ರೂ.11.80 ಲಕ್ಷ ನಿವ್ವಳ ಲಾಭ | ಶೇ.8 ಡಿವಿಡೆಂಡ್ | ಪ್ರೋತ್ಸಾಹಧನ ವಿತರಣೆ | ಮಾಜಿ ಅಧ್ಯಕ್ಷ/ನಿರ್ದೇಶಕರುಗಳಿಗೆ ಗೌರವ
ಪುತ್ತೂರು: ಕೋರ್ಟ್ರಸ್ತೆಯ ವಿಶ್ವ ಸಂಕೀರ್ಣದ ಪ್ರಥಮ ಮಹಡಿಯಲ್ಲಿ ಸಹೋದರತ್ವದ ಸ್ನೇಹಮಯ ಸೇವೆ ಎಂಬ ಧ್ಯೇಯವಾಕ್ಯದೊಂದಿಗೆ ವ್ಯವಹರಿಸುತ್ತಿರುವ ಗ್ಲೋರಿಯಾ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್‌ಗೆ ಇದೀಗ ಬೆಳ್ಳಿಹಬ್ಬದ ಸಂಭ್ರಮವಾಗಿದ್ದು ಇದರ ವಾರ್ಷಿಕ ಮಹಾಸಭೆಯು ಸೆ.14 ರಂದು ಬೆಳಿಗ್ಗೆ ಮಿನಿ ವಿಧಾನಸೌಧದ ಬಳಿಯ ತಾಲೂಕು ಸರಕಾರಿ ನೌಕರರ ಸಂಘದ ಸಭಾಂಗಣದಲ್ಲಿ ಸೊಸೈಟಿ ಅಧ್ಯಕ್ಷರಾದ ರಾಕೇಶ್ ಜೆ.ಮಸ್ಕರೇನ್ಹಸ್‌ರವರ ಅಧ್ಯಕ್ಷತೆಯಲ್ಲಿ ಜರಗಿತು.
ಸದಸ್ಯತನ, ಪಾಲು ಬಂಡವಾಳ:
ವರದಿ ಸಾಲಿನ ಆರಂಭದಲ್ಲಿ 1306 ಸದಸ್ಯರು ಇದ್ದು 44 ಮಂದಿ ಹೊಸ ಸದಸ್ಯರು ಸೇರ್ಪಡೆಯಾಗಿ 9 ಮಂದಿ ಸದಸ್ಯತ್ವವನ್ನು ತ್ಯಜಿಸಿರುತ್ತಾರೆ. ಮಾರ್ಚ್ ವರ್ಷಾಂತ್ಯಕ್ಕೆ ಸಂಘದಲ್ಲಿ 1341 ಮಂದಿ ಸದಸ್ಯರು ಇದ್ದು, ರೂ.97,85,600 ಪಾಲು ಬಂಡವಾಳವಿರುತ್ತದೆ. ಸಂಘದ ಸಂಪನ್ಮೂಲವು ವಿವಿಧ ಠೇವಣಿಗಳಿಂದ ಕೂಡಿದ್ದು ಸಂಘದಲ್ಲಿ ಮಾರ್ಚ್ ವಷಾಂತ್ಯಕ್ಕೆ ಉಳಿತಾಯ ಖಾತೆ, ನಿರಖು ಠೇವಣಿ, ಮಾಸಿಕ ಠೇವಣಿ, ನಿರಖು ಠೇವಣಿ(ಸಿ) ಸೇರಿದಂತೆ ಒಟ್ಟು ರೂ.7,39,78,878.17 ಠೇವಣಿಯಿರುತ್ತದೆ. ಸಂಘದ ಮೇಲೆ ವಿಶ್ವಾಸವಿರಿಸಿ ಠೇವಣಿ ಹೂಡಿರುವ ಎಲ್ಲಾ ಠೇವಣಿದಾರರಿಗೆ ಅಧ್ಯಕ್ಷರಾದ ರಾಕೇಶ್ ಮಸ್ಕರೇನ್ಹಸ್‌ರವರು ಅಭಿನಂದನೆ ಸಲ್ಲಿಸುತ್ತಾ ಮುಂದಿನ ಆರ್ಥಿಕ ವರ್ಷದಲ್ಲಿ ಇನ್ನೂ ಹೆಚ್ಚಿನ ಠೇವಣಿಯನ್ನು ತೊಡಗಿಸುವಂತೆ ಅವರು ಸಹಕಾರವನ್ನು ಕೋರಿದರು.
