ಸವಣೂರು: ಶ್ರೀ ಕೃಷ್ಣ ಸೇವಾ ಟ್ರಸ್ಟ್ ಪುತ್ತೂರು ವಲಯ ಕಡಬ ಇದರ ವಾರ್ಷಿಕ ಮಹಾಸಭೆಯು ಸವಣೂರು ವಿನಾಯಕ ಸಭಾಭವನದಲ್ಲಿ ಟ್ರಸ್ಟ್ ಅಧ್ಯಕ್ಷ, ನಾಟಿ ವೈದ್ಯ ವಾಸುದೇವ ಇಡ್ಯಾಡಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಬೆಳಿಗ್ಗೆ ಗಣಹೋಮ ನಂತರ ಯಕ್ಷಗಾನ ತಾಳಮದ್ದಳೆ, ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ, ಪುಸ್ತಕ ವಿತರಣೆ ನಡೆಯಿತು.
ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ದ.ಕ.ಜಿಲ್ಲಾ ಗೊಲ್ಲ ಸಂಘ ಇದರ ಗೌರವಾಧ್ಯಕ್ಷರಾದ ಪ್ರಮೋದ್ ಕುಮಾರ್ ಉಳ್ಳಾಲ, ಅಧ್ಯಕ್ಷರಾದ ಟಿ.ಎಸ್.ಕುಮಾರಸ್ವಾಮಿ, ರಾಜ್ಯ ಅಲೆಮಾರಿ-ಅರೆ ಅಲೆಮಾರಿ ನಿಗಮದ ನಿರ್ದೇಶಕ ಅನಂತ ಕೃಷ್ಣ ಉಪಸ್ಥಿತರಿದ್ದರು. ಕೋಶಾಧಿಕಾರಿ ಬಾಲಕೃಷ್ಣ ಬಸ್ತಿ ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ಸಂಘದ ಸದಸ್ಯರಾದ ವೀರಪ್ಪ ಪಾಣಿಗ,ಪರಮೇಶ್ವರ ಇಡ್ಯಾಡಿ, ರಾಜೇಂದ್ರ ಪ್ರಸಾದ್ ಇಡ್ಯಾಡಿ, ವೆಂಕಟೇಶ ಇಡ್ಯಾಡಿ, ಯೋಗೀಶ್ ಇಡ್ಯಾಡಿ,ಬಾಲಕೃಷ್ಣ ಇಚ್ಲಂಪಾಡಿ, ಬಾಲಕೃಷ್ಣ ಬಸ್ತಿ, ಚಂದ್ರಶೇಖರ ಇಡ್ಯಾಡಿ, ಮಹಾಲಕ್ಷ್ಮಿ ಇಡ್ಯಾಡಿ, ವಸಂತಿ ಬಸ್ತಿ, ಸರಸ್ವತಿ ಪೂವ, ಶಶಿಕಲಾ ಇಡ್ಯಾಡಿ, ಶೋಭಾ ಇಚಿಲಂಪಾಡಿ, ದಿವಾಕರ ಬಸ್ತಿ, ಶ್ರೀನಿವಾಸ ಬಸ್ತಿ, ಕೇಶವ ಬಸ್ತಿ, ವಿಜಯ ಬಸ್ತಿ, ದಯಾನಂದ ಪಾಣಿಗ, ಪುರುಷೋತ್ತಮ ನೆಲ್ಯಾಡಿ, ಸುಂದರ ಬೆದ್ರಾಜೆ, ದಿವಾಕರ ಬೆದ್ರಾಜೆ, ಕೃಷ್ಣಯ್ಯ ಸರ್ವೆ, ಶಾಂತಾರಾಮ ಕೂಡಾಳ, ದಿವಾಕರ ಕೂಡಾಳ, ಸುರೇಶ್ ಕಾಪಿಕಾಡು, ಪ್ರಮೀಳಾ ಇಡ್ಯಾಡಿ, ಮೌಲ್ಯ ಪ್ರಸಾದ್, ಸಂಧ್ಯಾ ಇಡ್ಯಾಡಿ, ನಿವೇದಿತಾ ಇಡ್ಯಾಡಿ, ಗಣೇಶ್ ಪೂವ, ಭಾಸ್ಕರ ಪೂವ, ಶ್ರೇಯಾ ಇಡ್ಯಾಡಿ ಮೊದಲಾದವರು ಉಪಸ್ಥಿತರಿದ್ದರು.
ಆನಂದ ಇಡ್ಯಾಡಿ ಸ್ವಾಗತಿಸಿದರು. ಕಾರ್ಯದರ್ಶಿ ಶ್ರೀಧರ ಇಡ್ಯಾಡಿ ವರದಿ ವಾಚಿಸಿದರು.ಜಗದೀಶ್ ಇಡ್ಯಾಡಿ ವಂದಿಸಿದರು.ರಾಜೇಶ್ ಇಡ್ಯಾಡಿ ಕಾರ್ಯಕ್ರಮ ನಿರ್ವಹಿಸಿದರು.
ಶ್ರೀ ಕೃಷ್ಣ ಸೇವಾ ಟ್ರಸ್ಟ್ ಪುತ್ತೂರು ವಲಯ ಕಡಬ ಇದರ ಅಧ್ಯಕ್ಷರಾಗಿ ಇ.ಎಸ್.ವಾಸುದೇವ ಇಡ್ಯಾಡಿ, ಕಾರ್ಯದರ್ಶಿ ಶ್ರೀಧರ ಇಡ್ಯಾಡಿ ಅವರನ್ನು ಆಯ್ಕೆ ಮಾಡಲಾಯಿತು.