ಪುತ್ತೂರು: ಕೃಷಿ ಇಲಾಖೆ ಪುತ್ತೂರು ಇದರ ವತಿಯಿಂದ ಮುಂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಇದರ ಆಶ್ರಯದಲ್ಲಿ 2025-26ರ ಸಾಲಿನ ಬೆಳೆ ಸಮೀಕ್ಷೆ ಕಾರ್ಯಾಗಾರ ಸೆ.17ರಂದು ಬೆಳಿಗ್ಗೆ ಗಂಟೆ 11ಕ್ಕೆ ಮುಂಡೂರು ಪ್ರಾ.ಕೃ.ಪ.ಸ.ಸಂಘದ ಸಭಾಭವನದಲ್ಲಿ ನಡೆಯಲಿದೆ. ಕೃಷಿ ಇಲಾಖೆಯ ತಾಲೂಕು ನಿರ್ದೇಶಕರು, ಮುಂಡೂರು ಗ್ರಾಮ ಆಡಳಿತಾಧಿಕಾರಿ, ಮುಂಡೂರು, ಸರ್ವೆ, ಕೆಮ್ಮಿಂಜೆ ಗ್ರಾಮದ ಎಲ್ಲಾ ಬೆಳೆ ವಿಮೆ ಅಧಿಕೃತ ಸಮೀಕ್ಷೆ ಮಾಡುವವರು ಕಾರ್ಯಾಗಾರದಲ್ಲಿ ಭಾಗವಹಿಸಲಿದ್ದು ಅರ್ಹ ಕೃಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