ನಿವ್ವಳ ಲಾಭ ರೂ.11.80 ಲಕ್ಷ, ಶೇ.8 ಡಿವಿಡೆಂಡ್:
ಸAಘವು ಸದಸ್ಯರ ಆರ್ಥಿಕ ಅಭಿವೃದ್ಧಿಗಾಗಿ ಹಲವಾರು ವಿಧದ ಸಾಲಗಳನ್ನು ನೀಡಿದ್ದು, ಈ ಪೈಕಿ ಮಾರ್ಚ್ ವರ್ಷಾಂತ್ಯಕ್ಕೆ ಜಾಮಿನು ಸಾಲ, ತುರ್ತು ಸಾಲ, ವಾಹನ ಈಡಿನ ಸಾಲ, ಆಸ್ತಿ ಅಡವು ಸಾಲ, ಠೇವಣಾತಿ ಸಾಲ, ಆಭರಣ ಸಾಲ ಸೇರಿದಂತೆ ರೂ.5,35,43,220.67 ಹೊರ ಬಾಕಿ ಇರುತ್ತದೆ. ಸಂಘದ 2024-25ನೇ ಸಾಲಿನಲ್ಲಿ ಲೆಕ್ಕಪರಿಶೋಧನೆಯನ್ನು ಲೆಕ್ಕ ಪರಿಶೋಧಕರು ನಡೆಸಿದ್ದು ಸಂಘವು ರೂ.11,80,308.64 ಲಕ್ಷ ನಿವ್ವಳ ಲಾಭ ಗಳಿಸಿರುತ್ತದೆ. ಈ ಬಾರಿ ಸಂಘದ ಸದಸ್ಯರಿಗೆ ಶೇ.8 ಡಿವಿಡೆಂಡ್ ನೀಡಲಾಗುವುದು ಎಂದು ಅಧ್ಯಕ್ಷರಾದ ರಾಕೇಶ್ ಮಸ್ಕರೇನ್ಹಸ್‌ರವರು ಘೋಷಿಸಿದರು.
ಮಾಜಿ ನಿರ್ದೇಶಕರುಗಳಿಗೆ ಗೌರವ:
ಸೊಸೈಟಿಯು ಬೆಳ್ಳಿಹಬ್ಬದ ಸಂಭ್ರಮವನ್ನು ಆಚರಿಸುತ್ತಿದ್ದು, ಕಳೆದ 25 ವರುಷಗಳಿಂದ ಸೊಸೈಟಿಯ ಮಾಜಿ ಹಾಗೂ ಹಾಲಿ ಅಧ್ಯಕ್ಷರಾಗಿ ಹಾಗೂ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ಕಾಸ್ಮಿರ್ ಕುಟಿನ್ಹಾ, ಹಿಲ್ಡಾ ಡಿ’ಸೋಜ, ಜ್ಯೋ ಡಿ’ಸೋಜ, ಜೋನ್ ಕುಟಿನ್ಹಾ, ಅಂಬ್ರೋಸ್ ಮಸ್ಕರೇನ್ಹಸ್, ಚಾರ್ಲ್ಸ್ ಫುಡ್ತಾದೊ, ಜೆರೋಮಿಯಸ್ ಪಾಯಿಸ್, ವಿನ್ಸೆಂಟ್ ತಾವ್ರೋ, ವಿಲ್‌ಪ್ರೆಡ್ ಪಿಂಟೊ, ದಿ.ಜೋಕಿಂ ರೆಬೆಲ್ಲೋರವರ ಪರವಾಗಿ ಅವರ ಪತ್ನಿ ಮೇರಿ ರೆಬೆಲ್ಲೊ, ವಾಲ್ಟರ್ ಡಿ’ಸೋಜ, ಜೇಮ್ಸ್ ಜೆ.