ಕಡಬ ಪಟ್ಟಣ ಪಂಚಾಯತ್ ಅಧ್ಯಕ್ಷರಾಗಿ ತಮನ್ನಾ ಜಬೀನ್, ಉಪಾಧ್ಯಕ್ಷರಾಗಿ ನೀಲಾವತಿ ಶಿವರಾಮ್ ಆಯ್ಕೆ

0

ಕಡಬ: ಇಲ್ಲಿನ ಪಟ್ಟಣ ಪಂಚಾಯತ್‌ನ 13 ಸ್ಥಾನಗಳಿಗೆ ಆ.ರಂದು ಚುನಾವಣೆ ನಡೆದಿದ್ದು, ಆ.20ರಂದು ಮತ ಎಣಿಕೆ ಕಾರ್ಯ ನಡೆದು ಸದಸ್ಯರ ಆಯ್ಕೆ ನಡೆದಿತ್ತು. ಈ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 8 ಸ್ಥಾನ ಹಾಗೂ ಬಿಜೆಪಿಗೆ 5 ಸ್ಥಾನ ಲಭಿಸಿ, ಅಧಿಕಾರ ಕಾಂಗ್ರೆಸ್ ಪಕ್ಷ ಪಡೆದುಕೊಂಡಿದೆ.


ಸೆ.12ರಂದು ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ನಡೆದಿದ್ದು, ಅಧ್ಯಕ್ಷ ಸ್ಥಾನವು ಹಿಂದುಳಿದ ವರ್ಗ ಎ ಮಹಿಳೆಗೆ ಮೀಸಲಾಗಿದ್ದು, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಈ ಹಿನ್ನಲೆಯಲ್ಲಿ ಅಧಿಕಾರ ಪಡೆದುಕೊಂಡಿರುವ ಕಾಂಗ್ರೆಸ್ ಪಕ್ಷದ ಕಳಾರ ವಾರ್ಡಿನಲ್ಲಿ ಆಯ್ಕೆಯಾದ ತಮನ್ನಾ ಜಬೀನ್ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಕಡಬ ವಾರ್ಡಿನಿಂದ ಆಯ್ಕೆಯಾದ ನೀಲಾವತಿ ಶಿವರಾಮ್ ಅವರು ಆಯ್ಕೆಯಾದರು.ಆಯ್ಕೆ ಪ್ರಕ್ರಿಯೆಯು ಕಡಬ ಪಟ್ಟಣ ಪಂಚಾಯತ್ ಸಭಾಂಗಣದಲ್ಲಿ ಕಡಬ ತಾಲೂಕು ತಹಸೀಲ್ದಾರ್ ಅವರ ನೇತೃತ್ವದಲ್ಲಿ ನಡೆಯಿತು.
ಕಡಬ ಪಟ್ಟಣ ಪಂಚಾಯತ್ ಆದ ಬಳಿಕ ಪ್ರಥಮ ಚುನಾವಣೆ ನಡೆದಿದ್ದು, ಆಡಳಿತ ಮಂಡಳಿಯು ಪ್ರಥಮವಾಗಿ ಅಸ್ತಿತ್ವಕ್ಕೆ ಬರಲಿದೆ.

LEAVE A REPLY

Please enter your comment!
Please enter your name here