ಪುತ್ತೂರು: ಬೀರಮಲೆ ವಿಶ್ವಕರ್ಮ ಸಮಾಜ ಸಭಾ ವತಿಯಿಂದ ಬೀರಮಲೆ ವಿಶ್ವಕರ್ಮ ಮಂದಿರದಲ್ಲಿ ಬ್ರಹ್ಮಶ್ರೀ ನೆಟ್ಟಣಿಗೆ ಮಾಧವ ಶರ್ಮರ ಆಚಾರ್ಯತ್ವದಲ್ಲಿ 63ನೇ ವರ್ಷದ ಶ್ರೀವಿಶ್ವಕರ್ಮ ಪೂಜಾ ಮಹೋತ್ಸವ ಸೆ.16ರಂದು ನಡೆಯಿತು.

ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ, ಗಂಗಾಪೂಜೆ, ಗುರುಗಣಪತಿ ಪೂಜೆ, ವಿಶ್ವಕರ್ಮ ಧ್ವಜಾರೋಹಣ, ನಾಂದಿಮಾತ್ವಿಕಾ ಪೂಜೆ, ಮಂಡಲಾರಾಧನೆ, ಕಲಶಪ್ರತಿಷ್ಠೆ, ದೇವತಾ ಆವಾಹನಾದಿ ಪೂಜೆಗಳು, ಗಣಪತಿ ಹೋಮ, ನವಗ್ರಹ ಹೋಮ, ಪಂಚಬ್ರಹ್ಮ ಹೋಮ, ವಿಶ್ವಕರ್ಮ ಹೋಮಾದಿಗಳು, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆಯಾಗಿ ಅನ್ನಸಂತರ್ಪಣೆ ನಡೆಯಿತು. ಅಪರಾಹ್ನ ಸಾಂಸ್ಕೃತಿಕ ವೈಭವ, ಸಂಜೆ ಭಜನೆ, ರಾತ್ರಿ ಕಲಶ ವಿಸರ್ಜನೆ ಕಾರ್ಯಕ್ರಮ ನಡೆಯಿತು.
ವಿಶ್ವಕರ್ಮ ಸಮಾಜ ಸಭಾದ ಗೌರವಾಧ್ಯಕ್ಷ ನಲ್ಕ ಗೋಪಾಲಕೃಷ್ಣ ಆಚಾರ್ಯ ಕೆಮ್ಮಾಯಿ, ಅಧ್ಯಕ್ಷ ಎ. ಗಂಗಾಧರ ಆಚಾರ್ಯ ಅಡ್ವಾಯಿ, ಕಾರ್ಯದರ್ಶಿ ಕೆ. ಲಕ್ಷ್ಮೀನಾರಾಯಣ ಆಚಾರ್ಯ ಬನ್ನೂರು, ಉಪಾಧ್ಯಕ್ಷರುಗಳಾದ ಎಂ.ಆರ್.ಹರೀಶ್ ಆಚಾರ್ಯ ಬೀರಮಲೆ, ಕೆ. ಮುರಳೀಧರ ಆಚಾರ್ಯ ಗುಡ್ಡೆಮನೆ, ಜತೆ ಕಾರ್ಯದರ್ಶಿ ಕೆ.ಜಯಪ್ರಕಾಶ್ ಆಚಾರ್ಯ ನೆಲ್ಲಿಕಟ್ಟೆ, ಕೋಶಾಧಿಕಾರಿ ಕೆ. ನಿರಂಜನ ಆಚಾರ್ಯ ಮರೀಲು ಹಾಗೂ ಸದಸ್ಯರು, ಬೀರಮಲೆ ಶ್ರೀವಿಶ್ವಕರ್ಮ ಯುವಕ ಮಂಡಲ ಮತ್ತು ಶ್ರೀಗಾಯತ್ರಿ ಮಹಿಳಾ ಮಂಡಳಿಯ ಪದಾಧಿಕಾರಿಗಳು, ಸದಸ್ಯರು, ಸಮಾಜ ಬಾಂಧವರು ಉಪಸ್ಥಿತರಿದ್ದರು.