ಮಾಡ್ತಾ, ಲ್ಯಾನ್ಸಿ ಲಸ್ರಾದೋ, ಲಾರೆನ್ಸ್ ಗೊನ್ಸಾಲ್ವಿಸ್, ಮ್ಯಾಕ್ಸಿಮ್ ಡಿ’ಸೋಜ, ಫಿಲೋಮಿನಾ ಡಿ’ಸೋಜ, ನೋಯಲ್ ಡಿ’ಸೋಜ, ಲ್ಯಾನ್ಸಿ ಮಸ್ಕರೇನ್ಹಸ್, ದಿ.ಇಗ್ನೀಶಿಯಸ್ ಡಾಯಸ್‌ರವರ ಪರವಾಗಿ ರೋಯ್‌ಸ್ಟನ್ ಡಾಯಸ್, ರೋಶನ್ ಡಾಯಸ್, ಶರೂನ್ ಸಿಕ್ವೇರಾ, ವಿಲ್ಮಾ ಗೊನ್ಸಾಲ್ವಿಸ್, ಸಿಸಿಲಿಯಾ ಲೋಬೊ, ಗಿಲ್ಬರ್ಟ್ ರೊಡ್ರಿಗಸ್, ಅನಿತಾ ಡಿ’ಸೋಜ, ಸಿಸಿಲಿಯಾ ರೆಬೆಲ್ಲೋ, ಪ್ರಕಾಶ್ ಸಿಕ್ವೇರಾ, ಪವನ್ ಮಸ್ಕರೇನ್ಹಸ್, ರೋಯ್‌ಸ್ಟನ್ ಡಾಯಸ್, ರಾಕೇಶ್ ಮಸ್ಕರೇನ್ಹಸ್, ಮೌರಿಸ್ ಮಸ್ಕರೇನ್ಹಸ್, ಲೆಸ್ಟರ್ ಪಿಂಟೋ, ಸಿಲ್ವೆಸ್ಟರ್ ಗೊನ್ಸಾಲ್ವಿಸ್, ಹಿಲ್ಡಾ ಮಿನೇಜಸ್, ಶೈನಿ ಎನ್.ಎಸ್, ವಿಜಯ ಡಿ’ಸೋಜ, ಸುನಿಲ್ ಮಸ್ಕರೇನ್ಹಸ್, ಕಾನೂನು ಸಲಹೆಗಾರರಾದ ಗ್ರೆಗರಿ ಡಿ’ಸೋಜ, ಸಿಲ್ವಿಯಾ ಡಿ’ಸೋಜ, ಆರನ್ ಡಿ’ಸೋಜ, ಶಾಖೆಯ ಸಿಬ್ಬಂದಿಗಳಾದ ಕಾರ್ಯದರ್ಶಿ ಮೇಬಲ್ ಗ್ರೇಸಿ ಮಾಡ್ತಾ, ಲೆಕ್ಕಿಗ ಒಲಿವಿಯಾ ಪ್ರಶಾಂತಿ ರೆಬೆಲ್ಲೋರವರುಗಳಿಗೆ ಬೆಳ್ಳಿಹಬ್ಬದ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಪ್ರೋತ್ಸಾಹಧನ ವಿತರಣೆ:
ಸದಸ್ಯರ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ಕೊಡುವ ನಿಟ್ಟಿನಲ್ಲಿ ಫಲಾನುಭವಿ ಸದಸ್ಯರಾದ ಲಾರೆನ್ಸ್ ಡಿ’ಸೋಜ, ಮೇರಿ ಡಿ’ಸೋಜ, ಡೀನಾ ಸಿಕ್ವೇರಾ, ಅಸುಂಪ್ತ ಮೋನಿಸ್, ಫಿಲೋಮಿನಾ ಸೆರಾವೋ, ಮೇರಿ ಸಾಯನ, ಜೆಸಿಂತಾ ಡಿ’ಸೋಜ, ವಾಲೆಟ್ ಕೊರೆಯಾ, ಜೋಕಿಂ ಗೊನ್ಸಾಲ್ವಿಸ್, ವಿಲ್ಫ್ರೆಡ್ ಡಿ’ಸೋಜ, ಸವಿತಾ ಡಿ’ಸೋಜರವರಿಗೆ ಪ್ರೋತ್ಸಾಹಧನ ವಿತರಿಸಲಾಯಿತು.
