ವಕೀಲ,ಹವ್ಯಾಸಿ ಛಾಯಾಗ್ರಾಹಕ ತೀರ್ಥಪ್ರಸಾದ್ ಮುಂಗ್ಲಿಮನೆ ನಿಧನ

0

ಪುತ್ತೂರು: ಕಬಕ ಗ್ರಾಮದ ಮುಂಗ್ಲಿಮನೆ ದಿ| ಶಿವಪ್ಪ ಗೌಡ-ದಿ| ನಾಗಮ್ಮ ದಂಪತಿ ಪುತ್ರ, ವೃತ್ತಿಯಲ್ಲಿ ವಕೀಲರಾಗಿದ್ದು ಹವ್ಯಾಸಿ ಛಾಯಾಗ್ರಾಹಕರಾಗಿಯೂ ಚಿರಪರಿಚಿತರಾಗಿದ್ದ, ತೀರ್ಥಪ್ರಸಾದ್ ಮುಂಗ್ಲಿಮನೆ (54ವ.)ರವರು ಅಲ್ಪಕಾಲದ ಅಸೌಖ್ಯದಿಂದಾಗಿ ಸೆ.11ರಂದು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ನಿಧನರಾದರು.


ಅವಿವಾಹಿತರಾಗಿದ್ದ ಇವರು ಸಹೋದರರಾದ ಕೆಇಎಲ್‌ನ ನಿವೃತ್ತ ಮ್ಯಾನೇಜರ್ ಬಾಲಕೃಷ್ಣ, ತಾಲೂಕು ಒಕ್ಕಲಿಗ ಗೌಡ ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ, ಬೆಳ್ಳಾರೆ ರಮ್ಯ ಸ್ಟುಡಿಯೋ ಮಾಲಕ ಜನಾರ್ದನ, ತೆಂಕಿಲ ವಿವೇಕಾನಂದ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಭಾಸ್ಕರ, ಕೃಷಿಕ ಸೋಮಶೇಖರ,ಕಲ್ಲಡ್ಕದಲ್ಲಿ ಮೆಸ್ಕಾಂ ಉದ್ಯೋಗಿಯಾಗಿರುವ ಯುವರಾಜ, ಮಿತ್ತೂರು ಮೆಸ್ಕಾಂನಲ್ಲಿರುವ ಶಶಿಧರ ಹಾಗೂ ಸಹೋದರಿ, ಸಂಪಾಜೆ ಗ್ರಾ.ಪಂ.ಅಧ್ಯಕ್ಷೆ ರಮಾದೇವಿ ಕಳಗಿ, ಬಾವ, ಕಡಬ ಪಟ್ಟಣ ಪಂಚಾಯತ್ ಸದಸ್ಯೆ ಲೀಲಾವತಿ ಶಿವರಾಮ್ ಸೇರಿದಂತೆ ಅತ್ತಿಗೆಯಂದಿರು, ನಾದಿನಿಯರನ್ನು ಅಗಲಿದ್ದಾರೆ. ಹಲವು ಗಣ್ಯರು ಮೃತರ ಮನೆಗೆ ಭೇಟಿ ನೀಡಿ ಸಂತಾಪ ಸೂಚಿಸಿದರು.ಮೃತರ ಅಂತ್ಯಕ್ರಿಯೆ ಸೆ.11ರಂದು ಮುಂಗ್ಲಿಮನೆಯಲ್ಲಿ ನಡೆಯಿತು.

LEAVE A REPLY

Please enter your comment!
Please enter your name here