ಪುತ್ತೂರು: ಮಂಗಳೂರಿನ ದೇರಳಕಟ್ಟೆ ನವಾಝ್ ಸಭಾಂಗಣದಲ್ಲಿ ಸೆ.14ರಂದು ಕರ್ನಾಟಕ ರಾಜ್ಯ ಭಾವೈಕ್ಯ ಪರಿಷತ್ ದ.ಕ ಮತ್ತು ಭಾರತೀಯ ಮಾದಕ ದ್ರವ್ಯ ವಿರೋಧಿ ಮಂಡಳಿ ಆಶ್ರಯದಲ್ಲಿ ಜರುಗಿದ ರಾಜ್ಯ ಮಟ್ಟದ ಚುಟುಕು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ, ಕಾರ್ಯಕ್ರಮವನ್ನು ಚಂದಗಾಣಿಸಿಕೊಟ್ಟ ಹಿರಿಯ ಕವಿ, ಪ್ರತಿಭಾರಂಗದ ಅಂಕಣಕಾರ ನಾರಾಯಣ ರೈ ಕುಕ್ಕುವಳ್ಳಿ ಅವರಿಗೆ ಭಾವೈಕ್ಯತಾ ಸಾಹಿತ್ಯ ರತ್ನ-25 ಪುರಸ್ಕಾರ ನೀಡಿ ಅಭಿನಂದಿಸಲಾಯಿತು.
ಕುಕ್ಕುವಳ್ಳಿಯವರ ಹಿರಿಯ ಶಿಷ್ಯ ಸೌದಿ ಅರೇಬಿಯಾದ ಉದ್ಯಮಿ ಹಾಜಿ ಮಹಮ್ಮದ್ ಕುಕ್ಕುವಳ್ಳಿ, ಕರ್ನಾಟಕ ಭಾವೈಕ್ಯತಾ ಪರಿಷತ್ತಿನ ಅಧ್ಯಕ್ಷ, ಮಾದಕತೆ ಮಾರಣಾಂತಿಕ ಕೃತಿ ಕರ್ತೃ, ಇಕ್ಬಾಲ್ ಬಾಳಿಲ, ಚಂದನ ಸಾಹಿತ್ಯ ವೇದಿಕೆಯ ಭೀಮರಾವ್ ವಾಷ್ಠರ್ ಬೆಂಗಳೂರು, ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಬುಬೋಕರ್ ಅನಿಲ್ ಕಟ್ಟೆ, ಪತ್ರಕರ್ತ ಕವಿ ಗುರು ಅಬ್ದುಲ್ ಅಜೀಜ್ ಜೂರಿ ಪುಣಚ, ಹಿರಿಯ ಕವಿ ಡಾ.ಸುರೇಶ ನೆಗಳಗುಳಿ, ಇರ್ಫಾನ್ ಕಾವು ಮೊದಲಾದ ಗಣ್ಯರು ಶಾಲುಹೊದಿಸಿ, ಹಾರಾರ್ಪಣೆಗೈದು, ಸ್ಮರಣಿಕೆ ಪುಸ್ತಕ ಹಾರ ನೀಡಿ ಗೌರವಿಸಿ ಶುಭಹಾರೈಸಿದರು.