ಶ್ರದ್ಧಾಂಜಲಿ:
ಕಳೆದ ಮಹಾಸಭೆಯಿಂದ ಈ ಮಹಾಸಭೆಯವರೆಗೆ ನಿಧನರಾದ ಸಂಘದ ಸದಸ್ಯರಾದ ಫ್ರಾನ್ಸಿಸ್ ಪ್ರವೀಣ್ ಪಿಂಟೊ, ಮೌರಿಸ್ ದಲ್ಮೇದಾ, ಲಿಯೋ ಡಿ’ಸೋಜ, ಅಲೆಕ್ಸ್ ಮಿನೇಜಸ್, ಲೂವಿಸ್ ಮಸ್ಕರೇನ್ಹಸ್, ಮೋಲಿ ಪಿಂಟೊ, ಐಡಾ ಡಾಯಸ್‌ರವರ ಆತ್ಮಕ್ಕೆ ಚಿರಶಾಂತಿ ಕೋರುತ್ತಾ ಒಂದು ನಿಮಿಷದ ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.
ಸೊಸೈಟಿ ಕಾರ್ಯದರ್ಶಿ ಮೇಬಲ್ ಗ್ರೇಸಿ ಮಾಡ್ತಾರವರು ಜಮಾ ಖರ್ಚಿನ ತಖ್ತೆ, ಲಾಭ ನಷ್ಟದ ತಖ್ತೆ, ಲೆಕ್ಕಿಗ ಒಲಿವಿಯಾ ಪ್ರಶಾಂತಿ ರೆಬೆಲ್ಲೋರವರು ಆಸ್ತಿ ಜವಾಬ್ದಾರಿ ತಖ್ತೆ, ಅಂದಾಜು ಆಯ-ವ್ಯಯ ಪಟ್ಟಿ, ಸೊಸೈಟಿಯ ಅಭಿವೃದ್ಧಿ ತಖ್ತೆಯನ್ನು ಓದಿದರು. ನಿರ್ದೇಶಕಿ ಶ್ರೀಮತಿ ಹಿಲ್ಡಾ ಮಿನೇಜಸ್ ಪ್ರಾರ್ಥಿಸಿದರು. ಸೊಸೈಟಿ ಅಧ್ಯಕ್ಷ ರಾಕೇಶ್ ಮಸ್ಕರೇನ್ಹಸ್ ಸ್ವಾಗತಿಸಿ, ನಿರ್ದೇಶಕ ಲೆಸ್ಟರ್ ಪಿಂಟೊ ವಂದಿಸಿದರು. ಉಪಾಧ್ಯಕ್ಷ ಸುನಿಲ್ ಶೈಲೇಶ್ ಮಸ್ಕರೇನ್ಹಸ್ ಸೊಸೈಟಿಯ ಬೆಳ್ಳಿಹಬ್ಬದ ಪಕ್ಷಿನೋಟ ಮಂಡಿಸಿದರು. ನಿರ್ದೇಶಕರಾದ ರೋಯ್ಸ್ಟನ್ ಡಾಯಸ್, ಪವನ್ ಜೋನ್ ಮಸ್ಕರೇನ್ಹಸ್, ವಿಜಯ್ ವಿಲ್ಪ್ರೆಡ್ ಡಿ’ಸೋಜ, ಸಿಲ್ವೆಸ್ಟರ್ ಗೊನ್ಸಾಲ್ವಿಸ್, ಮೌರಿಸ್ ಮಸ್ಕರೇನ್ಹಸ್, ಶ್ರೀಮತಿ ಶೈನಿ ಎನ್.ಎಸ್‌ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಹೋದರತ್ವದ ಸ್ನೇಹಮಯ ಸೇವೆಯೇ ಅಭಿವೃದ್ಧಿ…
