡಿಕೊಂಡಿದ್ದರು.
ಮನೆಯ ಒಳಗಿನಿಂದ ಬಾಗಿಲಿನ ಬೀಗ ಹಾಕಿಕೊಂಡು ನೇಣು ಬಿಗಿದು ಸೂರಜ್ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.