ಪುತ್ತೂರು: ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ವಿಕಲ ಚೇತನರ ಯು.ಡಿ ಐಡಿ ವಿಕಲ ಚೇತನರ ಪ್ರಮಾಣ ಪತ್ರ ಶಿಬಿರವು ಆಡಳಿತ ವೈದ್ಯಾಧಿಕಾರಿಗಳಾದ ಡಾ.ಯದುರಾಜ್ ರವರ ಅಧ್ಯಕ್ಷತೆಯಲ್ಲಿ ಹಾಗೂ ಪುತ್ತೂರು ತಾಲ್ಲೂಕು ಅರೋಗ್ಯ ಅಧಿಕಾರಿಗಳಾದ ಡಾ. ದೀಪಕ್ ರೈ ರವರ ವಿಕಲ ಚೇತನರ ನೋಡೆಲ್ ಅಧಿಕಾರಿಗಳಾದ ಮಂಗಳ ಕಾಳೆ ಮಾರ್ಗದರ್ಶನದಲ್ಲಿ ಹಾಗೂ ಪುತ್ತೂರು ತಾಲ್ಲೂಕು ಪಂಚಾಯತ್ ಬಹುಮಟ್ಟ ದ ಪುನರ್ವಸತಿ ಕಾರ್ಯಕರ್ತರಾದ ನವೀನ್ ಕುಮಾರ್ ರವರ ಉಪಸ್ಥಿತಿಯಲ್ಲಿ ಸೆ.12ರಂದು ನಡೆಯಿತು.

ಈ ಸಂದರ್ಭದಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಯ ಎಲುಬು ಕೀಲು ತಜ್ಞರಾದ ಡಾ.ಅಜಯ್ ಎಂ. ಬಿ, ಸುಳ್ಯ ಸರ್ಕಾರಿ ಆಸ್ಪತ್ರೆ ಯ ನೇತ್ರ ತಜ್ಞರಾದ ಡಾ.ಅರ್ಚನಾ ಜಿ ಎಸ್, ಕಿವಿ ಮೂಗು ಗಂಟಲು ತಜ್ಞರಾದ ಡಾ.ಜೈನಾಬು ಸುನು ಆಲಿ, ಮಕ್ಕಳ ತಜ್ಞ ಡಾ.ಪ್ರಶಾಂತ್, ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಇಲಾಖೆಯ ಆಡಿಯೋಲೋಜಿಸ್ಟ್ ಸುಶಾಂತ್, ವಿಕಲ ಚೇತನರ ಪ್ರಮಾಣ ಪತ್ರ ಯು.ಡಿ. ಐಡಿ ಶಿಬಿರ ಪ್ರಮಾಣ ಶಿಬಿರವನ್ನು ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಪುತ್ತೂರು ಹಾಗೂ ಕಡಬ ತಾಲೂಕಿನ ವಿಕಲ ಚೇತನರ ಇಲ್ಲಾಖೆಯಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರಾಮೀಣ ಹಾಗೂ ನಗರಪುನರ್ ವಸತಿ ಕಾರ್ಯಕರ್ತರ ಉತ್ತಮ ಸಹಕಾರ ನೀಡಿದ್ದರು.