ಪುತ್ತೂರು: ಕೇಂದ್ರ ಸರ್ಕಾರದ “Scheme for Special Assistance to State for Capital Investment” ಯೋಜನೆಯ “Children and Adolescents Libraries and Digital Infrastructure” ಕಾರ್ಯಕ್ರಮದ ಅಡಿಯಲ್ಲಿ ನರಿಮೊಗರು ಗ್ರಾಮ ಪಂಚಾಯತ್ ಅರಿವು ಕೇಂದ್ರದ ಶಾಖಾ ಗ್ರಂಥಾಲಯವನ್ನು ಶಾಂತಿಗೋಡು ಗ್ರಾಮದ ದ.ಕ.ಜಿ.ಪಂ.ಹಿ.ಪ್ರ ಶಾಲೆ ಆನಡ್ಕದಲ್ಲಿ ಸೆ.11ರಂದು ಉದ್ಘಾಟಿಸಲಾಯಿತು.
ಪುತ್ತೂರು ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ ಶಾಖಾ ಗ್ರಂಥಾಲಯವನ್ನು ಉದ್ಘಾಟಿಸಿದರು.ನರಿಮೊಗರು ಗ್ರಾಮ ಪಂಚಾಯತ್ ಅಧ್ಯಕ್ಷೆ ಹರಿಣಿ ಅವರ ಅಧ್ಯಕ್ಷತೆಯಲ್ಲಿ ಉದ್ಘಾಟನಾ ಸಭೆಯು ನೆರವೇರಿತು.
ಈ ಸಭೆಯಲ್ಲಿ ನರಿಮೊಗರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಉಮೇಶ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವಿ ಚಂದ್ರ ಯು., ಆನಡ್ಕ ಶಾಲೆಯ ಮಖ್ಯ ಗುರು ಫೆಲ್ಸಿಟ ಡಿ ಕುನ್ಹ, ಗ್ರಾಮ ಪಂಚಾಯತ್ ಸದಸ್ಯ ದಿನೇಶ್ ಮಜಲು, ಸುಧಾಕರ ಕುಲಾಲ್, ತಾರಾನಾಥ ಬಂಗೇರ, ಪಂಚಾಯತ್ ಕಾರ್ಯದರ್ಶಿ ಶೇಕ್ ಖಲಂದರ್ ಅಲಿ, ಅರಿವು ಕೇಂದ್ರ ಮೇಲ್ವಿಚಾರಕ ವರುಣ್ ಕುಮಾರ್, ಆನಡ್ಕ ಶಾಲೆಯ SDMC ಉಪಾಧ್ಯಕ್ಷರಾದ ಸುಜಾತ ಮರಕ್ಕೂರು, ಆನಡ್ಕ ಶಾಲೆಯ ಶಿಕ್ಷಕ ವೃಂದ, ಗ್ರಾಮಸ್ತ ಕಿಟ್ಟಣ್ಣ ಪೂಜಾರಿ, ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.