ಸಹೋದರತ್ವದ ಸ್ನೇಹಮಯ ಸೇವೆಯೊಂದಿಗೆ ಜೊತೆಗೆ ಕ್ರೈಸ್ತ ಸಮುದಾಯದ ಬೆಳವಣಿಗೆಯ ಉದ್ಧೇಶದೊಂದಿಗೆ ಆರಂಭವಾದ ಈ ಗ್ಲೋರಿಯಾ ಸೊಸೈಟಿಗೆ ಇದೀಗ ಬೆಳ್ಳಿಹಬ್ಬದ ಸಂಭ್ರಮ. ಸೊಸೈಟಿಯಲ್ಲಿನ ಸದಸ್ಯರುಗಳ ಸಹಕಾರವೇ ಸಂಘದ ವ್ಯವಹಾರ ವೃದ್ಧಿಯಾಗಲು ಪ್ರಮುಖ ಕಾರಣವಾಗಿದೆ. ಸಂಘದ ಮೇಲೆ ವಿಶ್ವಾಸವಿಟ್ಟು ಠೇವಣಿ ಇರಿಸಿ ಅಭಿವೃದ್ಧಿಗೆ ಕಾರಣರಾದ ಎಲ್ಲಾ ಠೇವಣಿದಾರರಿಗೂ, ಗ್ರಾಹಕರಿಗೂ ಅಲ್ಲದೆ ಸೂಕ್ತ ಸಮಯದಲ್ಲಿ ಸಾಲ ಮರುಪಾವತಿ ಮಾಡಿ ಸಹಕರಿಸಿದ ಸದಸ್ಯರೆಲ್ಲರಿಗೂ ಕೃತಜ್ಞತೆಗಳು. ಸೊಸೈಟಿಯ ಭವಿಷ್ಯದ ಭದ್ರತೆಯ ಹಿತದೃಷ್ಟಿಯಿಂದ ಕ್ಷೇಮ ನಿಧಿ ಹಾಗೂ ರಿಸರ್ವ್ ಫಂಡ್‌ನಲ್ಲಿ ಹಣವನ್ನು ಮೀಸಲಿಟ್ಟಿದ್ದೇವೆ. ಮುಂದಿನ ವರ್ಷಗಳಲ್ಲಿ ಸದಸ್ಯರಿಗೆ ಹೆಚ್ಚಿನ ಲಾಭಾಂಶವನ್ನು ನೀಡಲು ಸೊಸೈಟಿಯು ಬದ್ಧವಿದ್ದು, ನಿಮ್ಮೆಲ್ಲರ ನಂಬಿಕೆ, ಉತ್ತೇಜನ ಹಾಗೂ ಪ್ರೋತ್ಸಾಹದಿಂದ ಈ ಸಹಕಾರ ಸಂಘವು ಅಭಿವೃದ್ಧಿ ಸಾಧಿಸಬೇಕಾಗಿದೆ ಮಾತ್ರವಲ್ಲದೆ ಇನ್ನೂ ಹೆಚ್ಚಿನ ರೀತಿಯಲ್ಲಿ ಸೇವೆ ಸಲ್ಲಿಸಲು ಈ ಸಹಕಾರಿ ಸಂಘವು ಸದಾ ಸಿದ್ಧವಿದೆ.
-ರಾಕೇಶ್ ಮಸ್ಕರೇನ್ಹಸ್, ಅಧ್ಯಕ್ಷರು, ಗ್ಲೋರಿಯಾ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