ನೆಲ್ಯಾಡಿ : ಜೇಸಿಐ ಆಲಂಕಾರು ಘಟಕದಲ್ಲಿ ಜೇಸಿ ಸಪ್ತಾಹ 2025ರ ಸಮಾರೋಪ ಸಮಾರಂಭ, ಸಾಧಕರಿಗೆ ಸನ್ಮಾನ ಹಾಗೂ ಜೇಸಿಐ ಸದಸ್ಯರ ಕುಟುಂಬ ಸಮ್ಮಿಲನ ಕಾರ್ಯಕ್ರಮವು ಅಲೆಪ್ಪಾಡಿಯ ಜಯಲಕ್ಷ್ಮಿ ನಿಲಯದಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಜೇಸಿಐ ಭಾರತದ ವಲಯ 15 ರ ಪೂರ್ವ ವಲಯಾಧ್ಯಕ್ಷ ಪುರುಷೋತ್ತಮ ಶೆಟ್ಟಿ,ವಲಯ 15ರ ಆಡಳಿತ ವಿಭಾಗದ ನಿರ್ದೇಶಕ ಅಜಿತ್ ಕುಮಾರ್ ರೈ ಹಾಗೂ ಜೇಸಿಐ ಉಪ್ಪಿನಂಗಡಿ ಚಾರಿಟೇಬಲ್ ಟ್ರಸ್ಟಿನ ಸ್ಥಾಪಕಾಧ್ಯಕ್ಷ ಪ್ರಶಾಂತ್ ಕುಮಾರ್ ರೈ ಭಾಗವಹಿಸಿದ್ದರು.ವಿವಿಧ ಕ್ಷೇತ್ರದ ಸಾಧಕರನ್ನು ಸಮಾರಂಭಲ್ಲಿ ಸನ್ಮಾನಿಸಿ ಗೌರವಿಸಲಾಯಿತು.ಕೃಷಿ ಕ್ಷೇತ್ರದಲ್ಲಿ ಪ್ರಗತಿಪರ ಕೃಷಿಕ ಶಾಂತರಾಮ ರೈ ಕುಂತೂರುಗುತ್ತು,ವ್ಯವಹಾರ ಕ್ಷೇತ್ರದಲ್ಲಿ ಉದ್ಯಮಿ ಉಮೇಶ್ ಗೌಡ ಕುಂಡಾಜೆ,ಶಿಕ್ಷಣ ಕ್ಷೇತ್ರದಲ್ಲಿ 2025-26ನೇ ಸಾಲಿನ ರಾಜ್ಯ ಪ್ರಶಸ್ತಿ ಪುರಸ್ಕೃತ ಅತ್ಯುತ್ತಮ ಶಿಕ್ಷಕ ಸತೀಶ್ ಭಟ್ ಬಿಳಿನೆಲೆ ಇವರನ್ನು ಘಟಕದ ವತಿಯಿಂದ ಸನ್ಮಾನಿಸಲಾಯಿತು.

ಕಮಲಪತ್ರ ಪ್ರಶಸ್ತಿ
ಜೇಸಿಐ ಆಲಂಕಾರು ಘಟಕದಿಂದ ಪ್ರತಿವರ್ಷ ಕೊಡಲ್ಪಡುವ ಕಮಲಪತ್ರ ಪ್ರಶಸ್ತಿಯನ್ನು ಘಟಕದ ಪೂರ್ವಾಧ್ಯಕ್ಷ, ವಲಯ 15ರ ಪೂರ್ವ ವಲಯ ಉಪಾಧ್ಯಕ್ಷ, ವಲಯ ತರಬೇತುದಾರ ಜೇಸಿ ಅಜಿತ್ ಕುಮಾರ್ ರೈ ಇವರಿಗೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಆತಿಥ್ಯವನ್ನು ವಹಿಸಿದ್ದ ಘಟಕದ ಪೂರ್ವಾಧ್ಯಕ್ಷ ಲಕ್ಷ್ಮೀನಾರಾಯಣ ಅಲೆಪ್ಪಾಡಿ ಹಾಗೂ ಸದಸ್ಯೆ ಜಯಶ್ರೀ ಅಲೆಪ್ಪಾಡಿಯವರನ್ನು ಘಟಕದ ವತಿಯಿಂದ ಅಭಿನಂದಿಸಲಾಯಿತು.ಜೇಸಿ ಪುರಂದರ ಜೇಸಿವಾಣಿ ವಾಚಿಸಿದರು,ಜೇಸಿ ಹೇಮಲತಾ ಪ್ರದೀಪ್ ಅತಿಥಿಗಳ ಪರಿಚಯ ಮಾಡಿದರು,ಜೇಸಿ ಗುರುಕಿರಣ್ ಶೆಟ್ಟಿ,ಜೇಸಿ ಧನ್ಯಶ್ರೀ ರೈ ಸನ್ಮಾನಿತರನ್ನು ಪರಿಚಯಿಸಿದರು.ಜೇಸಿ ಸಪ್ತಾಹದ ನಿರ್ದೇಶಕ ಜೇಸಿ ಜನಾರ್ದನ್ ಸಪ್ತಾಹದ ವರದಿಯನ್ನು ವಾಚಿಸಿದರು.ಜೇಸಿಐ ಆಲಂಕಾರು ಘಟಕದ ಅಧ್ಯಕ್ಷ ಜೇಸಿ ಗುರುರಾಜ್ ರೈ ಸ್ವಾಗತಿಸಿ,ಕಾರ್ಯದರ್ಶಿ ಮಹೇಶ್ ಪಾಟಾಳಿ ವಂದಿಸಿದರು.ಜೇಸಿ ಗಣೇಶ್ ಕಟ್ಟಪುಣಿ, ಜೇಸಿ ರಾಧಾಕೃಷ್ಣ ಆನ ಹಾಗೂ ಮತ್ತಿತರರು ಸಹಕರಿಸಿದರು.ಕಾರ್ಯಕ್ರಮದಲ್ಲಿ ಜೇಸಿಐ ಆಲಂಕಾರು ಘಟಕದ ನಿಕಟಪೂರ್ವಾಧ್ಯಕ್ಷೆ ಜೇಸಿ ಮಮತಾ ಅಂಬರಾಜೆ,ಮಹಿಳಾ ಜೇಸಿ ಅಧ್ಯಕ್ಷೆ ಜೇಸಿ ಸುನೀತಾ ಜಿ ರೈ,ಜೆಜೇಸಿ ಅಧ್ಯಕ್ಷೆ ಕೃತಿ ಕೆ.ಎಸ್,ಘಟಕದ ಪೂರ್ವಾಧ್ಯಕ್ಷರುಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.